ಮುಂಬೈ

ಪತಿ, ಬಾಯ್‌ಫ್ರೆಂಡ್‌ನೊಂದಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದ ಮಹಿಳೆಯ ಹತ್ಯೆ

Pinterest LinkedIn Tumblr

mahileಮುಂಬೈ: ವಿಚಿತ್ರ ಪ್ರಕರಣವೊಂದರಲ್ಲಿ 38 ವರ್ಷ ವಯಸ್ಸಿನ ಪ್ರಿಯಕರನೊಬ್ಬ, ಮಹಿಳೆ ಮತ್ತು ಆಕೆಯ ಪುತ್ರನನ್ನು ಹತ್ಯೆ ಮಾಡಿ (ನಲಾಸೋಪರಾ ಪೂರ್ವ) ಪೊಲೀಸ್ ಚೌಕಿ ಠಾಣೆಗೆ ಶರಣಾದ ಘಟನೆ ವರದಿಯಾಗಿದೆ.

ಕಾರ್ನಿವಾಲ್ ಸಿನೆಮಾ ಹಿಂದಿರುವ ವಾಸೈ ಪೂರ್ವದಲ್ಲಿದ್ದ  ಸಾಯಿ ಲೀಲಾ ಅಪಾರ್ಟ್‌ಮೆಂಟ್‌‌ನಲ್ಲಿರುವ ಹೌಸಿಂಗ್ ಕಾಂಪ್ಲೆಕ್ಸ್‌‌ನಲ್ಲಿ ಘಟನೆ ನಡೆದಿದ್ದು, ಅದೇ ಅಪಾರ್ಟ್‌ಮೆಂಟ್‌ನಲ್ಲಿ ಮಹಿಳೆ ತನ್ನ ಬಾಯ್‌ಫ್ರೆಂಡ್, ಪತಿ ಮತ್ತು ಮೂವರು ಮಕ್ಕಳೊಂದಿಗೆ ವಾಸಿಸುತ್ತಿದ್ದರು ಎನ್ನಲಾಗಿದೆ.

ಹತ್ಯೆಯಾದ 31 ವರ್ಷ ವಯಸ್ಸಿನ ಸೋನಾಲಿ ಚೌಹಾನ್ ಮತ್ತು ಆಕೆಯ 12 ವರ್ಷ ವಯಸ್ಸಿನ ಪುತ್ರ ಕುನಾಲ್ ರಕ್ತದ ಮಡುವಿನಲ್ಲಿ ಬಿದ್ದಿರುವ ಬಗ್ಗೆ ಆರೋಪಿ ,ಬಾಯ್‌ಫ್ರೆಂಡ್ ಕಿರಣ್ ಮಕ್ವಾನಾ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಮಕ್ವಾನಾ ಮತ್ತು ಸೋನಾಲಿ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿ ವಾಸಿಸುತ್ತಿದ್ದರು. ಸೋನಾಲಿ ಪತಿ 29 ವರ್ಷ ವಯಸ್ಸಿನ ರಾಜ್‌ಕುಮಾರ್ ಚೌಹಾನ್ ರೆಡಿಯೋಲಾಜಿಸ್ಟ್ ವೃತ್ತಿಯಲ್ಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹತ್ಯೆಯಾದ ಸೋನಾಲಿ ತಡರಾತ್ರಿ ಮನೆಗೆ ಬಂದಾಗ ಕಾರಣ ಕೇಳಿದ ಬಾಯ್‌ಫ್ರೆಂಡ್ ಮಕ್ವಾನಾ, ಕೋಪದ ಭರದಲ್ಲಿ ಚಾಕುವಿನಿಂದ ಆಕೆಯ ಮೇಲೆ ದಾಳಿ ಮಾಡಿ ಹತ್ಯೆಗೈದಿದ್ದಾನೆ. ನಂತರ ಅದನ್ನು ತಡೆಯಲು ಬಂದ ಆಕೆಯ ಪುತ್ರ ಕುನಾಲ್‌ನನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ಕಿರನ್ ಮಕ್ವಾನಾ ವಿರುದ್ಧ ಜೋಡಿ ಹತ್ಯೆ ಪ್ರಕರಣ ದಾಖಲಿಸಲಾಗಿದ್ದು, ಹತ್ಯೆಯಾದ ಮಹಿಳೆಯ ಪತಿ ಮತ್ತು ಆಕೆಯ ಮಕ್ಕಳ ಹೇಳಿಕೆ ಕೂಡಾ ಪಡೆಯಲಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಕೃಷ್ಣ ಕೋಕಾಟೆ ತಿಳಿಸಿದ್ದಾರೆ.

Write A Comment