ಮುಂಬೈ

ಮುಖೇಶ್ ಅಂಬಾನಿಗೆ ಶಸ್ತ್ರ ಸಜ್ಜಿತ ಬೆಂಜ್

Pinterest LinkedIn Tumblr

mukesh-benz

ಮುಂಬೈ, ಜೂ.21: ರಿಲಯನ್ಸ್ ಇಂಡಸ್ಟ್ರಿಯು ತನ್ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಅವರಿಗೆ ಹೆಚ್ಚಿನ ರಕ್ಷಣೆ ನೀಡಲು ಅತ್ಯಾಧುನಿಕ, ಶಸ್ತ್ರ ಸಜ್ಜಿತ ಮರ್ಸಿಡಿಸ್ ಬೆಂಜ್ ಕಾರನ್ನು ತರಿಸಿಕೊಂಡಿದೆ.

ಈ ಲೆವೆಲ್-9 ವಾಹನ ಪ್ರತಿರೋಧ (ವಿಆರ್‌9) ಕಾರು ಸದ್ಯ ಮಾರುಕಟ್ಟೆಯಲ್ಲಿರುವ ಅತಿ ಸುಭದ್ರ ಕಾರಾಗಿದೆ. ಜರ್ಮನಿಯಲ್ಲಿರುವ ಬೆಂಜ್‌ನ ಸಿಂಡೆಲಿಂಜನ್ ಘಟಕದಲ್ಲಿ ಈ ಕಾರನ್ನು ನಿರ್ಮಿಸಲಾಗಿದೆ.

ಈ ಶಸ್ತ್ರಸಜ್ಜಿತ ಕಾರು ಶನಿವಾರ ಮುಂಬೈನ ಕೇಂದ್ರ ಪ್ರಾದೇಶಿಕ ಸಾರಿಗೆ ಕಚೇರಿ (ಆರ್ಟಿಒ)ಯಲ್ಲಿ ನೋಂದಣಿಯಾಗಿದೆ. ಅಂಬಾನಿ 2013ರ ಏಪ್ರಿಲ್‌ನಿಂದ ಝೆಡ್ ಭದ್ರತೆಯನ್ನು ಪಡೆಯುತ್ತಿದ್ದಾರೆ.

Write A Comment