ಮುಂಬೈ

ರಾಷ್ಟ್ರೀಯ ಪ್ರಶಸ್ತಿ ಹಿಂದಿರುಗಿಸುವುದು ಸರಿಯಲ್ಲ: ಹೇಮಾ ಮಾಲಿನಿ

Pinterest LinkedIn Tumblr

hemaಮುಂಬೈ: ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯನ್ನು ವಿರೋಧಿಸಿ ಚಿತ್ರ ನಿರ್ಮಾಪಕರು ತಮ್ಮ ರಾಷ್ಟ್ರೀಯ ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಿರುವುದು ಸರಿಯಲ್ಲ ಎಂದು ನಟಿ ಹಾಗೂ ರಾಜಕಾರಣಿ ಹೇಮಾ ಮಾಲಿನಿ ಅವರು ಗುರುವಾರ ಹೇಳಿದ್ದಾರೆ.

‘ಪ್ರಶಸ್ತಿ ಹಿಂದಿರುಗಿಸುವುದು ಒಳ್ಳೆಯ ವಿಚಾರ ಅಲ್ಲ. ಇದೊಂದು ರಾಜಕೀಯ ಪ್ರೇರಿತ ಅಂತ ಅನಿಸುತ್ತಿದೆ. ರಾಷ್ಟ್ರೀಯ ಪ್ರಶಸ್ತಿ ಪಡೆಯಲು ಜನ ಸಾಯುತ್ತಿದ್ದಾರೆ… ಅದೊಂದು ರಾಷ್ಟ್ರೀಯ ಗೌರವ. ರಾಷ್ಟ್ರೀಯ ಪ್ರಶಸ್ತಿ ಪಡೆಯಲು ಸಹಾಯ ಮಾಡಿ ಅಂತ ಎಷ್ಟೋ ಜನ ನನ್ನನ್ನು ಕೇಳಿದ್ದಾರೆ. ಆದರೆ ಈ ಇವರೆಲ್ಲಾ ತಮ್ಮ ಪ್ರಶಸ್ತಿಗಳನ್ನು ವಾಪಸ್ ನೀಡುತ್ತಿದ್ದಾರೆ’ ಎಂದು ಬಿಜೆಪಿ ಸಂಸದೆ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಕಳೆದ ತಿಂಗಳು ಚಿತ್ರ ನಿರ್ಮಾಕರಾದ ದಿಬಾಕರ್ ಬ್ಯಾನರ್ಜಿ, ಆನಂದ್ ಪಟ್ವರ್ಧನ್ ಪರೇಶ್ ಕಮ್ದಾರ್ ಹಾಗೂ ಬಾಲಿವುಡ್ ನಟರಾದ ಅನಿಲ್ ಕಪೂರ್, ವಿದ್ಯಾ ಬಾಲನ್, ಅನುಪಮ್ ಕೇರ್ ಸೇರಿದಂತೆ 12ಕ್ಕೂ ಹೆಚ್ಚು ಚಿತ್ರ ನಿರ್ಮಾಪಕರು ತಮ್ಮ ಪ್ರಶಸ್ತಿ ಹಿಂದಿರುಗಿಸುವುದಾಗಿ ಹೇಳಿದ್ದರು.

Write A Comment