ಇತ್ತೀಚೆಗೆ ವಿಮಾನ ಅಪಘಾತಗಳು ಹೆಚ್ಚುತ್ತಿದ್ದು ಇದಕ್ಕೆ ಪೂರಕವೆಂಬಂತೆ ಭಾರತೀಯ ಸೇನೆಗೆ ಸೇರಿದ ಮಿಗ್-21 ಬೈಸನ್ ವಿಮಾನ ಜಮ್ಮು ಮತ್ತು ಕಾಶ್ಮೀರದಲ್ಲಿ ಪತನವಾಗಿರುವ ಮಾಹಿತಿ ಲಭ್ಯವಾಗಿದೆ.
ಜಮ್ಮು ಮತ್ತು ಕಾಶ್ಮೀರದ ಬದಗಾಮ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು ಎಂದಿನಂತೆ ತರಬೇತಿಗಾಗಿ ಮಿಗ್-21 ಬೈಸನ್ ವಿಮಾನ ಶ್ರೀನಗರದಿಂದ ವಾಯು ಸೇನೆಗೆ ಸೇರಿದ ಏರ್ ಫೀಲ್ಡ್ ನತ್ತ ಪ್ರಯಾಣ ಬೆಳೆಸಿತ್ತು. ಮಾರ್ಗ ಮಧ್ಯೆ ವಿಮಾನವು ಬದಗಾಮ್ ಜಿಲ್ಲೆಯ ಸಾಯ್ ಬಾಗ್ ಬಳಿ ಬೆಳಗ್ಗೆ 10.59ರ ವೇಳೆಯಲ್ಲಿ ತಾಂತ್ರಿಕ ದೋಷಕ್ಕೆ ತುತ್ತಾಗಿ ಪೈಲಟ್ ನ ನಿಯಂತ್ರಣ ತಪ್ಪಿ ಧರೆಗೆ ಉರುಳಿದೆ.
ಅದೃಷ್ಟವಶಾತ್ ವಿಮಾನದಲ್ಲಿ ಪೈಲಟ್ ಆಶ್ಚರ್ಯಕರ ರೀತಿಯಲ್ಲಿ ವಿಮಾನ ಪತನಗೊಳ್ಳುವ ಮುನ್ನವೇ ಪ್ಯಾರಾಚೂಟ್ ಸಹಾಯದಿಂದ ಹೊರಬರುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದು ಘಟನೆಗೆ ಸಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದೆ ಎನ್ನಲಾಗಿದೆ.