
ಮುಂಬೈ: ಮುಂಬೈಯಿಂದ ನಾಪತ್ತೆಯಾಗಿರುವ ಮೂವರು ಯುವಕರು ಇಸ್ಲಾಮಿಕ್ ಸ್ಟೇಟ್ ಸೇರಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ.
ಅಯಾಜ್ ಸುಲ್ತಾನ್ (23), ಮೊಹ್ಸಿನ್ ಶೇಖ್ (26) ಮತ್ತು ವಾಜಿದ್ ಶೇಖ್ (25) ಎಂಬ ಮೂವರು ನಾಪತ್ತೆಯಾಗಿದ್ದಾರೆ. ಈ ಮೂವರೂ ಮಾಲ್ವಾನಿ ಪ್ರದೇಶದ ನಿವಾಸಿಗಳಾಗಿದ್ದಾರೆ.
ನಾಪತ್ತೆಯಾಗಿರುವ ಯುವಕರು ಐಎಸ್ ಸೇರಿರುವ ಶಂಕೆ ಇದ್ದು ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮಲ್ವಾನಿ ಪೊಲೀಸ್ ಠಾಣೆಯ ಹಿರಿಯ ಇನ್ಸ್ಪೆಕ್ಟರ್ ಮಿಲಿಂದ್ ಖೇಟ್ಲೆ ಹೇಳಿದ್ದಾರೆ.