
ಲಾಸ್ ವೇಗಾಸ್: 2015ರ ಭುವನ ಸುಂದರಿ ಸ್ಪರ್ಧೆಯ ಅಂತಿಮ ಹಣಾಹಣಿಯಲ್ಲಿ ಭುವನ ಸುಂದರಿಯಾಗಿ ಆಯ್ಕೆಯಾದವರ ಹೆಸರನ್ನು ಘೋಷಿಸುವಾಗ ದೊಡ್ಡ ಎಡವಟ್ಟು ಮಾಡಿಕೊಂಡಿದ್ದ ಕಾರ್ಯಕ್ರಮದ ನಿರೂಪಕ ಸ್ಟೀವ್ ಹಾರ್ವೆ ಟ್ವಿಟರ್ ಮೂಲಕ ಕ್ಷಮೆಯಾಚಿಸಿದ್ದಾರೆ.
ಭುವನ ಸುಂದರಿ ಕಿರೀಟಕ್ಕಾಗಿ ಅಮೆರಿಕಾ, ಕೊಲಂಬಿಯಾ, ರಷ್ಯಾ, ಭಾರತ, ಆಫ್ರಿಕಾ ಸೇರಿದಂತೆ ಸುಮಾರು 80 ದೇಶಗಳ ಸುಂದರಿಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಅಂತಿಮವಾಗಿ ಸ್ಪರ್ಧೆಯಲ್ಲಿ ಫಿಲಿಪ್ಪೀನ್ಸ್ ಸುಂದರಿ ಪಿಯಾ ಅಲೋಂಜೋ ಭವನ ಸುಂದರಿಯಾಗಿ ಆಯ್ಕೆಯಾಗಿದ್ದರು. ಆದರೆ ಹೆಸರು ಘೋಷಿಸುವಾಗ ಆಕಸ್ಮಿಕವಾಗಿ ಕೊಲಂಬಿಯಾದ ಗ್ಯುಟಿರ್ರೆಝಾ ಮಿಸ್ ಯೂನಿವರ್ಸ್ ಎಂದು ಘೋಷಿಸಿ ವೇದಿಕೆಯಲ್ಲಿ ಕಿರೀಟ ತೊಡಿಸಿಯೇ ಬಿಟ್ಟಿದ್ದರು.
ತಕ್ಷಣವೇ ಎಚ್ಚೆತ್ತುಕೊಂಡ ಸ್ಟೀವ್ ಗೆ ತಾನು ತಪ್ಪು ಹೆಸರನ್ನು ಘೋಷಿಸಿದ್ದು ಅರಿವಿಗೆ ಬಂದಿತು…ನಂತರ ಮಾಜಿ ಭುವನ ಸುಂದರಿ ಪೌಲಿನಾ ವೇಗಾ ಮಿಸ್ ಯೂನಿವರ್ಸ್ ಎಂದು ಬರೆದಿರುವ ಬಣ್ಣದ ರಿಬ್ಬನ್ ತಗೊಂಡು ನಿಜವಾದ ವಿನ್ನರ್ ಪಿಯಾ ಅಲೋಂಜೋಗೆ ಮಿಸ್ ಯೂನಿವರ್ಸ್ ಕಿರೀಟವನ್ನು ತೊಡಿಸಿದರು.