ಮುಂಬೈ

ಅಬ್ಬಬ್ಬಾ ! ರೋಹಿತ್ ಶರ್ಮಾರ ಹೊಸ ಮನೆ ಬೆಲೆ ಕೇಳಿದ್ರೆ..!!

Pinterest LinkedIn Tumblr

abbaಮುಂಬೈ: ಕ್ರಿಕೆಟ್ ತಾರೆ ರೋಹಿತ್ ಶರ್ಮಾ ಒಂದಲ್ಲ, ಎರಡಲ್ಲ ಬರೋಬ್ಬರಿ ನಾಲ್ಕು ಬೆಡ್ ರೂಂ ಉಳ್ಳ ಐಷಾರಾಮಿ ಮನೆಯೊಂದನ್ನು ಖರೀದಿಸಿದ್ದಾರೆ. ಇದಕ್ಕಾಗಿ ಅವರು ನೀಡಿರುವ ಬೆಲೆಯನ್ನು ಕೇಳಿದ್ರೆ ಮೂಗಿನ ಮೇಲೆ ಬೆರಳಿಡುತ್ತೀರಿ.

ಅದು ಮುಂಬೈನ ಪ್ರತಿಷ್ಟಿತ ವರ್ಲಿ ಪ್ರದೇಶ. ಅಲ್ಲಿ ಸಮುದ್ರದ ಕಡೆ ಮುಖ ಮಾಡಿರುವ ಮನೆಯನ್ನು 30 ಕೋಟಿ ರೂ. ಹಣ ನೀಡಿ ರೋಹಿತ್ ಶರ್ಮ ಖರೀದಿಸಿದ್ದಾರೆ. ಅಹುಜ ಕನ್ಸ್ ಟ್ರಕ್ಷನ್ಸ್ ನಿರ್ಮಾಣ ಮಾಡಿರುವ 53 ಅಂತಸ್ತಿನ ಅಹುಜ ಅಪಾರ್ಟ್ ಮೆಂಟ್ ನಲ್ಲಿ ರೋಹಿತ್ ಶರ್ಮಾ ಫ್ಲಾಟ್ ಕೊಂಡಿದ್ದಾರೆ. ಈ ಮನೆಯಲ್ಲಿ ಸ್ವಿಮ್ಮಿಂಗ್ ಪೂಲ್, ಮಿನಿ ಥಿಯೇಟರ್, ಜಿಮ್ ಅಷ್ಟೇ ಅಲ್ಲದೇ ಮಕ್ಕಳು ಆಟವಾಡಲು ಪ್ರತ್ಯೇಕ ಸ್ಥಳವಿದೆ.

4 ಬಿಹೆಚ್ ಕೆ ಮನೆ ಇದಾಗಿದ್ದು ಅರಬ್ಬಿ ಸಮುದ್ರಕ್ಕೆ ಎದುರಾಗಿ ವಿಹಂಗಮ ನೋಟ ಹೊಂದಿದೆ. ಮುಂಬೈನ ಪ್ರತಿಷ್ಟಿತ ಪ್ರದೇಶದಲ್ಲಿರುವ ಇದು ವಿಮಾನ ನಿಲ್ದಾಣಕ್ಕೆ ಸನಿಹದಲ್ಲಿದೆ. ಜೊತೆಗೆ ಹೈಟೆಕ್ ಸೌಕರ್ಯಗಳನ್ನು ಹೊಂದಿರುವ ಕಟ್ಟಡ ಇದಾಗಿದೆ. ಹಾಗಾಗಿ ರೋಹಿತ್ ಇಷ್ಟು ದುಬಾರಿ ಮೊತ್ತ ನೀಡಿದ್ದಾರೆ ಎನ್ನಲಾಗಿದೆ. ಶರ್ಮಾ ಹೊಸ ಮನೆಗೆ ಯಾವಾಗ ಗೃಹ ಪ್ರವೇಶ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Write A Comment