ಮುಂಬೈ

ಉಗ್ರರಿಂದ ಪಾರಾಗಿ ಪ್ಯಾರಿಸ್‍ನಿಂದ ವಾಪಸ್ಸಾದ ಪವನ್ ಕಲ್ಯಾಣ್ ಮಾಜಿ ಪತ್ನಿ

Pinterest LinkedIn Tumblr

pawan-renu-desaiಮುಂಬೈ: ಐಸಿಸ್ ಉಗ್ರರ ಅಟ್ಟಹಾಸಕ್ಕೆ ಪ್ಯಾರಿಸ್ ಕಂಪಿಸಿದೆ. 6 ಪ್ರದೇಶಗಳಲ್ಲಿ ಬಾಂಬ್ ಸ್ಫೋಟ ನಡೆದು, ನೂರಾರು ಜನ ಸತ್ತಿದ್ದಾಗಿದೆ.

ಪ್ಯಾರಿಸ್‍ನಲ್ಲಿದ್ದ ಪವನ್ ಕಲ್ಯಾಣ್‍ನ ಮಾಜಿ ಪತ್ನಿ ರೇಣು ದೇಸಾಯಿ ಸುರಕ್ಷಿತವಾಗಿ ಭಾರತಕ್ಕೆ ವಾಪಸಾಗಿದ್ದಾರೆ. `ನಾನು ಸುರಕ್ಷಿತವಾಗಿದ್ದೇನೆ. ಈಗಷ್ಟೇ ಮುಂಬೈಗೆ ಬಂದು ಇಳಿದೆ’ ಎಂದು ರೂಪದರ್ಶಿ ರೇಣು ಟ್ವೀಟಿಸಿದ್ದಾರೆ. ಆದರೆ, ಇದಕ್ಕೆ ಪವನ್ ಕಲ್ಯಾಣ್ ಇಲ್ಲಿಯ ತನಕ ರೀಟ್ವೀಟ್ ಮಾಡಿಲ್ಲ. ಇವರಿಬ್ಬರೂ 3 ವರುಷ ದಾಂಪತ್ಯ ನಡೆಸಿ, ಡೈವೋರ್ಸ್ ಕೊಟ್ಟುಕೊಂಡಿದ್ದರು.

ಅಂದಹಾಗೆ, ಕೆಲವೇ ದಿನಗಳ ಹಿಂದೆ ಆದಿತ್ಯ ಚೋಪ್ರಾ ಕೂಡ ಪ್ಯಾರಿಸ್‍ನಲ್ಲಿ ಶೂಟಿಂಗ್‍ನಲ್ಲಿದ್ದರು. `ದೀಪಾವಳಿಗೆಂದು ಭಾರತಕ್ಕೆ ವಾಪಸಾಗಿ ಬಚಾವಾದೆ’ ಎಂದಿದ್ದರು ಆದಿತ್ಯ.

Write A Comment