ಮುಂಬಯಿ: ಅ 18: ಕಾಂದಿವಲಿ ಪಸ್ಚಿಮ ಚಾರ್ಕೋಪ್ ಪರಿಸರದ ಕನ್ನಡಿಗರ ಪ್ರತಿಸ್ಟಿತ ಸಂಸ್ಥೆ ಚಾರ್‌ಕೋಪ್‌ಕನ್ನಡಿಗರ ಬಳಗ, ಕಾಂದಿವಲಿ ಇದರ 16ನೇ ವಾರ್ಷಿಕೋತ್ಸವ ಹಾಗೂ ಶಾರದಾ ಪೂಜೆಯು ಅ. 18 ರಂದು ಕಾಂದಿವಲಿ ಪಶ್ಚಿಮದ ಸೆಕ್ಟರ್ ೬ರ ಹರ್ಯಾಣ ಭವನದಲ್ಲಿ ಜರಗಿತು.
ಸಂಸದ ಹಾಗೂ ಬಳಗದ ಗೌರವ ಅಧ್ಯಕ್ಷ ಗೋಪಾಲ್ ಸಿ. ಶೆಟ್ಟಿಯವರು ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಾ ಮನುಷ್ಯ ಬದುಕಿನಲ್ಲಿ ಮಾನವೀಯತೆ ಮುಖ್ಯ. ನಾನು ರಾಜಕೀಯ ನಾಯಕನಾಗುವ ಮೊದಲು ನನ್ನದೇ ಹಲವು ಕಾರ್ಯಕ್ರಮಗಳಿಗೆ ಗಣ್ಯರನ್ನು ಆಹ್ವಾನಿಸುತ್ತಿದ್ದು ಆ ಸಂಧರ್ಭದಲ್ಲಿ ಅವರು ಬಾರದೇ ಇದ್ದಾಗ ಮನ ನೋವ್ವಾಗುತ್ತಿದ್ದು. ಈ ನೋವನ್ನೆಲ್ಲಾ ಗಮನದಲ್ಲಿರಿಸಿಕೊಂಡು ನನ್ನನ್ನು ಆಹ್ವಾನಿಸಿದ ಎಲ್ಲಾ ಕಾರ್ಯಕ್ರಮಗಳಿಗೆ ನಾನು ತಪ್ಪದೇ ಬಾಗವಹಿಸುತ್ತೇನೆ. ಸಭಾಕಾರ್ಯಕ್ರಮಗಳಲ್ಲಿ ಹೆಚ್ಚು ಸಮಯ ಕೊಡಲಾಗದಿರುದಕ್ಕೆ ಕ್ಷಮೆ ಯಾಚಿಸುತ್ತಾ ಕಡಿಮೆ ಸಮಯದಲ್ಲಿ ಹೆಚ್ಚು ಸಮಾಜಸೇವೆಯನ್ನು ಮಾಡುವ ಪದ್ದತಿಯನ್ನು ಬೆಳೆಸಬೇಕು. ನಗರದ ಬಹುತೇಕ ಸಂಘ ಸಂಸ್ಥೆಗಳು ಸರಕಾರ ಮಾಡುತ್ತಿರುವ ಕೆಲಸಕ್ಕಿಂತ ಅಧಿಕ ಕೆಲಸ ಮಾಡಿತ್ತಿದ್ದು ದೇಶದ ಅಭಿವೃದ್ಧಿಯಲ್ಲಿ ಸಂಘಟನೆಗಳು ಮುಖ್ಯ ಭಾಗಿಗಳಾಗಬೇಕು ಎಂದು ನುಡಿದರು.
ಈ ಸಂಧರ್ಭದಲ್ಲಿ ಅಡ್ಯಾರು ನಾಡಿಗುತ್ತು ತಿಮ್ಮಪ್ಪ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿಯನ್ನು ಕರುಣಾಕರ ಎಸ್. ಶೆಟ್ಟಿ ಅವರಿಗೆ ಕೆ.ಕೆ. ಸುವರ್ಣ ಸ್ಮಾರಕ ಪ್ರಶಸ್ಥಿಯನ್ನು ಖ್ಯಾತ ಕೊಂಕಣಿ ಕಲಾವಿದ ಕಮಲಾಕ್ಷ ಸರಾಫ್ ರಿಗೆ, ಹಾಗೂ ಶ್ರೀಮತಿ ಭಾರತಿ ಕೊಡ್ಲೆಕರ್ ಸ್ಮರಣಾರ್ಥ ಪ್ರಶಸ್ತಿಯನ್ನು ಹಿರಿಯ ರಂಗ ನಟಿ, ಸುಜಾತ ಪಿ. ಅಳ್ವ ಅವರಿಗೆ ನೀಡಿ ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಮಾತನಾಡಿದ ಕಮಲಾಕ್ಷ ಸರಾಫ್ ಅವರು ನಾನು ನನ್ನ ಒಂಬತ್ತರ ಹರೆಯದಲ್ಲಿ ರಂಗಭೂಮಿ ಪ್ರವೇಶಿಸಿದ್ದು ಇದೀಗ ನನ್ನ ಜೀವನದಲ್ಲಿ ಪ್ರಥವಾಗಿ ಪ್ರಶಸ್ತಿ ಲಭಿಸಿದೆ. ಕಲಾವಿದರು ರಾಷ್ಟ್ರದ ಸಂಪತ್ತು ಆಗಿದ್ದುಇಂತಹ ಸಂಘಟನೆಗಳು ಕಲಾವಿದರಿಗೆ ಸದಾ ಪ್ರೋತ್ಸಾಹಿಸಲಿ ಎಂದರು.
ಮಲಾಡ್ ಕನ್ನಡ ಸಂಘದ ಅಧ್ಯಕ್ಷ ಹರೀಶ್ ಶೆಟ್ಟಿ, ದಹಿಸರ್ ಕನ್ನಡ ಸಂಘದ ನಿಟ್ಟೆ ಮುದ್ದಣ್ಣ ಶೆಟ್ಟಿ, ಕಾಂದಿವಲಿ ಕನ್ನಡ ಸಂಘದ ಪೊಲ್ಯ ಜಯಪಾಲ ಶೆಟ್ಟಿ ಪರವಾಗಿ ಪ್ರೇಮನಾಥ್ ಕೋಟ್ಯಾನ್ ಅವರನ್ನು ಗೌರವಿಸಲಾಯಿತು. ನಿಟ್ಟೆ ಮುದ್ದಣ್ಣ ಶೆಟ್ಟಿಯವರು ಮಾತನಾಡುತ್ತಾ ಈ ಸನ್ಮಾನವು ನಮಗೆ ನಮ್ಮ ಜವಾಬ್ಧಾರಿಯನ್ನು ಹೆಚ್ಚಿಸಿದ್ದು ಅದನ್ನು ವ್ಯವಸ್ತಿತವಾಗಿ ನಿರ್ವಹಿಸಲು ಕಾರಣವಾಗಿದೆ. ಎಂದರು.
ಸಾಧಕರುಗಳಾದ ಮೊಗವೀರ ಬ್ಯಾಂಕಿನ ನಿರ್ದೇಶಕ ಗೋಪಾಲ ಆರ್ ಪುತ್ರನ್, ಬಂಟರ ಸಂಘ ಮುಂಬಯಿ ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ವಿಜಯ ಆರ್. ಭಂಡಾರಿ, ಬಿಲ್ಲವರ ಅಸೋಷಿಯೇಷನ್ ಕಾಂದಿವಲಿ ಸ್ಥಳೀಯ ಸಮಿತಿಯ ಕಾರ್ಯಧ್ಯಕ್ಷ ಯೋಗೇಶ್ ಹೆಜ್ಮಾಡಿ, ಬಂಟರ ಸಂಘ ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿನೋದಾ ಡಿ. ಶೆಟ್ಟಿ, ಮೊಗವೀರ ಬ್ಯಾಂಕಿನ ನಿರ್ದೇಶಕಿ ಶೀಲ ಇಂದುಕುಮಾರ್ ಅಮೀನ್, ಮೊಗವೀರ ಬ್ಯಾಂಕಿನ ನಿರ್ದೇಶಕ ಧರ್ಮಪಾಲ್ ಪಿ. ಇವರನ್ನು ಅಭಿನಂದಿಸಲಾಯಿತು. ಸನ್ಮಾನಕ್ಕೆ ಉತ್ತರಿಸಿದ ವಿನೋದಾ ಡಿ. ಶೆಟ್ಟಿ ಯವರು ಬಳಗವು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಇನ್ನು ಮುಂದೆಯೂ ಇಂತಹ ಕೆಲಸಗಳನ್ನು ಮಾಡಲು ಶಾರದಾ ಮಾತೆಯು ಅನುಗ್ರಹಿಸಲಿ ಎಂದರು.
ಸಮಾರಂಭದ ಮುಖ್ಯ ಅತಿಥಿಯಾಗಿ ಬಂಟರ ಸಂಘ ಮುಂಬಯಿ ಪಸ್ಛಿಮ ವಲಯದ ಸ್ಥಳೀಯ ಸಮಿತಿಯ ಸಮನ್ವಯಕ ಮುಂಡಪ್ಪ ಪಯ್ಯಡೆ ಅವರು ಉಪಸ್ಥಿತರಿದ್ದು ಕನ್ನಡ ನಾಡಲ್ಲಿ ಹುಟ್ಟಿ ಬೆಳೆದು ಇಲ್ಲಿಗಾಗಮಿಸಿ ಪರಿಶ್ರಮದಿಂದ ಜೀವನ ನಡೆಸುತ್ತಿರುವ ನಮಗೆ ಕನ್ನಡಮ್ಮ ಹಾಗೂ ಮರಾಠಿ ಮಾತೆ ಎರಡು ತಾಯಂದಿರು. ಹದಿನಾರನೇ ವರ್ಷದಲ್ಲಿರುವ ಚಾರ್‌ಕೋಪ್‌ಕನ್ನಡಿಗರ ಬಳಗಕ್ಕೆ ಇದು ಮಹತ್ತರವಾದ ಸಮಯ ಎನ್ನುತ್ತಾ ಹದಿನಾರರ ಮಹತ್ವವನ್ನು ವಿವರಿಸಿದರು.
ಗೌರವ ಅತಿಥಿಗಳಾಗಿ ಆಗಮಿಸಿದ ಎಲ್. ಡಿ. ಎಸ್. ಇಂಪೊಟೆಕ್ ನ ಸಿ.ಎಂ.ಡಿ. ಅಮರ್ ನಾಥ ಶೆಟ್ಟಿಯವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಇಂದು ಕನ್ನಡಿಗರ ಈ ಕಾರ್ಯಕ್ರಮವು ಹರ್ಯಾಣ ಭವನದಲ್ಲಿ ಜರಗುತ್ತಿದ್ದು ಮುಂದೆ ಇದು ಚಾರ್ಕೋಪ್ ಕನ್ನಡಿಗರ ಭವನದಲ್ಲಿ ಜರಗುವಂತಾಗಲಿ ಎಂದು ಶುಭ ಹಾರೈಸಿದರು.
ಕುಲಾಲ ಸಂಘ, ಮುಂಬಯಿಯ ಅಧ್ಯಕ್ಷ ಗಿರೀಶ್ ಬಿ. ಸಾಲ್ಯಾನ್ ಪರಿಸರದ ಇತರ ಸಂಘಟನೆಗಳ ಜತೆಗೆ ಕಾರ್ಯಕ್ರಮಗಳನ್ನು ನಡೆಸುದರೊಂದಿಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪರಿವಾರ ಸಮೇತ ಕನ್ನಡಿಗರನ್ನು ಒಟ್ಟುಗೂಡಿಸಿದಂತಾಗುವುದಲ್ಲದೆ ಮನೆಯಲ್ಲಿ ಕಲಿಯಬಹುದಾದ ಹಲವಾರು ಕಾರ್ಯಗಳನ್ನು ಬಳಗವು ಹಮ್ಮಿಕೊಂಡಿರುವುದು ಅಭಿನಂದನೀಯವಾಗಿದೆ ಎಂದರು.
ಇನ್ನೋರ್ವ ಗೌರವ ಅತಿಥಿ ಜೆ. ಬಿ. ಅದ್ವಾನಿ ಸಂಸ್ಥೆಯ ಹಿರಿಯ ಮಹಾ ಪ್ರಭಂಧಕ ಶ್ರೀನಿವಾಸ ಪಿ. ಸಾಫಲ್ಯರು ನವರಾತ್ರಿಯ ಮಹತ್ವವನ್ನು ವ್ಯಕ್ತಪಡಿಸುತ್ತಾ ಕನ್ನಡಿಗರ ಬೆಳವಣಿಗೆಗೆ ಈ ಸಂಸ್ಥೆಯು ನೀಡುತ್ತಿರುವ ಪ್ರೋತ್ಸಾಹಕ್ಕೆ ಅಭಿನಂದನೆ ಸಲ್ಲಿಸಿದರು.
ಬಂಟರ ಸಂಘ ಮುಂಬಯಿ ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ವಿಜಯ ಆರ್. ಭಂಡಾರಿ, ಮಾಜಿ ಅಧ್ಯಕ್ಷ ಭಾಸ್ಕರ ಸರಪಾಡಿಯವರು ಮಾತನಾಡಿದರು.
ಬಳಗದ ಅಧ್ಯಕ್ಷ ಮಂಜುನಾಥ ಜಿ. ಬನ್ನೂರು ಅವರು ಅಧ್ಯಕ್ಷತೆ ವಹಿಸಿ ಸದಸ್ಯರನ್ನುದ್ದೇಶಿಸಿ ಮಾತನಾಡುತ್ತಾ ನಿಮ್ಮೆಲ್ಲರ ಆಶೀರ್ವಾದ ಹಾಗೂ ಪೋತ್ಸಾಹದಿಂದ ನಮ್ಮ ಬಳಗದ ಇಂತಹ ವಾರ್ಷಿಕ ಸಮಾರಂಭವು ನಮ್ಮ ಸ್ವಂಥ ಸಭಾಗೃಹದಲ್ಲೇ ನಡೆಯುವಂತಾಗಲಿ, ಇಂದಿನ ಎಲ್ಲಾ ಅತಿಥಿಗಳ ಮಾರ್ಗದರ್ಶನದಂತೆ ನಿಮ್ಮೆಲ್ಲರ ಸಹಕಾರದೊಂದಿಗೆ ಚಾರ್‌ಕೋಪ್ ಕನ್ನಡಿಗರ ಬಳಗವು ಕನ್ನಡಿಗರ ಸೇವೆಯಲ್ಲಿ ಇನ್ನಷ್ಟು ಕ್ರೀಯಾಶೀಲವಾಗುವುದು. ಎಂದರು.
ಬಳಗದ ಟ್ರಸ್ಟಿಗಳಾದ ಜಯ ಸಿ. ಶೆಟ್ಟಿ, ಭಾಸ್ಕರ ಸರಪಾಡಿ, ಎಂ. ಎಸ್. ರಾವ್, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಪದ್ಮಾವತಿ ಬಿ ಶೆಟ್ಟಿ, ಗೌರವ ಕೋಶಾಧಿಕಾರಿ ಗೌರಿ ಪಣಿಯಾಡಿ ವೇದಿಕೆಯಲ್ಲಿದ್ದರು.
ಜತೆ ಕಾರ್ಯದರ್ಶಿ ವಿಜಯ ಡಿ. ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ರಘುನಾಥ ಎನ್. ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು
ನಾಗೇಶ್ ಭಟ್ ಅವರಿಂದ ಶಾರದಾ ಪೂಜೆ, ಸದಸ್ಯರಿಂದ ಭಜನೆ ನಡೆಯಿತು. ಬಳಗದ ಸದಸ್ಯರಿಂದ, ಹಾಗೂ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದರೆ ಕಲಾಜಗತ್ತು ತೋನ್ಸೆ ವಿಜಯಕುಮಾರ್ ಪ್ರಾಯೋಜಕತ್ವದಲ್ಲಿ ಕಲಾಜಗತ್ತು ಕಲಾವಿದರಿಂದ ಮೋಕ್ಷ ನಾಟಕ ಪ್ರದರ್ಶನಗೊಂಡಿತು.
ಉಪಾಧ್ಯಕ್ಷ ಕೃಷ್ಣ ಟಿ. ಅಮೀನ್, ಎಂ. ಕೃಷ್ಣ ಎನ್. ಶೆಟ್ಟಿ, ಜತೆ ಕಾರ್ಯದರ್ಶಿ ವಸಂತಿ ಯು. ಸಾಲ್ಯಾನ್, ಜತೆ ಕೋಶಾಧಿಕಾರಿ ಸದಾಶಿವ ಸಿ.ಪೂಜಾರಿ, ಲತಾ ವಿ. ಬಂಗೇರ, ಪೂಜಾ ಸಮಿತಿಯ ರಮೇಶ್‌ಸಿ. ಕೋಟ್ಯಾನ್, ರಮೇಶ್‌ಬಂಗೇರ, ಎಚ್. ಜಯ ದೇವಾಡಿಗ, ಹಾಗೂ ಇತರ ಪದಾಧಿಕಾರಿಗಳು ಅತಿಥಿಗಳನ್ನು ಗೌರವಿಸಿದರು. ಗೌರವ ಕೋಶಾಧಿಕಾರಿ ಗೌರಿ ಪಣಿಯಾಡಿ ವಂದಿಸಿದರು.
ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್












