ಮುಂಬೈ

ಬಂಟರ ಸಂಘ ಮುಂಬಯಿ, ವಿದ್ಯಾರ್ಥಿ ವೇತನ, ಸಹಾಯಧನ ವಿತರಣೆ

Pinterest LinkedIn Tumblr

DSC_0350

ಮೀರಾ-ಭಾಯಂದರ್‌ ಪ್ರಾದೇಶಿಕ ಸಮಿತಿ

ಮುಂಬಯಿ: ಮಕ್ಕಳ ಶಿಕ್ಷಣಕ್ಕಾಗಿ ಬಂಟರ ಸಂಘವು ವಿಶೇಷ ಆದ್ಯತೆ ನೀಡುತ್ತಾ ಬಂದಿದೆ. ಕಳೆದ ಹತ್ತು ವರ್ಷಗಳ ಹಿಂದೆ ಸ್ಥಾಪನೆಗೊಂಡ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯು ವಿಶೇಷ ರೀತಿಯಲ್ಲಿ ಕಾರ್ಯಪ್ರವೃತ್ತಗೊಂಡಿದೆ. ಪ್ರತಿವರ್ಷ ಕೋಟ್ಯಂತರ ರೂ. ಗಳನ್ನು ಸಮಾಜದ ಮಕ್ಕಳಿಗೆ ನೀಡಿ ಸಹಕರಿಸುತ್ತಿದೆ. ಸಮಾಜ ಬಾಂಧವರ ಮಕ್ಕಳು ಉನ್ನತ ಶಿಕ್ಷಣ ಪಡೆಯುವಂತಾಗಲು ಸಂಘವು ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಿದೆ. ಇದರ ಪ್ರಯೋಜನವನ್ನು ಎಲ್ಲ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಬಂಟರ ಸಂಘ ಮುಂಬಯಿ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಅಭಿಪ್ರಾಯಪಟ್ಟರು.

ಇತ್ತೀಚೆಗೆ ಮೀರಾರೋಡ್‌ ಜೈನ ಮಂದಿರದ ಪ್ರಥಮ ಮಹಡಿಯಲ್ಲಿ ಬಂಟರ ಸಂಘದ ಮೀರಾ-ಭಾಯಂದರ್‌ ಪ್ರಾದೇಶಿಕ ಸಮಿತಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಮುಖೇನ ಹಮ್ಮಿಕೊಂಡ ಆರ್ಥಿಕ ಸಹಾಯ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

DSC_0354

DSC_0353

DSC_0341

ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸಂಘದ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯರಾಗಬೇಕು. ಸಾಮಾಜಿಕ ಜಾಲತಾಣಗಳಿಂದ ವಿದ್ಯಾರ್ಥಿಗಳು ದೂರವಿರಬೇಕು. ಇದು ಭವಿಷ್ಯಕ್ಕೆ ಹೇತುವಾಗಿದೆ. ಪಾಲಕರು ತಮ್ಮ ಮಕ್ಕಳ ನಡೆ-ನುಡಿಯ ಬಗ್ಗೆ ಎಚ್ಚರಿಕೆ ವಹಿಸಬೇಕು. ಇಂದು ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ವತಿಯಿಂದ ಈ ಪರಿಸರದ ವಿದ್ಯಾರ್ಥಿಗಳಿಗೆ, ಅಂಗವಿಕಲರಿಗೆ ಆರ್ಥಿಕ ಸಹಾಯ ಹಾಗೂ ವಿಧವೆಯರಿಗೆ ಮಾಸಾಶನದ ಮೂಲಕ 19 ಲಕ್ಷ ರೂ.ಗಳನ್ನು ನೀಡಲಾಗಿದೆ, ಮೀರಾ-ಭಾಯಂದರ್‌ ಪ್ರಾದೇಶಿಕ ಸಮಿತಿಯ ಎಲ್ಲ ಪದಾಧಿಕಾರಿಗಳು ಅದಕ್ಕಾಗಿ ವಿಶೇಷ ಶ್ರಮಪಟ್ಟಿದ್ದಾರೆ ಎಂದರು.

ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ನಗ್ರಿಗುತ್ತು ವಿವೇಕ್‌ ಶೆಟ್ಟಿ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳ ವಿದ್ಯಾರ್ಜನೆಗೆ ಸಹಕಾರಿಯಾಗುವಂತೆ ಸಮಿತಿಯು 19 ಲಕ್ಷ ರೂ.ಗಳನ್ನು ಇಂದು ವಿತರಿಸಿದೆ. ಇಲ್ಲಿಯ ದಾನಿಗಳು, ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳು, ಕಾರ್ಯಕರ್ತರು ಶ್ರಮಪಟ್ಟು ಇದನ್ನು ಸಾಕಾರಗೊಳಿಸಿದ್ದಾರೆ. ಅದರಲ್ಲೂ ಶಿವಪ್ರಸಾದ್‌ ಶೆಟ್ಟಿ ಮತ್ತು ಕಿಶೋರ್‌ ಕುಮಾರ್‌ ಕುತ್ಯಾರ್‌ ಅವರ ಸಹಕಾರ ಉಲ್ಲೇಖನೀಯ. ಮುಂದಿನ ವರ್ಷ ವಿದ್ಯಾರ್ಥಿಗಳನ್ನು ದತ್ತು ಸ್ವೀಕಾರ ಮಾಡುವ ಯೋಜನೆಯಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಮಾತನಾಡಿ, 11 ವರ್ಷದ ಮೊದಲು ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ಹುಟ್ಟಿಕೊಂಡಾಗ ಹಲವಾರು ಟೀಕೆ-ಟಿಪ್ಪಣಿಗಳು ವಿವಿಧ ಕಡೆಯಿಂದ ಕೇಳಿ ಬಂದಿದ್ದವು. ಅಂದು 25 ಲಕ್ಷ ರೂ. ಗಳಿಂದ ಪ್ರಾರಂಭಗೊಂಡ ಸಹಾಯದ ಮೊತ್ತ ಇಂದು 1.5 ಕೋ. ರೂ.ಗಳನ್ನು ತಲುಪಿದೆ. ಸಮಿತಿಯ ಪದಾಧಿಕಾರಿಗಳ ಪರಿಶ್ರಮದಿಂದ ಇದು ಸಾಧ್ಯವಾಗಿದೆ. ಸಂಘದ 9 ಪ್ರಾದೇಶಿಕ ಸಮಿತಿಗಳು ಈಗ ಸುಧೃಡವಾಗಿವೆ. ಯಾರಿಗೆ ಅಗತ್ಯವಿದೆಯೋ ಅವರು ಆರ್ಥಿಕ ಸಹಾಯವನ್ನು ಮಾತ್ರ ಪಡೆಯಬೇಕು. ಪಾಲಕರು ಮಕ್ಕಳ ವಿಕಾಸದತ್ತ ಗಮನ ಹರಿಸಬೇಕು ಎಂದು ಕರೆ ನೀಡಿದರು.

ಮೀರಾ-ಭಾಯಂದರ್‌ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಅರುಣ್‌ಚಂದ್ರ ರೈ ಮಾತನಾಡಿ, ಬಂಟರ ಸಂಘವು ಗ್ರಾಮೀಣ ಭಾಗವಾದ ಮೀರಾರೋಡ್‌- ಭಾಯಂದರ್‌ನಲ್ಲೂ ಸಮಾಜ ಬಂಧುಗಳ ಸೇವೆಗೈಯುತ್ತಿದ್ದು, ಸಂಘದ ಕಾರ್ಯ ಚಟುವಟಿಕೆಗಳು ಈ ಪರಿಸರದ ಜನರನ್ನು ತಲುಪುವಲ್ಲಿ ಪ್ರಾದೇಶಿಕ ಸಮಿತಿ ಮುಖ್ಯಭೂಮಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಬಂಟರ ಸಂಘದ ಗೌರವ ಕಾರ್ಯದರ್ಶಿ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ, ಜತೆ ಕೋಶಾಧಿಕಾರಿ ಮಹೇಶ್‌ ಎಸ್‌. ಶೆಟ್ಟಿ, ಜತೆ ಕಾರ್ಯದರ್ಶಿ ಕಿಶೋರ್‌ ಕುಮಾರ್‌ ಕುತ್ಯಾರ್‌, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜೆ. ಶೆಟ್ಟಿ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯದರ್ಶಿ ಭಾಸ್ಕರ ಶೆಟ್ಟಿ ಕಾರ್ನಾಡ್‌, ಪ್ರಾದೇಶಿಕ ಸಮಿತಿಯ ಕೋಶಾಧಿಕಾರಿ ಶಂಕರ ಶೆಟ್ಟಿ, ಜತೆ ಕಾರ್ಯದರ್ಶಿ ಭಾಸ್ಕರ್‌ ಶೆಟ್ಟಿ, ಜತೆ ಕೋಶಾಧಿಕಾರಿ ದಾಮೋದರ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಗಿರೀಶ್‌ ಶೆಟ್ಟಿ ತೆಳ್ಳಾರ್‌, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಮಂಗಳಾ ಶೆಟ್ಟಿ, ಕಾರ್ಯದರ್ಶಿ ಶಾಲಿನಿ ಶೆಟ್ಟಿ ಉಪಸ್ಥಿತರಿದ್ದರು. ಪ್ರಾದೇಶಿಕ ಸಮಿತಿಯ ಉಪಕಾರ್ಯಾಧ್ಯಕ್ಷ ಎಳಿಯಾಲ್‌ ಉದಯ್‌ ಹೆಗ್ಡೆ ಸ್ವಾಗತಿಸಿ ದರು. ಗೌರವ ಕಾರ್ಯದರ್ಶಿ ಚಂದ್ರ ಶೇಖರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.

ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್

Write A Comment