ಮುಂಬೈ

ಜೈಲಿನಲ್ಲಿರುವ ಭೂಗತ ಪಾತಕಿ ಅಬುಸಲೇಂ ಜೊತೆ ಮದುವೆಗೆ ಪಟ್ಟು ಹಿಡಿದ ಯುವತಿ; ನ್ಯಾಯಾಲಯಕ್ಕೆ ಮೇಲ್ಮನವಿ ಅರ್ಜಿ

Pinterest LinkedIn Tumblr

INDIA/

ಥಾಣೆ, ಜೂ.29: ಕಾರಾಗೃಹದಲ್ಲಿರುವ ಭೂಗತ ಪಾತಕಿ ಅಬುಸಲೇಮ್‌ನನ್ನು ಮದುವೆಯಾಗಲು ಅವಕಾಶ ಕಲ್ಪಿಸಿಕೊಡಿ, ಇಲ್ಲದಿದ್ದರೆ ನಾನು ನಿಮ್ಮೆದುರೇ ಆತ್ಮಹತ್ಯೆಗೆ ಶರಣಾಗುತ್ತೇನೆ. ಮುಂಬ್ರ ಮೂಲದ 25ರ ಹರೆಯದ ಯುವತಿ ಸಯ್ಯೀದ್ ಬಹಾರ್‌ಕೌಸರ್ ಎಂಬ ಯುವತಿಯು ಟಾಡಾ ನ್ಯಾಯಾಲಯಕ್ಕೆ ಸಲ್ಲಿಸಿರುವ ಮೇಲ್ಮನವಿ ಅರ್ಜಿಯ ಸಾರಾಂಶ ಇದು.

ಈ ನನ್ನ ಮನವಿಯನ್ನು ನ್ಯಾಯಾಲಯ ಮಾನವೀಯತೆ ನೆಲೆಗಟ್ಟಿನಲ್ಲಿ ಪರಾಂಬರಿಸಬೇಕು. ಏಕೆಂದರೆ ಆ ಭೂಗತ ಪಾತಕಿಯೊಂದಿಗೆ 2014ರಲ್ಲಿ ಲಕ್ನೌ ಮೂಲದ ರೈಲೊಂದರಲ್ಲಿ ಪ್ರಯಾಣಿಸುತ್ತಿದ್ದಾಗಲೇ ನನ್ನ ‘ನಿಖಾ’ ಆಗಿಬಿಟ್ಟಿದೆ. ಹಾಗಾಗಿ ನಾನು ಸಂಪೂರ್ಣವಾಗಿ ನಿರಾಶಳೂ, ಹತಾಶಳೂ ಆಗಿದ್ದೇನೆ ಎಂದು ಕೌಸರ್ ಹೇಳಿದ್ದಾಳೆ.

ಈ ಘಟನೆಯ ನಂತರ ನಾನು ಬೀದಿ ನಾಯಂತಾಗಿದ್ದೇನೆ. ನನ್ನ ಮಾನ, ಪ್ರತಿಷ್ಠೆ, ಎಲ್ಲವೂ ಮಣ್ಣಾಗಿವೆ. ನನಗೀಗ ಬದುಕೇ ದುಸ್ತರವಾಗಿದೆ. ಈಗ ಸಲೇಮ್‌ನ ಅಧಿಕೃತವಾಗಿ ಮದುವೆ ಮಾಡಿಕೊಳ್ಳುವುದನ್ನು ಹೊರತುಪಡಿಸಿದರೆ ನನಗಿನ್ನು ಅನ್ಯಥಾ ಮಾರ್ಗವಿಲ್ಲ. ಒಂದು ಸಲೇಮ್ ಜತೆ ಮದುವೆಯಾಗಬೇಕು. ಅದಾಗದಿದ್ದರೆ ನಾನು ಆತ್ಮಹತ್ಯೆಗೆ ಶರಣಾಗುವುದು ನಿಶ್ಚಿತ. ಹೀಗೆಂದು ಕೌಸರ್ ಜೂ.15ರಂದು ಮುಂಬೈಯ್ ಟಾಡಾ ನ್ಯಾಯಾಲಯಕ್ಕೆ ಅರ್ಜಿಸಲ್ಲಿಸಿದ್ದಾಳೆ.

ಬಿಕಾಂ ಪದವೀಧರೆಯಾಗಿರುವ ಕೌಸರ್, ಜೈಲಿನಲ್ಲಿರುವ ಸಲೇಮ್ ನೋಂದಣಾಧಿಕಾರಿ ಕಚೇರಿಗೆ ಬಂದು ಹೋಗಲು ಕೇವಲ ಅರ್ಧ ತಾಸು ಅನುಮತಿ ನೀಡಿ ಅಥವಾ ಮದುವೆ ಕಾರ್ಯ ಮುಗಿಯುವವರೆಗೂ ಅವನು ಬಂದು ಹೋಗಲು ಅವಕಾಶ ನೀಡುವ ಸಾಧ್ಯತೆ ಇದ್ದರೆ ಹಾಗೇ ಮಾಡಿ. ನಿಖಾ ಆಗಿರುವುದನ್ನು ಈಗ ರಿಜಿಸ್ಟ್ರಾರ್ ಕಚೇರಿಯಲ್ಲಿ ಒಮ್ಮೆ ರಿಜಿಸ್ಟ್ರಾರ್ ಮಾಡಿಸಿದರೆ ಆಯಿತು. ನಾನು ಹೇಗಾದರೂ ಬದುಕುತ್ತೇನೆ ಎಂದಿದ್ದಾಳೆ. ಸದ್ಯ ಅಬುಸಲೇಮ್ ಇಲ್ಲಿನ ತಲೋಜಾ ಕಾರಾಗೃಹದಲ್ಲಿದ್ದಾನೆ.

Write A Comment