ರಾಷ್ಟ್ರೀಯ

ಮಂಗಳನ ಅಂಗಳದಲ್ಲಿ ಅನ್ಯಗ್ರಹ ಜೀವಿ ಪತ್ತೆ?

Pinterest LinkedIn Tumblr

alien_marsನವದೆಹಲಿ: ಮಂಗಳ ಗ್ರಹದಲ್ಲಿ ಅನ್ಯಜೀವಿಗಳು ಇವೆಯೇ? ಎಂಬ ಪ್ರಶ್ನೆಗೆ ವಿಜ್ಞಾನಿಗಳು ಇದೆ ಎಂದು ಉತ್ತರಿಸುತ್ತಿದ್ದಾರೆ. ಇದಕ್ಕೆ ಬಲವಾದ ಕಾರಣವೂ ಇದೆ.

ಇತ್ತೀಚೆಗೆ ನಾಸಾದ ಕ್ಯೂರಿಯಾಸಿಟಿ ರೋವರ್ ಮಂಗಳ ಅಂಗಳದಿಂದ ಫೋಟೋ ಕಳಿಸಿಕೊಟ್ಟಿದ್ದು, ಅದರಲ್ಲಿ ಕಲ್ಲಿನ ಗುಹೆಯೊಂದರಿಂದ ಇಣುಕಿ ನೋಡುತ್ತಿರುವ ಅನ್ಯಗ್ರಹ ಜೀವಿ ಸೆರೆಯಾಗಿದೆ.

ಕಲ್ಲಿನ ಪುಟ್ಟ ಗುಹೆಯೊಂದರಿಂದ ಪಿಂಕ್ ಅಥವಾ ಕೆಂಪು ಮುಖದ ಆಕಾರರವೊಂದು ರೋವರ್‌ನ್ನೇ ನೋಡುತ್ತಿರುವ ಚಿತ್ರ ಸಿಕ್ಕಿರುವುದರಿಂದ ಅಲ್ಲಿ ಜೀವಿಗಳ ವಾಸವಿದೆ ಎಂದು ಹೇಳಬಹುದು ಅಂತಾರೆ ವಿಜ್ಞಾನಿಗಳು.

ಮಂಗಳನ ಅಂಗಳದಿಂದ ರೋವರ್ ಕಳಿಸಿಕೊಟ್ಟ ಚಿತ್ರಗಳಲ್ಲಿ ಮಹಿಳೆಯೊಬ್ಬಳ ಆಕೃತಿ, ತೇಲುವ ಚಮಚ, ನೀರು ಮತ್ತು ಬುದ್ಧನ ವಿಗ್ರಹ ಮೊದಲಾದ ಆಕಾರಗಳು ಪತ್ತೆಯಾಗಿದ್ದವು.

Write A Comment