ಅಮೃತಸರ: ಫ್ಯಾಕ್ಟರಿ ಮಾಲಿಕನೊಬ್ಬ ಕಳ್ಳತನದ ಆರೋಪದ ಮೇಲೆ ಕೆಲಸದಾಳನ್ನು ತಲೆ ಕೆಳಗೆ ಕಟ್ಟಿ ಹಾಕಿ ಥಳಿಸಿ ಕೊಲೆ ಮಾಡಿರುವ ಅಮಾನುಷ ಘಟನೆ ಪಂಜಾಬ್‌ನಲ್ಲಿ ನಡೆದಿದೆ.
ಬಿಹಾರ ಮೂಲದ ಕೆಲಸದಾಳು ರಾಮ್ ಸಿಂಗ್ ಎಂಬಾತನನ್ನು ಮಾಲೀಕ ತಲೆ ಕೆಳಗೆ ಕಟ್ಟಿ ಹಾಕಿ ಕಬ್ಬಿಣದ ರಾಡ್ ನಲ್ಲಿ ಅಮಾನವೀಯ ರೀತಿಯಲ್ಲಿ ಥಳಿಸಿದ್ದು ಅಲ್ಲದೆ ಮೊಬೈಲ್ ವೊಂದರಲ್ಲಿ ಸೆರೆಹಿಡಿದ್ದಾರೆ. ಈ ವೇಳೆ ಇನ್ನೊಬ್ಬ ವ್ಯಕ್ತಿ ರಾಡ್ ನಿಂದ ಹೊಡಿಬೇಡಿ ವಿದ್ಯುತ್ ಶಾಕ್ ನೀಡು ಎಂದು ಹೇಳಿರುವುದೂ ವಿಡಿಯೋದಲ್ಲಿ ದಾಖಲಾಗಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ತನ್ನ ಪತಿಯನ್ನು ಅಮಾನುಷವಾಗಿ ಥಳಿಸಿ ಹತ್ಯೆ ಮಾಡಿದ್ದಾರೆ ಎಂದು ಮೃತ ರಾಮ್‌ನ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆಯ ಬಳಿಕ ಫ್ಯಾಕ್ಟರಿ ಮಾಲೀಕ ಜಸ್‌ಪ್ರೀತ್ ಸಿಂಗ್ ಮತ್ತು ಕೃತ್ಯದಲ್ಲಿ ಭಾಗಿಯಾದ ಇಬ್ಬರು ತಲೆ ಮರೆಸಿಕೊಂಡಿದ್ದಾರೆ.
https://youtu.be/kJGFvJ6KWJk
