ಮುಂಬೈ

ಶೀನಾ ಬೋರಾ ಹತ್ಯೆ: ಸಿಬಿಐನಿಂದ ಪೀಟರ್ ಮುಖರ್ಜಿ ಬಂಧನ

Pinterest LinkedIn Tumblr

Peter-Mukherjea-indraniಮುಂಬೈ: ದೇಶದಲ್ಲಿ ಸಂಚಲನ ಮೂಡಿಸಿದ್ದ ಶೀನಾ ಬೋರಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮ ಉದ್ಯಮಿ ಪೀಟರ್ ಮುಖರ್ಜಿ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.

ಪೀಟರ್ ಮುಖರ್ಜಿ ಶೀನಾ ಬೋರಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶೀನಾ ತಾಯಿ ಇಂದ್ರಾಣಿ ಮುಖರ್ಜಿ ಅವರ ಪತಿಯಾಗಿದ್ದಾರೆ.

ಇದಕ್ಕೂ ಮುನ್ನ ಶೀನಾ ಬೋರಾ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿತ್ತು. ಸಿಬಿಐ 100 ಪುಟಗಳ ಚಾರ್ಜ್‌ಶೀಟನ್ನು ಮುಂಬೈನ ಇಸ್‌ಪ್ಲಾನಡೆ ಕೋರ್ಟ್‌ಗೆ ಸಲ್ಲಿಸಿದೆ. ಚಾರ್ಜ್ ಶೀಟ್ ನಲ್ಲಿ ಶೀನಾ ಬೋರಾ ತಾಯಿ ಇಂದ್ರಾಣಿ ಮುಖರ್ಜಿ ಹಾಗೂ ಆಕೆಯ ಮಾಜಿ ಪತಿ ಸಂಜೀವ್ ಖನ್ನಾ, ಚಾಲಕ ಶ್ಯಾಮ್ ರೈನನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿ ಮಾಡಲಾಗಿದೆ.

2012ರ ಏಪ್ರಿಲ್ ನಲ್ಲಿ ಕಣ್ಮರೆಯಾಗಿದ್ದ ಶೀನಾ ಬೋರಾಳ ಮುಂಬೈನ ರಾಯ್ ಗಢದ ಅರಣ್ಯದಲ್ಲಿ ಪತ್ತೆಯಾಗಿತ್ತು. ತಾಯಿ-ಮಗಳ ಮಧ್ಯೆ ಹಣಕಾಸಿನ ಭಿನ್ನಾಭಿಪ್ರಾಯದಿಂದ ಇಂದ್ರಾಣಿ ಶೀನಾ ಬೋರಾಳನ್ನು ಹತ್ಯೆ ಮಾಡಿರಬಹುದು ಎಂದು ಮೇಲ್ನೋಟಕ್ಕೆ ಕಂಡುಬಂದಿದೆ.

Write A Comment