ಮುಂಬೈ

’13 ವರ್ಷ ಕಾದರೂ ನ್ಯಾಯ ಸಿಗಲಿಲ್ಲ,ಪರಿಹಾರವೂ ದೊರೆಯಲಿಲ್ಲ’

Pinterest LinkedIn Tumblr

sallufi

ಮುಂಬೈ, ಡಿ.11-ನಟ ಸಲ್ಮಾನ್‌ಖಾನ್ ಕಾನೂನಿನ ಪ್ರಕಾರ ನಿರ್ದೋಷಿ ಎಂದು ಬಿಡುಗಡೆಯಾಗಿದ್ದರೂ ಕೂಡ  ಈ 13 ವರ್ಷಗಳ ಕಾಲ ನ್ಯಾಯಕ್ಕಾಗಿ ಕಾದು ಕುಳಿತಿದ್ದಕ್ಕಾಗಿ ಸಿಕ್ಕ ಪ್ರತಿಫಲ ಏನು?
ಹೀಗೆ ನ್ಯಾಯಾಲಯದಲ್ಲೇ ಆವರಣದಲ್ಲಿ ಮಾಧ್ಯಮದವರಿಗೆ ಪ್ರಶ್ನಿಸಿದ್ದು, ಘಟನೆಯಲ್ಲಿ ಕಾಲು ಮುರಿದುಕೊಂಡು ಈಗಲೂ ಕುಂಟುತ್ತಲೇ ಜೀವನ ನಡೆಸುತ್ತಿರುವ ಅಬ್ದುಲ್ಲಾ. ನಾನು ಬಹಳ ಕಾದೆ ಆದರೆ ಈವರೆಗೂ ನ್ಯಾಯ ಸಿಕ್ಕಿಲ್ಲ, ಪರಿಹಾರವೂ ದೊರೆತಿಲ್ಲ. ನನ್ನ ಮಕ್ಕಳ ಊಟಕ್ಕೂ ಗತಿಯಿಲ್ಲದಂತಹ ಪರಿಸ್ಥಿತಿ ಎಂದು ಅಳಲುತೋಡಿಕೊಂಡಿದ್ದಾರೆ. ನನ್ನ ಮಕ್ಕಳು ಇನ್ನೂ ಚಿಕ್ಕವರಿದ್ದಾರೆ. ಅವರಿಗೆ ಶಿಕ್ಷಣ ಕೊಡಿಸಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ರೂಪಿಸಬೇಕೆಂಬ ನನ್ನ ಕನಸು ನುಚ್ಚುನೂರಾಗಿದೆ. ಮುಂದೆ  ಪರಿಹಾರ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದಾನೆ ಎಂದು ಅಬ್ದುಲ್ಲಾ ಹೇಳಿದ್ದಾರೆ.

ಆದರೆ ನೀವು ಸಲ್ಮಾನ್‌ಖಾನ್ ವಾಹನ ಚಾಲನೆ ಮಾಡುತ್ತಿದ್ದುದನ್ನು ನೋಡಿದ್ದೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ನಾನು ಪ್ರತ್ಯಕ್ಷವಾಗಿ ನೋಡಿಲ್ಲ. ಅಂದು ನನ್ನ ಪಕ್ಕದಲ್ಲೇ ಮಲಗಿದ್ದವರು ಅಪಘಾತದ ನಂತರ ಸಲ್ಮಾನ್ ಕಾರಿನಲ್ಲಿದ್ದುದನ್ನು ನೋಡಿದ್ದರು ಎಂದು ಹೇಳಿದ್ದಾರೆ.  ಘಟನೆಯಲ್ಲಿ ಇದೇ ರಿತಿ ಕಾಲು ಕಳೆದುಕೊಂಡಿದ್ದ ಅಬ್ದುಲ್ ಶೇಖ್ ಕೂಡ ನಮಗೆ ಪರಿಹಾರ ಸಿಗಬೇಕು. ನಟನಿಗೆ ಸಿಗುವ ಸಂಭಾವನೆಯಲ್ಲೂ ನಮಗೂ ಜೀವನಾಂಶ ಕೊಡಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ.  ಈಗಾಗಲೇ ಭದ್ರತೆ ರೂಪದಲ್ಲಿ ಸಲ್ಮಾನ್‌ಖಾನ್ ಅವರು 19 ಲಕ್ಷ ರೂ.ಗಳನ್ನು  ಕಟ್ಟಿದ್ದು, ಶೀಘ್ರವೇ ಪರಿಹಾರ ಹಂಚಿಕೆಯಾಗುವ ಸಾಧ್ಯತೆ ಇದೆ.

Write A Comment