ಮುಂಬೈ

ಷೇರುಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದ ಬಿಹಾರ ಚುನಾವಣಾ ಫಲಿತಾಂಶ

Pinterest LinkedIn Tumblr

BSE_Sensex

ಮುಂಬೈ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಭಾರಿ ಮುಖಭಂಗ ಅನುಭವಿಸಿದ ಬೆನ್ನಲ್ಲೇ ಅದರ ಪರಿಣಾಮ ಭಾರತೀಯ ಷೇರುಮಾರುಕಟ್ಟೆ ಮೇಲೆ ಬೀರಿದ್ದು, 600 ಅಂಕಗಳಷ್ಟು ಕುಸಿತಕಂಡಿದೆ.

ಇಂದು ಬೆಳಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆಯೇ ಬಿಎಸ್ಇ ಸೆನ್ಸೆಕ್ಸ್ ಪತನದತ್ತ ಮುಖಮಾಡಿತು. ದಿನದ ಆರಂಭದಲ್ಲೇ ಬಿಎನ್‌ಎಸ್‌ ಸುಮಾರು 470 ಅಂಕಗಳ ಕುಸಿತ ದಾಖಲಿಸಿ ತನ್ನ ವಹಿವಾಟು ಆರಂಭಿಸಿದ್ದು, ಹೂಡಿಕೆದಾರರಲ್ಲಿ ಆಂತಕ ಮೂಡಿಸಿತು. ಪರಿಣಾಮ 11 ಗಂಟೆಯ ವೇಳೆಗೇ ಭಾರತೀಯ ಷೇರುಮಾರುಕಟ್ಟೆ 600 ಅಂಕಗಳಷ್ಟು ಕುಸಿತ ಕಂಡಿದೆ. ಆ ಮೂಲಕ 26, 000 ಅಂಕಗಳಿಗೆ ಸ್ಥಿರವಾಗಿದೆ.

ನಿಫ್ಟಿ ಕೂಡ ಕುಸಿತಕಂಡಿದ್ದು, 50 ಅಂಕಗಳಷ್ಟು ಪತನಗೊಳ್ಳುವ ಮೂಲಕ 7, 800ಕ್ಕೆ ಸ್ಥಿರವಾಗಿದೆ. ಇದೇ ವೇಳೆ ರುಪಾಯಿ ಮೌಲ್ಯದಲ್ಲಿಯೂ ಕೂಡ ಅಲ್ಪ ಕಡಿತ ಕಂಡಬಂದಿದ್ದು, 66.50ಕ್ಕೆ ರುಪಾಯಿ ಮೌಲ್ಯ ಕಡಿತವಾಗಿದೆ.

Write A Comment