ಕನ್ನಡ ವಾರ್ತೆಗಳು

ಮೂಡಬಿದ್ರೆ ಪ್ರಶಾಂತ್ ಕೊಲೆ ಪ್ರಕರಣ: ಸಚಿವ ಅಭಯ್ ಚಂದ್ರ ಜೈನ್ ರ ಎಲ್ಲಾ ಕಾರ್ಯಕ್ರಮ ತಡೆಯುತ್ತೇವೆ: ಬೈಕಾಡಿ

Pinterest LinkedIn Tumblr

VHP_Protest_Kundapur

ಕುಂದಾಪುರ: ಅಕ್ರಮ ಗೋ ಸಾಗಣಿಕೆ ಮತ್ತು ಗೋ ಕಳ್ಳತನ ಪ್ರಕರಣಗಳು ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದು ಅದನ್ನು ತಡೆಯುವ ಸಲುವಾಗಿ ಪಣತೊಟ್ಟ ಮೂಡುಬಿದ್ರೆ ಬಜರಂಗದಳದ ಸಹಸಂಚಾಲಕ ಪ್ರಶಾಂತ್ ಅವರನ್ನು ಮತಾಂಧರಾದ ಗೋ ಹಂತಕರು ಕಗ್ಗೊಲೆ ಮಾಡಿದ್ದು ಅವರನ್ನು ಪೊಲೀಸ್ ಇಲಾಖೆ ಶೀಘ್ರ ಬಂಧಿಸಬೇಕು ಎಂದು ವಿಶ್ವಹಿಂದೂ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಆಗ್ರಹಿಸಿದ್ದಾರೆ.

ಅವರು ಮೂಡಬಿದಿರೆಯ ಬಜರಂಗದಳ ಕಾರ್ಯಕರ್ತ ಪ್ರಶಾಂತ ಪೂಜಾರಿ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ನೇತೃತ್ವದಲ್ಲಿ ಕುಂದಾಪುರದ ಶಾಸ್ತ್ರಿ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಮುಕ್ಕೋಟಿ ದೇವರ ಸಾನಿಧ್ಯವಿರುವ ಹಾಗೂ ಹಿಂದೂಗಳು ಪೂಜ್ಯ ಭಾವನೆಯಿಂದ ಕಾಣುವ ಗೋ ಮಾತೆಯ ರಕ್ಷಣೆ ನಮ್ಮೆದುರಿಗಿನ ದೊಡ್ಡ ಸವಾಲಾಗಿದೆ. ಹಿಂದೂ ಕಾರ್ಯಕರ್ತರಿಗೆ ಗೋವು ತಾಯಿಗೆ ಸಮಾನವಾಗಿದ್ದು ಗೋ ಮಾತೆ ರಕ್ಷಣೆಗೆ ಯಾವ ತ್ಯಾಗಕ್ಕೂ ಸಿದ್ಧರಿದ್ದೇವೆ. ಮುಂದಿನ ದಿವಸಗಳಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ಒಂದು ಗೋವಿನ ರಕ್ತ ನೆಲಕ್ಕೆ ಬೀಳದ ಹಾಗೆ ವಿಶ್ವ ಹಿಂದೂ ಪರಿಶತ್ ಹಾಗೂ ಬಜರಂಗದಳದ ಸೇರಿದಂತೆ ಹಿಂದೂ ಪರ ಸಂಘಟನೆ ಕಾರ್ಯಕರ್ತರು ನೋಡಿಕೊಳ್ಳುತ್ತೇವೆ. ಈ ಮೂಲಕವಾಗಿ ಸಂಘಟನೆಯ ನಿಷ್ಟಾವಂತ ಕಾರ್ಯಕರ್ತನನ್ನು ಕಳೆದುಕೊಂಡ ನಾವು ಕೆಲವೇ ದಿನಗಳಲ್ಲಿ ಅವರ ಸಾವಿನ ನಷ್ಟವನ್ನು ಭರ್ತಿ ಮಾಡಿ ಅವರ ಧ್ಯೇಯಕ್ಕೆ ಪೂರಕವಾದ ಕೆಲಸಗಳನ್ನು ಮಾಡಲಿದ್ದೇವೆ.

Kndpr_VHP Protest_Prashanth Murder (3) Kndpr_VHP Protest_Prashanth Murder (4) Kndpr_VHP Protest_Prashanth Murder (7) Kndpr_VHP Protest_Prashanth Murder (6) Kndpr_VHP Protest_Prashanth Murder (5) Kndpr_VHP Protest_Prashanth Murder (1) Kndpr_VHP Protest_Prashanth Murder (2) Kndpr_VHP Protest_Prashanth Murder (9) Kndpr_VHP Protest_Prashanth Murder (8)

ಸಚಿವರ ಕಾರ್ಯಕ್ರಮ ತಡೆಯುತ್ತೇವೆ:
ಪ್ರಶಾಂತ್ ಪೂಜಾರಿಯ ಹತ್ಯೆಯಾಗಿ ಎರಡು ವಾರಗಳು ಕಳೆಯುತ್ತಿದ್ದರೂ ಕೂಡ ಅಲ್ಲಿನ ಶಾಸಕ, ಸಚಿವ ಅಭಯ್‌ಚಂದ್ರ ಜೈನ್ ಅವರು ಪ್ರಶಾಂತ್ ನಿವಾಸಕ್ಕೆ ಹೋಗಿಲ್ಲ. ಕರ್ನಾಟಕ ಸರಕಾರ ತಾರತಮ್ಯ ಮಾಡುತ್ತಿದೆ. ಇದು ಬಹಳ ನೋವಿನ ಸಂಗತಿಯಾಗಿದ್ದು ಇನ್ನು ಮುಂದಿನ ದಿನಗಳಲ್ಲಿ ಮೂಡಬಿದ್ರೆ ಪರಿಸರದಲ್ಲಿ ಸಚಿವ ಅಭಯ್‌ಚಂದ್ರ ಜೈನ್ ಯಾವುದೇ ಸಾರ್ವಜನಿಕ ಸಮಾರಂಭಗಳಿಗೆ ಭಾಗವಹಿಸಲು ಹೋದರೇ ಅದಕೆ ತಡೆಯೊಡ್ಡುವುದು ಖಚಿತ ಎಂದು ಸುಪ್ರಸಾದ್ ಶೆಟ್ಟಿ ಖಾರವಾಗಿ ನುಡಿದರು.

ಸರಕಾರದ ಪರಿಹಾರ ಅಗತ್ಯವಿಲ್ಲ:
ಗೋಕಳ್ಳ ಕಬೀರ್ ಸಾವಿಗೆ ಹತ್ತು ಲಕ್ಷ ಘೋಷಣೆ ಮಾಡಿದ ಸರ್ಕಾರ ರತ್ನಾ ಕೊಠಾರಿ ಸತ್ತಾಗ ಕೇವಲ ಮೂರು ಲಕ್ಷ ಕೊಟ್ಟಿತ್ತು ಹಾಗೂ ನಂದಿತಾ ಪ್ರಕರಣದಲ್ಲಿ ಯಾವ ಪರಿಹಾರವನ್ನು ನೀಡಿರಲಿಲ್ಲ. ಇಂದು ಪ್ರಶಾಂತ ಪೂಜಾರಿಯ ಹತ್ಯೆಯಾಗಿ ವಾರ ಕಳೆದರೂ ಸರಕಾರ ಯಾವುದೇ ಪರಿಹಾರ ಪರಿಹಾರವನ್ನು ಘೋಷಣೆ ಮಾಡಿಲ್ಲ. ಕರ್ನಾಟಕ ಸರ್ಕಾರ, ಯಾವುದೇ ಕಾಂಗ್ರೆಸ್ ಶಾಸಕ ಸಚಿವರ ಸಹಯವಿಲ್ಲದೇ ಮುಂದಿನ ದಿವಸಗಳಲ್ಲಿ ಎಲ್ಲದಕ್ಕೂ ಸಂಘಟನೆ ಉತ್ತರ ನೀಡಿಯೇ ಸಿದ್ಧ. ಸರಕಾರದ ಬಳಿ ಪರಿಹಾರಕ್ಕೆ ನಾವು ಅಂಗಲಾಚುವುದೇ ಇಲ್ಲ. ನಿಷ್ಟಾವಂತ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಅವರ ಕುಟುಂಬದ ಬಗ್ಗೆ ನಮಗೆ ಅತೀವ ಕಾಳಜಿಯಿದ್ದು ಬಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ಅವರ ಕುಟುಂಬಕೆ ಬೇಕಾದ ಆರ್ಥಿಕ ಸಹಾಯವನ್ನು ಒಟ್ಟುಗೂಡಿಸಿ ಕೊಡುತ್ತೇವೆ ಎಂದು ಸುಪ್ರಸಾದ್ ಶೆಟ್ಟಿ ಇದೇ ಸಂದರ್ಭ ಹೇಳಿದರು.

ಇದೇ ಸಂದರ್ಭ ಕಂದ್ಲೂರು ಪ್ರಕರಣದ ಬಗ್ಗೆಯೂ ಮಾತನಾಡಿದ ಅವರು ಮತಾಂಧರಿಂದ ಹಿಂದೂ ಯುವಕರ ಮೇಲೆ ನಡೆಯುತ್ತಿರುವ ಹಲ್ಲೆ ಹಾಗೂ ಸಮಸ್ಯೆಗಳಿಗೆ ಸರಕಾರ ಕಡಿವಾಣ ಹಾಕದಿದ್ದಲ್ಲಿ ಸಂಘ್ಹಟನೆಗಳು ಬೀದಿಗಿಳಿಯಬೇಕಾಗುತ್ತದೆ. ಇನ್ನು ಮುಂದೆ ಜಿಲ್ಲೆಯಲಿ ಒಬ್ಬ ಹಿಂದೂ ಯುವಕರಿಗೆ ಅನ್ಯಾಯವಾದರೂ ಸುಮ್ಮನಿರೊಲ್ಲ ಎಂದರು.

ಇನ್ನು ಉಡುಪಿ ಹಾಗೂ ಬ್ರಹ್ಮಾವರದಲ್ಲಿ ನಡೆದ ಪ್ರತ್ಯೇಕ ಪ್ರಕರಣಗಲ್ಲಿ ಹಿಂದೂ ಪರ ಸಂಘಟನೆಯವರನ್ನು ಬಂಧಿಸಲು ಮುಂಚೂಣಿಯಲ್ಲಿದ್ದ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಹಾಗೂ ಉಡುಪಿ ಶಾಸಕ ಪ್ರಮೋಧ ಮದ್ವರಾಜ್ ಅವರು ಇಂದೇಕೆ ಮೂಡುಬಿದಿರೆ ಪ್ರಕರಣದಲ್ಲಿ ಮಾತನಾಡುತ್ತಿಲ್ಲ ಎಂದು ಅವರು ಸುಪ್ರಸಾದ್ ಶೆಟ್ಟಿ ಪ್ರಶ್ನೆಯಿತ್ತರು.

ಶೀಘ್ರವೇ ಪ್ರಶಾಂತ್ ಪೂಜಾರಿ ಹತ್ಯೆ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಉಗ್ರ ಹೋರಾಟ ಉಭಯ ಜಿಲ್ಲೆಗಳಲ್ಲಿ ನಡೆಯುತ್ತದೆ ಎಂದು ಇದೇ ಸಂದರ್ಭ ಅವರು ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ಪ್ರಶಾಂತ್ ಪೂಜಾರಿಯ ಕುಟುಂಬಕ್ಕೆ ಆರ್ಥಿಕವಾಗಿ ನೆರವಿಗಾಗಿ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಕುಂದಾಪುರದ ಪೇಟೆಯಲ್ಲಿ ಸಂಚರಿಸಿ ನಿಧಿ ಸಂಗ್ರಹಿಸಿದರು. ಅಲ್ಲದೇ ವಿವಿಧ ಶಾಖೆಗಳಿಂದಲೂ ನಿಧಿ ಸಂಗ್ರಹಿಸಿ ನೀಡಲಾಯಿತು.

ಈ ಸಂದರ್ಭದಲ್ಲಿ ಶಂಕರ್ ಅಂಕದಕಟ್ಟೆ, ವಿಜಯ್ ಕುಮಾರ್ ಶೆಟ್ಟಿ, ಪ್ರಕಾಶ್ ಮೆಂಡನ್, ಭಾಸ್ಕರ ಬಿಲ್ಲವ, ಸಂತೋಷ್, ಸುರೇಂದ್ರ ಕೋಟೇಶ್ವರ ಮೊದಲಾವರಿದ್ದರು.

Write A Comment