ರಾಷ್ಟ್ರೀಯ

ಮತ್ತೆ ಮಾರುಕಟ್ಟೆಗೆ ಲಗ್ಗೆ ಇಟ್ಟ ಮ್ಯಾಗಿ !

Pinterest LinkedIn Tumblr

maggi

ನವದೆಹಲಿ: ಮ್ಯಾಗಿಯಲ್ಲಿ ವಿಷಕಾರಕ ಅಂಶವಿದೆ ಎಂದು ಹೇಳಿ ಆಹಾರ ಮತ್ತು ಸುರಕ್ಷಾ ಆಡಳಿತ ಮಂಡಳಿ ವಿಧಿಸಿದ್ದ ನಿಷೇಧ ಶಿಕ್ಷೆಯನ್ನು ಅನುಭವಿಸಿದ್ದ ಮ್ಯಾಗಿ ಮತ್ತೆ ಸೋಮವಾರ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಎಂದು ವರದಿಗಳು ತಿಳಿಸಿವೆ.

ಎನ್ಎಬಿಎಲ್ ಮಾನ್ಯತೆ ಪಡೆದ ಲ್ಯಾಬ್ ಗಳು ಮ್ಯಾಗಿ ಸೇವನೆಗೆ ಯೋಗ್ಯ ಎಂದು ಪ್ರಮಾಣ ಪತ್ರ ನೀಡಿದ ಹಿನ್ನೆಲೆಯಲ್ಲಿ ಹೊಸ ಮ್ಯಾಗಿ ಈ ತಿಂಗಳ ಒಳಗಾಗಿ ಗ್ರಾಹಕರ ಕೈ ಸೇರಲಿದೆ ಎಂದು ನೆಸ್ಲೆ ಕಂಪನಿ ಕಳೆದ ವಾರ ತಿಳಿಸಿತ್ತು.

ಇದರಂತೆ ಮ್ಯಾಗಿ ನೂಡಲ್ಸ್ ಇಂದು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಇಂದಿನಿಂದ ಮ್ಯಾಗಿ ನೂಡಲ್ಸ್ ಗ್ರಾಹಕರಿಗೆ ಸರಿಯಾದ ರೀತಿಯಲ್ಲಿ ತಲುಪಲಿದೆ. ಅಲ್ಲದೆ, ಹಿಂದಿನ ರುಚಿಯನ್ನೇ ಮತ್ತೆ ಮರಳಿಸುವಲ್ಲಿ ನಾವು ಸಫಲರಾಗಿದ್ದೇವೆಂಬ ನಂಬಿಕೆಯಿದೆ ಎಂದು ನೆಸ್ಲೆ ಇಂಡಿಯಾದ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕರು ಹೇಳಿದ್ದಾರೆ.

ನೆಸ್ಲೆ ಇಂಡಿಯಾ ಮ್ಯಾಗಿ ನೂಡಲ್ಸ್ ಗ್ರಾಹಕರಿಗೆ ತಲುಪಿಸುವಲ್ಲಿ ಇದೀಗ ಸ್ನಾಪ್ ಡೀಲ್ ಜೊತೆ ಕೈ ಜೊಡಿಸಿದ್ದು, ಆನ್ ಲೈನ್ ಮಾರಾಟಕ್ಕೂ ವೇದಿಕೆಯೊದಗಿಸಿಕೊಟ್ಟಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಬಹುತೇಕ ರಾಜ್ಯಗಳಲ್ಲಿ ಮ್ಯಾಗಿ ನೂಡಲ್ಸ್ ಗೆ ನಿಷೇಧ ಹೇರಿಲ್ಲ. ಯಾವ ರಾಜ್ಯದಲ್ಲಿ ನಿರ್ದಿಷ್ಟ ಸೂಚನೆಯ ಅಗತ್ಯವಿದೆಯೋ, ಅಲ್ಲಿ ನಮ್ಮ ಪ್ರಕ್ರಿಯೆ ಮುಂದುವರೆದಿದೆ. ಪ್ರಸ್ತುತ ಭಾರತದಲ್ಲಿ ನೆಸ್ಲೆ ಕಂಪನಿ ಕರ್ನಾಟಕದ ನಂಜನಗೂಡು, ಪಂಜಾಬಿನ ಮೋಗಾ, ಗೋವಾದ ಬಿಚೋಲಿಮ್ ನಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿದ್ದು, ಈಗಾಗಲೇ ಮ್ಯಾಗಿ ಉತ್ಪಾದನೆಯನ್ನು ಆರಂಭ ಮಾಡಲಾಗಿದೆ ಎಂದು ನೆಸ್ಲೆ ಇಂಡಿಯಾ ಪ್ರಕಟಣೆಯೊಂದರಲ್ಲಿ ಹೇಳಿಕೊಂಡಿದೆ.

Write A Comment