ಮುಂಬೈ: ಕಳೆದ ಏಳೂವರೆ ವರ್ಷಗಳಲ್ಲಿ ಸೋಮವಾರ ಮುಂಬೈ ಷೇರು ಮಾರುಕಟ್ಟೆಯಲ್ಲಿ ಉಂಟಾದ ಮಹಾ ಕುಸಿತಕ್ಕೆ ಹೂಡಿಕೆದಾರರ ಸುಮಾರು 7 ಲಕ್ಷ ಕೋಟಿ ರೂಪಾಯಿ ನಷ್ಟವುಂಟಾಗಿದೆ. ಇಂದಿನ ವಹಿವಾಟು ಮುಕ್ತಾಯಕ್ಕೆ 1700 ಅಂಕಗಳ ಅಥವಾ ಶೇಕಡಾ 6.22ರಷ್ಟು ಭಾರೀ ಕುಸಿತ ಕಂಡುಬಂದಿದೆ.
ಮುಂಬೈ ಷೇರು ಮಾರುಕಟ್ಟೆಯ ಇಂದಿನ ವಹಿವಾಟಿನಲ್ಲಿ 30 ಕಂಪೆನಿಯ ಷೇರುಗಳು ಸಾವಿರದ 205 ಅಂಕಗಳಿಗಿಂತಲೂ ಹೆಚ್ಚು ಕುಸಿದು ವಹಿವಾಟು ನಡೆಸಿ 26 ಸಾವಿರದ 160ಕ್ಕೆ ತಲುಪಿತ್ತು. ನಿಫ್ಟಿ 353 ಅಂಕ ಕುಸಿದು 7 ಸಾವಿರದ 947ರಲ್ಲಿ ವಹಿವಾಟು ನಡೆಸುತ್ತಿತ್ತು.
ಪ್ರಮುಖ 10 ಕಂಪೆನಿಗಳ ಷೇರು ವಹಿವಾಟಿನಲ್ಲಿ ಭಾರೀ ಕುಸಿಕ ಕಂಡುಬಂದು ಆ ಕಂಪೆನಿಗಳಿಗೇ 2 ಲಕ್ಷ ಕೋಟಿ ನಷ್ಟವುಂಟಾಗಿದೆ.ಕಳೆದ ಏಳೂವರೆ ವರ್ಷಗಳಲ್ಲಿ ಈ ಪ್ರಮಾಣದಲ್ಲಿ ಇಳಿಕೆಯಾಗಿದ್ದು ಮತ್ತು ಮುಂಬೈ ಷೇರು ಮಾರುಕಟ್ಟೆಯ ಸೂಚ್ಯಂಕದಲ್ಲಿ ಉಂಟಾದ ಮಹಾ ಕುಸಿತವಾಗಿದೆ. 2008, ಜನವರಿ 21ರಂದು ಸೆನ್ಸೆಕ್ಸ್ ನಲ್ಲಿ 2 ಸಾವಿರದ 62 ಅಂಕಗಳಷ್ಟು ಭಾರೀ ಕುಸಿತ ಕಂಡು ಬಂದಿತ್ತು.
ನಿಫ್ಟಿಯ 50 ಷೇರುಗಳು 8 ಸಾವಿರ ಅಂಕಗಳ ಕುಸಿತ ಕಂಡುಬಂದು ಇಂದಿನ ವಹಿವಾಟು ಮುಕ್ತಾಯಕ್ಕೆ 26 ಸಾವಿರದಲ್ಲಿ ವಹಿವಾಟು ನಡೆಸಿತು.
ಚಿನ್ನದ ಬೆಲೆ ಗಗನಕ್ಕೆ: ಈ ಮಧ್ಯೆ ಷೇರು ಮಾರುಕಟ್ಟೆ ಕುಸಿತ ಚಿನಿವಾರ ಪೇಟೆ ಮೇಲೆ ಆಗಿದೆಯ ಚಿನ್ನದ ಬೆಲೆ ಗಗನಕ್ಕೆ ಏರಿದೆ. 10 ಗ್ರಾಂಗೆ 27 ಸಾವಿರದ 397 ರೂಪಾಯಿ ಆಗಿದೆ.