ಅಂತರಾಷ್ಟ್ರೀಯ

ರಷ್ಯಾ ವಿಮಾನ ಸ್ಫೋಟಿಸಿದ ಉಗ್ರರ ನಿರ್ನಾಮ ಮಾಡುತ್ತೇವೆ: ವ್ಲಾಡಿಮಿರ್ ಪುಟಿನ್

Pinterest LinkedIn Tumblr

Vladimir-Putinಮಾಸ್ಕೋ: ಅಕ್ಟೋಬರ್ 31ರಂದು ಈಜಿಪ್ಟ್​ನ ಸಿನಾಯ್ ಪ್ರಾಂತ್ಯದಲ್ಲಿ ರಷ್ಯಾ ಪ್ರಯಾಣಿಕರ ವಿಮಾನ ಪತನಗೊಳ್ಳಲು ವಿಮಾನದಲ್ಲಿ ಇರಿಸಲಾಗಿದ್ದ ಬಾಂಬ್ ಕಾರಣ ಎಂದು ರಷ್ಯಾದ ಎಫ್​ಎಸ್​ಬಿ ಸೆಕ್ಯುರಿಟಿ ಸರ್ವಿಸ್​ನ ಮುಖ್ಯಸ್ಥ ಅಲೆಕ್ಸಾಂಡರ್ ಬ್ರೋತ್ನಿಕೋವ್ ತಿಳಿಸಿದ್ದಾರೆ.

ವಿಮಾನದಲ್ಲಿ ಸುಮಾರು 1 ಕೆ.ಜಿ. ತೂಕದ ಟಿಎನ್ ಟಿ ಯಿಂದ ಮಾಡಿದ ಕಚ್ಚಾ ಬಾಂಬ್ ಇರಿಸಲಾಗಿದ್ದು, ಈ ಬಾಂಬ್ ಸ್ಫೋಟದಿಂದ ವಿಮಾನ ಆಕಾಶದಲ್ಲೇ ಸ್ಫೋಟಗೊಂಡು ನೆಲಕ್ಕೆ ಅಪ್ಪಳಿಸಿದೆ. ಇದರಿಂದಾಗಿ ವಿಮಾನದ ಅವಶೇಷಗಳು ಹಲವು ಕಿ.ಮೀ. ವ್ಯಾಪ್ತಿಯಲ್ಲಿ ಚದುರಿ ಬಿದ್ದಿವೆ. ಇದೊಂದು ಭಯೋತ್ಪಾದಕ ಕೃತ್ಯ ಎಂದು ಸಾಬೀತಾಗಿದೆ ಎಂದು ಭದ್ರತಾ ಮುಖ್ಯಸ್ಥ ಅಲೆಕ್ಸಾಂಡರ್ ಹೇಳಿದ್ದಾರೆ.

ಅಕ್ಟೋಬರ್ 31ರಂದು ಸಿನಾಯ್ ಪ್ರಾಂತ್ಯದಲ್ಲಿ ರಷ್ಯಾದ ವಿಮಾನ ಸ್ಫೋಟಗೊಂಡಿತ್ತು. ವಿಮಾನದಲ್ಲಿ 224 ಪ್ರಯಾಣಿಕರಿದ್ದರು. ವಿಮಾನ ಪತನಕ್ಕೆ ತಾವೇ ಕಾರಣ ಎಂದು ಐಸಿಸ್ ಉಗ್ರರು ಹೊಣೆ ಹೊತ್ತುಕೊಂಡಿದ್ದರು.

ರಷ್ಯಾ ವಿಮಾನ ಸ್ಫೋಟಿಸಿದ ಉಗ್ರರ ನಿರ್ನಾಮ ಮಾಡುತ್ತೇವೆ: ವ್ಲಾಡಿಮಿರ್ ಪುಟಿನ್
ರಷ್ಯಾ ವಿಮಾನ ಸ್ಫೋಟಿಸಿ 224 ಅಮಾನಕರ ಸಾವಿಗೆ ಕಾರಣವಾದವರನ್ನು ರಷ್ಯಾದ ಯೋಧರು ಹುಡುಕಿ ನಿರ್ನಾಮ ಮಾಡಲಿದ್ದಾರೆ. ಭೂಮಿಯ ಯಾವುದೇ ಮೂಲೆಯಲ್ಲಿ ಅವರು ಅಡಗಿದ್ದರೂ ಸಹ ಅವರನ್ನು ಹುಡುಕಿ ಶಿಕ್ಷೆ ನೀಡಲಾಗುವುದು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಿಳಿಸಿದ್ದಾರೆ.

ವಿಮಾನ ಪತನದ ಸಂಚಿನ ಮಾಸ್ಟರ್ ಮೈಂಡ್​ಗಳ ಸುಳಿವು ನೀಡಿದವರಿಗೆ 50 ಮಿಲಿಯನ್ ಅಮೆರಿಕನ್ ಡಾಲರ್ (330 ಕೋಟಿ ರೂ.) ಬಹುಮಾನ ನೀಡುವುದಾಗಿ ರಷ್ಯಾ ಘೋಷಿಸಿದೆ.

Write A Comment