ಅಂತರಾಷ್ಟ್ರೀಯ

ಇಸಿಸ್ ಉಗ್ರರ ಅಟ್ಟಹಾಸಕ್ಕೆ ಬಲಿಯಾಯ್ತು ಪುರಾತನ ದೇಗುಲ

Pinterest LinkedIn Tumblr

puratanaಜಗತ್ತಿನಾದ್ಯಂತ ತಮ್ಮ ಕ್ರೌರ್ಯ ದ ಮೂಲಕವೇ ಸುದ್ದಿಯಾಗುತ್ತಿರುವ ಇಸಿಸ್ ಉಗ್ರರು ಸಿರಿಯಾದ ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ಬಾಲ್ ಶಮೀನ ದೇಗುಲವನ್ನು ನಾಶ ಮಾಡುವ ಮೂಲಕ ತಮ್ಮ ಪೈಶಾಚಿಕ ವರ್ತನೆಯನ್ನು ಪ್ರದರ್ಶಿಸಿದ್ದಾರೆ.

ಸಿರಿಯಾದ ಪಲ್ಮಿರ ನಗರದ ಮೇಲೆ ದಾಳಿ ಮಾಡಿದ್ದ  ಇಸಿಸ್ ಉಗ್ರರು ಈ ಪ್ರದೇಶವನ್ನು ತಮ್ಮ ವಶಕ್ಕೆ ಪಡೆದಿದ್ದು ತಮ್ಮ ಕೈವಶವಾದ ನಂತರ ಇಲ್ಲಿನ ಪ್ರಾಚೀನ ದೇಗುಲಗಳು ಹಾಗೂ ಐತಿಹಾಸಿಕ ಸ್ಮಾರಕಗಳನ್ನು ನಾಶ ಮಾಡುತ್ತಿದ್ದು ಅದರಂತೆ ಪಲ್ಮಿರ ನಗರದಲ್ಲಿರುವ ಬಾಲ್ ಶಮೀನ ದೇಗುಲದ ಮೇಲೆ ದಾಳಿ ಮಾಡಿರುವ ಉಗ್ರರು, ಇಲ್ಲಿನ ಐತಿಹಾಸಿಕ ಪ್ರದೇಶಗಳನ್ನು ನಾಶಪಡಿಸಿದೆ. ರೋಮನ್ ಆಳ್ವಿಕೆಯ ಸಮಯದಲ್ಲಿ ನಿರ್ಮಿಸಲಾಗಿ ಬಾಲ್ ಶಮೀನ ದೇಗುಲವನ್ನು ಇಂದಿಗೂ ಯುನೆಸ್ಕೋ ಮಹೋನ್ನತ ಸಾರ್ವತ್ರಿಕ ಮೌಲ್ಯ ಎಂದು ಗುರುತಿಸಲಾಗುತ್ತಿದ್ದು ಇಂತಹ ಸ್ಥಳವನ್ನೀ ನಾಶ ಮಾಡುವ ಮೂಲಕ ಧರ್ಮಾಂಧತೆ ತೋರಿದ್ದಾರೆ.

ಐತಿಹಾಸಿಕ ದೇಗುಲವಾದ ಬಾಲ್ ಶಮೀನ ದೇಗುಲದೊಳಗೆ ಅಪಾರ ಪ್ರಮಾಣದ ಸ್ಪೋಟಕಗಳನ್ನು ತುಂಬಿಸಿ ಸ್ಪೋಟಿಸಿದ್ದು ಈ ಪ್ರದೇಶವೀಗ ಸ್ಮಶಾನ ಸದೃಶವಾಗಿದೆ.

Write A Comment