ಅಂತರಾಷ್ಟ್ರೀಯ

ಆ್ಯಪಲ್ ಸಂಸ್ಥಾಪಕ ಸ್ಟೀವ್‍ ಜಾಬ್ ಗೆ ತಂತ್ರಜ್ಞಾನವೇ ಗೊತ್ತಿರಲಿಲ್ಲ!: ಅಸಮಾಧಾನ ಹೊರಗೆಡವಿದ ಸಹಸಂಸ್ಥಾಪಕ ವೋಜ್ನಿಯಾಕ್

Pinterest LinkedIn Tumblr

Steve-Jobs-Steve-Wozniakಲಂಡನ್: ಸ್ಟೀವ್ ಜಾಬ್ಸ್ ನಿಧನದ ನಾಲ್ಕು ವರ್ಷಗಳ ನಂತರ ಆ್ಯಪಲ್ ಒಳಗಿದ್ದ ಹುಳುಕೊಂದು ಹೊರಬಿದ್ದಿದೆ. ಜಾಬ್ಸ್ ಇರುವವರೆಗೂ ಬಹುತೇಕ ತೆರೆಮರೆಯಲ್ಲೇ ಇದ್ದ ಆ್ಯಪಲ್ ಕಂಪನಿಯ  ಸಹಸಂಸ್ಥಾಪಕ ಸ್ಟೀವ್ ವೋಜ್ನಿಯಾಕ್ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕೆಲವು ಅಚ್ಚರಿಯ ವಿಚಾರಗಳನ್ನು ಹೊರಗೆಡವಿದ್ದಾರೆ.

“ಸ್ಟೀವ್ ಜಾಬ್ಸ್‍ಗೆ ಟೆಕ್ನಾಲಜಿ ಗೊತ್ತೇ ಇರಲಿಲ್ಲ. ಅವರು ಬ್ಯುಸಿನೆಸ್ ಪಾಲುದಾರ ಆಗಿದ್ದರೇ ಹೊರತು ಶುರುವಿನಲ್ಲಿ ಹೊರಬಂದ ಆ್ಯಪಲ್ ಸಾಧನಗಳ ವಿನ್ಯಾಸದಲ್ಲಿ ಅವರ ಪಾತ್ರ ಏನೂ  ಇರಲೇ ಇಲ್ಲ ಎಂದು ಹೇಳುವ ಮೂಲಕ ಇಡೀ ತಂತ್ರಜ್ಞಾನ ಜಗತ್ತನ್ನೇ ಒಂದು ಕ್ಷಣ ದಂಗುಬಡಿಸಿದ್ದಾರೆ. ಯೂಟ್ಯೂಬ್‍ನ ರೀಚ್ ಎ ಸ್ಟೂಡೆಂಟ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಇಂಥ ಹಲವು  ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ.

ಜಾಬ್ಸ್ ಮತ್ತು ವೋಜ್ನಿಯಾಕ್ 1971 ರಲ್ಲಿ ಒಬ್ಬ ಕಾಮನ್ ಗೆಳೆಯನ ಮೂಲಕ ಪರಿಚಯರಾಗಿ ಸ್ಯಾನ್  ಫ್ರಾನ್ಸಿಸ್ಕೋದಲ್ಲಿ ಜಂಟಿಯಾಗಿ ಕಂಪ್ಯೂಟರ್ ಉದ್ಯಮಕ್ಕೆ ಕೈಹಾಕಿದ್ದರು. 1976ರಲ್ಲಿ  ಆಪಲ್1 ಕಂಪ್ಯೂಟರ್ ಬಿಡುಗಡೆಯಾಗಿತ್ತು. ಮೊದಲ ಹೋಮ್ ಕಂಪ್ಯೂಟರ್ ಎಂದೇ ದಾಖಲಾಗಿರುವ ಇದು 666.66 ಡಾಲರ್ ಗೆ ಮಾರಾಟವಾಗಿತ್ತು. ಅಂಥ 200 ಕಂಪ್ಯೂಟರ್‍ಗಳು  ತಯಾರಾಗಿದ್ದವು. ಆ್ಯಪಲ್ 2 ಆವಿಷ್ಕಾರದ ಬಗ್ಗೆಯಂತೂ ಅದು ಹೊರಬರುವತನಕವೂ ಜಾಬ್ಸ್ ಗೆ ಗೊತ್ತಿರಲಿಲ್ಲ. ಅದು ಸಂಪೂರ್ಣ ನನ್ನದೇ ಶ್ರಮ ಎಂದಿರುವ ವೋಜ್ನಿಯಾಕ್, ಸ್ಟೀವ್ ಜಾಬ್ಸ್ ಒಬ್ಬ ಒಳ್ಳೆ ಗೆಳೆಯ, ಒಳ್ಳೆಯ ಉದ್ಯಮಿ ಅಷ್ಟೆ. ಆತ ತಂತ್ರಜ್ಞನಲ್ಲ ಎಂದಿದ್ದಾರೆ.

ಈ ಮೊದಲು ಸ್ಮಾರ್ಟ್‍ವಾಚ್‍ಗಳ ಬಗ್ಗೆ ತಾತ್ಸಾರದ ಮಾತುಗಳನ್ನಾಡಿ ವಿವಾದಕ್ಕೆ ಸಿಲುಕಿದ್ದ ವೋಜ್ನಿಯಾಕ್ ಈಗ ಮತ್ತೊಮ್ಮೆ ವಿವಾದಾತ್ಮಕ ಮಾತುಗಳನ್ನಾಡಿದ್ದಾರೆ. ಅವರ ಹೇಳಿಕೆಯ  ಸತ್ಯಾಸತ್ಯತೆಗಳ ಬಗ್ಗೆ ಪ್ರತಿಕ್ರಿಯೆಗಳಿಗಾಗಿ ಸ್ಟೀವ್ ಜಾಬ್ಸ್ ಅಭಿಮಾನಿಗಳು ಕಾದಿದ್ದಾರೆ. 330 ಸಾವಿರ ಪೌಂಡ್‍ಗೆ ಹರಾಜು: ಏತನ್ಮಧ್ಯೆ 40ವರ್ಷಗಳ ಹಿಂದೆ ತಯಾರಿಸಿದ್ದ ಮೊಟ್ಟಮೊದಲ  ಆ್ಯಪಲ್ ಕಂಪ್ಯೂಟರನ್ನು ಹರಾಜಿಗಿಡಲಾಗಿದ್ದು 330ಸಾವಿರ ಪೌಂಡ್ ಗೆ ಮಾರಾಟವಾಗುವ ನಿರೀಕ್ಷೆ ವ್ಯಕ್ತವಾಗಿದೆ. ಸೆ.21ಕ್ಕೆ ಹರಾಜು ನಡೆಯಲಿದೆ.

Write A Comment