ರಾಷ್ಟ್ರೀಯ

ಪಾಕ್ ಸೇನಾ ಮುಖ್ಯಸ್ಥರ ‘ಯುದ್ಧ’ ಹೇಳಿಕೆಗೆ ಬಿಜೆಪಿ, ಕಾಂಗ್ರೆಸ್ ತೀಕ್ಷ್ಣ ಪ್ರತಿಕ್ರಿಯೆ: ಪಿಒಕೆಯನ್ನು ಪಾಕ್ ಅಕ್ರಮ ವಶದಿಂದ ಮುಕ್ತಗೊಳಿಸುವುದು ಮಾತ್ರ ಮುಖ್ಯ ವಿಷಯ

Pinterest LinkedIn Tumblr

India-slams-Pakನವದೆಹಲಿ:  ಭಾರತವನ್ನು ಗುರಿಯಾಗಿರಿಸಿಕೊಂಡು ಪಾಕಿಸ್ತಾನದ ಸೇನಾ ಮುಖ್ಯಸ್ಥ ನೀಡಿದ್ದ ಪ್ರಚೋದನಾಕಾರಿ ಹೇಳಿಕೆಗೆ ಬಿಜೆಪಿ, ಕಾಂಗ್ರೆಸ್ ತೀಕ್ಷ್ಣ ಪ್ರತಿಕ್ರಿಯೆ ನೀಡಿವೆ. ಈ ಹಿಂದೆ ಭಾರತದ ವಿರುದ್ಧ ಯುದ್ಧಗಳಲ್ಲಿ ಸೋತಿದ್ದರು ಈ ರೀತಿ ಎಚ್ಚರಿಕೆ ನೀಡುತ್ತಿರುವುದು ಪಾಕಿಸ್ತಾನದ ಅಪ್ರಬುದ್ಧತೆಯನ್ನು ತೋರಿಸುತ್ತದೆ ಎಂದು ಬಿಜೆಪಿ ಹೇಳಿದೆ.

ಯಾವುದೇ ರೀತಿಯ ಯುದ್ಧವನ್ನಾದರೂ ಎದುರಿಸಲು ಪಾಕಿಸ್ತಾನ ಸಿದ್ಧವಿದೆ ಎಂದಿರುವ ಪಾಕಿಸ್ತಾನದ ಸೇನಾ ಮುಖ್ಯಥ ಹಳೆಯ ಸೋಲುಗಳನ್ನು ಮರೆತು ಹಗಲುಗನಸು ಕಾಣುತ್ತಿದ್ದಾರೆ. ಆಂತರಿಕ ಸಮಸ್ಯೆ, ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವುದು ಬಯಲಾಗಿರುವುದರಿಂದ ಹತಾಶಗೊಂಡಿರುವ ಪಾಕಿಸ್ತಾನ  ಭಾರತಕ್ಕೆ ಎಚ್ಚರಿಕೆ ನೀಡುತ್ತಿದೆ ಎಂದು ಬಿಜೆಪಿ ಕಾರ್ಯದರ್ಶಿ ಶ್ರೀಕಾಂತ್ ಶರ್ಮಾ ಹೇಳಿದ್ದಾರೆ.

ಪಾಕಿಸ್ತಾನದ ಹೇಳಿಕೆಯನ್ನು ಟೀಕಿಸಿರುವ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ,  ಪಾಕಿಸ್ತಾನ ರಾಜಕೀಯ ಹಾಗೂ ಆರ್ಥಿಕವಾಗಿ ಆಂತರಿಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಪಾಕಿಸ್ತಾನ ಭಯೋತ್ಪಾದಕರ ಭದ್ರ ನೆಲೆಯಾಗುವುದನ್ನು ತಡೆಗಟ್ಟುವುದು ಮಾತ್ರ ವಿಶ್ವದ ಮುಂದಿರುವ ಮುಗಿಯದ ವಿಚಾರವೇ ಹೊರತು ಕಾಶ್ಮೀರ ವಿವಾದ ಅಲ್ಲ ಎಂದು ಹೇಳಿದ್ದಾರೆ. ಪಾಕಿಸ್ತಾನ 1965 ರಲ್ಲಿ ಭಾರತದ ಮೇಲೆ ದಾಳಿ ನಡೆಸಿ ತಕ್ಕ ಉತ್ತರ ಪಡೆದಿತ್ತು. 1971 ರಲ್ಲೂ ಭಾರತದ ವಿರುದ್ಧ ಹೀನಾಯವಾಗಿ ಸೋತಿತ್ತು, ಕಾರ್ಗಿಲ್ ಯುದ್ಧದಲ್ಲೂ ಪಾಕಿಸ್ತಾನ ಮುಖಭಂಗ ಎದುರಿಸಿತ್ತು. ಆದರೂ ಪಾಕಿಸ್ತಾನ ಭಾರತಕ್ಕೆ ಯುದ್ಧದ ಬಗ್ಗೆ ಎಚ್ಚರಿಕೆ ನೀಡುತ್ತಿದೆ ಎಂದರೆ ಅದು ಹಗಲುಗಾನಸು ಕಾಣುತ್ತಿದೆ ಎಂದು ಬಿಜೆಪಿ ನಾಯಕ ಸಿದ್ಧಾರ್ಥ್ ನಾಥ್ ಅಭಿಪ್ರಾಯಪಟ್ಟಿದ್ದಾರೆ.

1965ರ ಭಾರತ-ಪಾಕಿಸ್ತಾನ ಯುದ್ಧದ 50ನೇ ವರ್ಷಾಚರಣೆ ಅಂಗವಾಗಿ ಪಾಕಿಸ್ತಾನ ಸೇನಾ ಕಾರ್ಯಾಲಯದಲ್ಲಿ ಆಯೋಜಸಿದ್ದ ವಿಶೇಷ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ರಹೀಲ್ ಶರೀಷ್, ಕಾಶ್ಮೀರ ವಿವಾದ ಮುಗಿಯದ ವಿಚಾರ. ಕಾಶ್ಮೀರ ವಿವಾದ ಇತ್ಯರ್ಥಗೊಳ್ಳುವವರೆಗೂ ಎರಡು ದೇಶಗಳ ನಡುವಿನ ಸಮಸ್ಯೆ ಎಂದಿಗೂ ಬಗೆ ಹರಿಯುವುದಿಲ್ಲ. ಇದಕ್ಕಾಗಿ  ಸಣ್ಣ ಅಥವಾ ದೊಡ್ಡ ರೀತಿಯ ಯುದ್ಧಕ್ಕೂ ಪಾಕಿಸ್ತಾನ ಸಿದ್ಧವಿದೆ ಎಂದು ಹೇಳಿದ್ದಾರೆ.

Write A Comment