ಮನೋರಂಜನೆ

ಶೀತಲ್ ಇಚ್ಛೆಯಂತೆ ಉತ್ತಪ್ಪ ಮದ್ವೆ

Pinterest LinkedIn Tumblr

Uthappa-wife-Sheethalಒಬ್ಬೊಬ್ಬರೇ ಕ್ರಿಕೆಟಿಗರು ಮದ್ವೆ ಮೈದಾನಕ್ಕೆ ಕಾಲಿಡುತ್ತಿದ್ದಾರೆ. ಸ್ಫೋಟಕ ಬ್ಯಾಟ್ಸ್ ಮನ್, ಕನ್ನಡಿಗ ರಾಬಿನ್ ಉತ್ತಪ್ಪ ಕೂಡ ಮೊನ್ನೆ ಎಂಗೇಜ್‍ಮೆಂಟ್ ಮುಗಿಸಿಕೊಂಡಿದ್ದು, ಟ್ವಿಟರ್ ಮೂಲಕ ಸುದ್ದಿ ಆಯಿತು. ಟೆನಿಸ್ ತಾರೆ ಶೀತಲ್ ಗೌತಮ್, ಉತ್ತಪ್ಪ ಅವರ ಕೈಹಿಡಿಯುತ್ತಿದ್ದಾರೆ.

ಇವರ ಮದ್ವೆ ಮುಂದಿನ ವರುಷದ ಮಾರ್ಚ್‍ನಲ್ಲಿ ನಡೆಯಲಿದೆಯಂತೆ. ಆದ್ರೆ, ಮದ್ವೆ ಹೇಗಿಬೇಕೆಂಬ ಕಲ್ಪನೆಯನ್ನು ರಾಬಿನ್ ಉತ್ತಪ್ಪ ಇಟ್ಟುಕೊಂಡಿಲ್ವಂತೆ. ಅದನ್ನು ಭಾವಿಪತ್ನಿ ಶೀತಲ್ ಅವರಿಗೆ ಹೊಣೆ ಹೊರೆಸಿಬಿಟ್ಟಿದ್ದಾರೆ. `ಮದ್ವೆ ಹೇಗಿರಬೇಕೆಂಬ ಕನಸು ಹುಡುಗಿಯರಿಗೆ ಯಾವಾಗಲೂ ಇರುತ್ತೆ. ಹೀಗಾಗಿ ಶೀತಲ್ ಹೇಗೇ ಇಚ್ಛಿಸುತ್ತಾರೋ ಹಾಗೆಯೇ ಮದ್ವೆ ನಡೆಯುತ್ತೆ. ನಾವಿಬ್ಬರೂ ಬೇರೆಬೇರೆ ಮನೆತನದಿಂದ ಬಂದವರು. ಎರಡೂ ಸಂಪ್ರದಾಯದಂತೆ ಮದ್ವೆ ನಡೆಯಬಹುದು.

ಬಹುಶಃ ಬೆಂಗಳೂರಿನಲ್ಲಿ ವಿವಾಹ ಕಾರ್ಯಕ್ರಮ ನಡೆಯುತ್ತೆ’ ಎಂದಿದ್ದಾರೆ ಉತ್ತಪ್ಪ. ಅಂದಹಾಗೆ, ಶೀತಲ್ ಕಾಲೇಜಿನ ಗೆಳತಿಯಂತೆ. ಉತ್ತಪನಿಗಿಂತ ಸೀನಿಯರ್! 6 ವರುಷದಿಂದ ಗೆಳೆತನ ಬೆಳೆದಿದೆ.

Write A Comment