ಮುಂಬೈ

ರಾಯ್‌ಘಡ ಅರಣ್ಯದಲ್ಲಿ ಪತ್ತೆಯಾದ ದೇಹದ ಭಾಗಗಳು ಶೀನಾ ಬೋರಾದ್ದೆ: ಡಿಎನ್‌ಎ ವರದಿ

Pinterest LinkedIn Tumblr

Sheena-body-1ಮುಂಬೈ: ರಾಯ್‌ಘಡ ಅರಣ್ಯ ಪ್ರದೇಶದಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದ ದೇಹದ ಭಾಗಗಳು ಶೀನಾ ಬೋರಾದ್ದೆ ಎಂಬುದು ಡಿಎನ್‌ಎ ವರದಿಯಿಂದ ಸಾಭೀತಾಗಿದೆ.

ರಾಯ್‌ಘಡ ಅರಣ್ಯದಲ್ಲಿ ಪತ್ತೆಯಾದ ಮೂಳೆಗಳ ಹಾಗೂ ಇಂದ್ರಾಣಿ ಮುಖರ್ಜಿಯ ಡಿಎನ್‌ಎ ಮಾದರಿ ಒಂದೇ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ತಿಳಿಸಿದೆ.

ಮತ್ತೊಂದು ಬೆಳವಣಿಗೆಯಲ್ಲಿ, ಮಿಖಾಯಿಲ್ ಬೋರಾ ಡಿಎನ್‌ಎ ವರದಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯ ಮುಂಬೈ ಪೊಲೀಸರಿಗೆ ನೀಡಿದ್ದು, ಈ ವರದಿಯಲ್ಲೂ ಮಿಖಾಯಿಲ್ ಬೋರಾ ಡಿಎನ್‌ಎ ಮಾದರಿ ಹಾಗೂ ಇಂದ್ರಾಣಿ ಮುಖರ್ಜಿ ಡಿಎನ್‌ಎ ಮಾದರಿ ಒಂದೇ ಆಗಿದೆ.

ಶೀನಾಳನ್ನು ಕೊಂದು ಆಕೆಯ ಶವವನ್ನು ಒಂದು ರಾತ್ರಿ ತನ್ನ ನಿವಾಸದಲ್ಲಿ ಕಾರಿನಲ್ಲಿಟ್ಟದ್ದ ಇಂದ್ರಾಣಿ ಮುಖರ್ಜಿ, ಮರುದಿನ ಮಹಾರಾಷ್ಟ್ರದ ರಾಯಘಡಕ್ಕೆ ತೆಗೆದುಕೊಂಡು ಹೋಗಿ, ಪೆಟ್ರೋಲ್ ಹಾಕಿ ಸುಟ್ಟು ಹಾಕಿದ್ದಾರೆ ಎಂಬುದು ಪೊಲೀಸ್ ತನಿಖೆಯಿಂದ ಬಹಿರಂಗವಾಗಿತ್ತು.

Write A Comment