ವಿವಾದಿತ ಸ್ವಯಂ ಘೋಷಿತ ದೇವ ಮಹಿಳೆ ‘ರಾಧೇ ಮಾ’ ಪೊಲೀಸರ ವಿಚಾರಣೆಯ ಸಮಯದಲ್ಲಿ ಹಲವು ರಹಸ್ಯಗಳನ್ನು ಬಿಚ್ಚಿಟ್ಟಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಶುಕ್ರವಾರ ಕಂಡವಲಿ ಪೊಲೀಸರು ನಡೆಸಿದ ವಿಚಾರಣೆಯ ಸಮಯದಲ್ಲಿ ಮನ ಬಿಚ್ಚಿ ಮಾತನಾಡಿದ ‘ರಾಧೇ ಮಾ’ ನಾನು ದೇವಿಯಲ್ಲ. ಮಾತೆ ವೈಷ್ಣೋ ದೇವಿ ಹಾಗೂ ಮಾತರಾಣಿಯ ಕುರಿತು ನಾನು ಉಪದೇಶ ಮಾಡುತ್ತಿದ್ದು ಹಾಗಾಗಿ ಜನ ನನ್ನನ್ನು ದೇವಿ ಎಂದು ಪರಿಭಾವಿಸಿದ್ದಾರೆ. ಇದರಲ್ಲಿ ನನ್ನ ತಪ್ಪಿಲ್ಲ ಎಂದು ವಿವರಿಸಿದ್ದಾರೆ.
ವಿಚಾರಣೆ ಸಮಯದಲ್ಲಿ ಪೊಲೀಸರು 98 ಪ್ರಶ್ನೆಗಳನ್ನು ಕೇಳಿದ್ದು ಈ ಸಮಯದಲ್ಲಿ ಸ್ವಲ್ಪ ಅಸ್ವಸ್ಥರಾಗಿದ್ದ ರಾಧೇ ಮಾ ಕೆಲ ಪ್ರಶ್ನೆಗಳಿಂದ ವಿಚಲಿತರಾದಂತೆ ಕಂಡುಬಂದಿದ್ದು ಯಾವುದಕ್ಕೂ ಸಮರ್ಪಕ ಉತ್ತರ ನೀಡಿಲ್ಲ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ವಿಚಾರಣೆಗಾಗಿ ಪ್ರತೀ ಬುಧವಾರ ಕಂಡವಲಿ ಪೊಲೀಸ್ ಠಾಣೆಗೆ ಹಾಜರಾಗುವಂತೆ ಪೊಲೀಸರು ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.