ಮನೋರಂಜನೆ

ಸ್ಯಾಂಡಲ್ ವುಡ್ ಚಿತ್ರದಲ್ಲಿ ನಟಿಸಲಿದ್ದರಾ ಬಾಲಿವುಡ್ ‘ಬಿಗ್ ಬಿ’..?

Pinterest LinkedIn Tumblr

bigಖ್ಯಾತ ಬಾಲಿವುಡ್ ನಟ, ಬಿಗ್ ಬಿ ಅಮಿತಾಭ್ ಬಚ್ಚನ್ ಮತ್ತೊಮ್ಮೆ ಸ್ಯಾಂಡಲ್ ವುಡ್ ಚಿತ್ರದಲ್ಲಿ ಚಿತ್ರದಲ್ಲಿ ನಟಿಸಲಿದ್ದರಾ ಎಂಬ ಕುತೂಹಲ ಈಗ ಗಾಂಧಿ ನಗರದಲ್ಲಿ ಮೂಡಿದೆ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ.

2005 ರಲ್ಲಿ ಬಿಡುಗಡೆಯಾದ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ‘ಅಮೃತಧಾರೆ’ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಪುಟ್ಟ ಪಾತ್ರವೊಂದನ್ನು ಮಾಡಿದ್ದರು.ಚಿತ್ರದಲ್ಲಿ ಕೆಲ ಸಮಯವಷ್ಟೇ ಅಮಿತಾಭ್ ಬಚ್ಚನ್ ಕಾಣಿಸಿಕೊಂಡಿದ್ದರಾದರೂ ಅವರ ಪಾತ್ರ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೇ ಉಳಿದಿತ್ತು.

ಇದೀಗ ಬರೋಬ್ಬರಿ 10 ವರ್ಷಗಳ ಬಳಿಕ ಅಮಿತಾಭ್ ಬಚ್ಚನ್ ಕನ್ನಡ ಚಿತ್ರವೊಂದರಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆಂಬ ಮಾತು ಕೇಳಿ ಬರುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಸ್ಯಾಂಡಲ್ ವುಡ್ ನಟ ಅಜಯ್ ರಾವ್, ಅಮಿತಾಭ್ ಬಚ್ಚನ್ ಅವರನ್ನು ಅವರ ಮುಂಬೈ ನಿವಾಸದಲ್ಲಿ ಭೇಟಿ ಮಾಡಿದ್ದಾರೆ. ತಮ್ಮ ಮುಂಬರುವ ಚಿತ್ರದಲ್ಲಿ ಪಾತ್ರ ನಿರ್ವಹಿಸಲು ಬಚ್ಚನ್ ಅವರನ್ನು ಆಹ್ವಾನಿಸಲು ಅಜಯ್ ರಾವ್ ತೆರಳಿದ್ದರಾ ಎಂಬುದರ ಕುರಿತು ಯಾವುದೇ ಮಾಹಿತಿಯಿಲ್ಲ. ಬಚ್ಚನ್ ಅವರ ಜೊತೆಗಿರುವ ಚಿತ್ರವನ್ನು ಅಜಯ್ ರಾವ್ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ.

Write A Comment