ಮನೋರಂಜನೆ

ನಾನು ಲಕ್ಷಾಂತರ ಭಾರತೀಯರ ವಕ್ತಾರ: ಅನುಪಮ್ ಖೇರ್

Pinterest LinkedIn Tumblr

anupam-kher

ಮುಂಬೈ: ಸಾಮಾಜಿಕ ಅಂತರ್ಜಾಲದಲ್ಲಿ ಸದಾ ಗಟ್ಟಿಯಾಗಿ ಧ್ವನಿ ಎತ್ತುವ ಹಾಗೂ ಅಸಹಿಷ್ಣುತೆ ಚರ್ಚೆಯಲ್ಲಿ ಆಳುವ ಸರ್ಕಾರದ ಪರ ನಿಂತಿರುವ ಬಾಲಿವುಡ್ ನಟ ಅನುಪಮ್ ಖೇರ್ ‘ಭಾರತವೇ ಅತ್ಯುತ್ತಮ’ ಎಂದು ನಂಬುವ ಲಕ್ಷಾಂತರ ಭಾರತೀಯರ ವಕ್ತಾರ ನಾನು ಎಂದು ಹೇಳಿಕೊಂಡಿದ್ದಾರೆ.

“ಏನೇ ತೊಂದರಗಳಿದ್ದರೂ ಪೂರ್ವವಾಗಲೀ ಪಶ್ಚಿಮವಾಗಲೀ ಭಾರತವೇ ಅತ್ಯುತ್ತಮ ಎಂದು ನಂಬುವವರಿಗೆ ನಾನು ವಕ್ತಾರ” ಎಂದು ಟ್ವಿಟ್ಟರ್ ನಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಚರ್ಚಿಸುವಾಗ ಬರೆದುಕೊಂಡಿದ್ದಾರೆ.

ತಮ್ಮ ಪತ್ನಿ, ನಟಿ ಮತ್ತು ರಾಜಕಾರಿಣಿ ಕಿರಣ್ ಖೇರ್ ಅವರ ಹಾದಿಯನ್ನು ತುಳಿಯುವ ಯಾವುದೇ ಯೋಜನೆಗೆಳಿವೆಯೇ ಎಂದು ಕೂಡ ಅಭಿಮಾನಿಗಳು ಖೇರ್ ಅವರನ್ನು ಪ್ರಶ್ನಿಸಿದ್ದಾರೆ.

“ಇಲ್ಲವೇ ಇಲ್ಲ. ನನಗೆ ನಟನಾಗಿ, ಅಧ್ಯಾಪಕನಾಗಿ ಮತ್ತು ಪ್ರೇರೇಪಿಸುವ ಭಾಷಣಕಾರನಾಗಿರಲು ಇಷ್ಟ” ಎಂದು ‘ಶೌಕೀನ್ಸ್’ ನಟ ಹೇಳಿದ್ದಾರೆ.

ಸಲ್ಮಾನ್ ಖಾನ್ ನಟನೆಯ ‘ಪ್ರೇಮ್ ರತನ್ ಧನ ಪಾಯೋ’ದಲ್ಲಿ ನಟ ಇತ್ತೀಚಿಗೆ ಕಾಣಿಸಿಕೊಂಡಿದ್ದರು. ಈಗ ನೀರಜ್ ಪಾಂಡೆ ಅವರ ‘ಎಂ ಎಸ್ ಧೋನಿ: ದ ಅನ್ ಟೋಲ್ಡ್ ಸ್ಟೋರಿ’ ಯಲ್ಲಿ ಎಂ ಎಸ್ ಧೋನಿ ಅವರ ತಂದೆ ಪಾನ್ ಸಿಂಗ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Write A Comment