ಅಂತರಾಷ್ಟ್ರೀಯ

ಗರ್ಲ್ ಫ್ರೆಂಡ್ ಸಂಸ್ಕೃತಿ ಇಸ್ಲಾಂಗೆ ವಿರುದ್ಧ: ಪಾಕ್ ಸುಪ್ರೀಂ

Pinterest LinkedIn Tumblr

girlfriendಪೇಶಾವರ: ಗರ್ಲ್ ಫ್ರೆಂಡ್ ಸಂಸ್ಕೃತಿಯು ಇಸ್ಲಾಂಗೆ ವಿರುದ್ಧ ಎಂದು ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ವ್ಯಕ್ತಿಯೊಬ್ಬ ತನ್ನ ಗರ್ಲ್ ಫ್ರೆಂಡ್ ಹೆಸರಿನಲ್ಲಿ ಫೇಸ್ಬುಕ್ ಖಾತೆ ತೆರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಸುಪ್ರೀಂಕೋರ್ಟ್ ನ ಇಬ್ಬರು ನ್ಯಾಯಮೂರ್ತಿಗಳು ಈ ಅಭಿಪ್ರಾಯಪಟ್ಟಿದ್ದಾರೆ. ಗರ್ಲ್ ಫ್ರೆಂಡ್ ಎಂಬುದು ಪಾಶ್ಚಿಮಾತ್ಯ ಸಂಸ್ಕೃತಿ ಅದು ಇಸ್ಲಾಂ ವಿರೋಧಿ ಎಂದು ಹೇಳಿದ್ದು, ಆರೋಪಿಗೆ ಜಾಮೀನು ನಿರಾಕರಿಸಿದ್ದಾರೆ.

ಖೈಬರ್ ಪ್ರಾಂತ್ಯದ ಹರೀಪುರ್ ಜಿಲ್ಲೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿರುವ ಮುನೀರ್ ಎಂಬಾತ ತನ್ನ ಗೆಳತಿ ಶಗುಫ್ತಾಳ ಹೆಸರಲ್ಲಿ ಖಾತೆ ತೆರೆದು ಫೋಟೋಗಳನ್ನು ಅಪ್ ಡೇಟ್ ಮಾಡುತ್ತಿದ್ದ ಆರೋಪ ಎದುರಿಸುತ್ತಿದ್ದಾನೆ.

ತನ್ನ ಹೆಸರಲ್ಲಿ ಫೇಸ್ ಬುಕ್ ತೆರೆದು ಫೋಟೋಗಳನ್ನು ಅಪ್ ಡೇಟ್ ಮಾಡುತ್ತಿದ್ದ ಮುನೀರ್ ಕೃತ್ಯವನ್ನು ಶಗುಫ್ತಾ ಆಕ್ಷೇಪಿಸಿ ದೂರು ದಾಖಲಿಸಿರುತ್ತಾಳೆ. ಸಮ್ಮತಿ ಇಲ್ಲದೇ ತನ್ನ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆಯಲಾಗಿದೆ ಎಂದು ಆ ಹುಡುಗಿ ತನ್ನ ದೂರಿನಲ್ಲಿ ತಿಳಿಸಿರುತ್ತಾಳೆ. ಫೇಸ್ಬುಕ್’ನಲ್ಲಿ ಮಹಿಳೆಗೆ ಮಾನಸಿಕ ಹಿಂಸೆ ನೀಡಿದ ಆರೋಪದ ಮೇಲೆ ಫೆಡರಲ್ ಇನ್ವೆಸ್ಟಿಗೇಟಿಂಗ್ ಏಜೆನ್ಸಿ ಸಂಸ್ಥೆ ಆರೋಪಿ ಮುನೀರ್ ನನ್ನು ಬಂಧಿಸಿತು.

ಮುನೀರ್ ಗೆಳತಿ ಶಗುಫ್ತಾಳ ಒಪ್ಪಿಗೆ ಪಡೆದು ಆಕೆಯ ಫೇಸ್ಬುಕ್ ಪ್ರೊಫೈಲ್ ಕ್ರಿಯೇಟ್ ಮಾಡಿ ಫೋಟೋಗಳನ್ನ ಅಪ್’ಡೇಟ್ ಮಾಡುತ್ತಿದ್ದ ಎಂದು ಆತನ ಪರ ವಕೀಲರು ಹೇಳುತ್ತಿದ್ದಾರೆ.

Write A Comment