ಮುಂಬೈ

35 ವರ್ಷಗಳ ಬಳಿಕ ಮಗಳೊಂದಿಗೆ ಪರೀಕ್ಷೆ ಬರೆದು ಪ್ರಥಮ ಶ್ರೇಣಿಯಲ್ಲಿ ಪಾಸ್ ಮಾಡಿದ ತಂದೆ

Pinterest LinkedIn Tumblr

888Shah-Mohammad-Shaikh

ಛಲವಿದ್ದರೆ ಏನನ್ನೂ ಸಾಧಿಸಬಹುದೆಂಬುದಕ್ಕೆ ಮುಂಬೈನ ಈ ಧೋಬಿ ಉದಾಹರಣೆಯಾಗಿದ್ದಾರೆ. 35 ವರ್ಷಗಳ ಹಿಂದೆ 10 ನೇ ತರಗತಿ ವ್ಯಾಸಂಗವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದ ಇವರು ತಮ್ಮ ಮಗಳು 10 ನೇ ತರಗತಿ ಪರೀಕ್ಷೆ ಬರೆಯುವ ವೇಳೆ ತಾವೂ ಆಕೆಯೊಂದಿಗೆ ಪರೀಕ್ಷೆ ಬರೆದು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ.

ಮುಂಬೈನ ವಿಕ್ರೋಲಿ ಬಳಿಯ ಕೊಳಗೇರಿಯಲ್ಲಿ ವಾಸಿಸುತ್ತಿರುವ 51 ವರ್ಷದ ಷಾ ಮಹಮ್ಮದ್ ಶೇಕ್ ಜೀವನ ನಿರ್ವಹಣೆಗಾಗಿ ಬಟ್ಟೆ ತೊಳೆಯುವುದು ಹಾಗೂ ಇಸ್ತ್ರಿ ಮಾಡುವುದನ್ನು ಕಾಯಕವನ್ನಾಗಿಸಿಕೊಂಡಿದ್ದರು. ಇವರ ಮಗಳು ಮೆಹಕ್ 10 ನೇ ತರಗತಿಗೆ ಕಾಲಿಟ್ಟಾಗ ಷಾ ಮಹಮ್ಮದ್ ಶೇಕ್ ಅವರಿಗೂ 35 ವರ್ಷಗಳ ಹಿಂದೆ ತಾವು ಮೊಟಕುಗೊಳಿಸಿದ್ದ 10 ನೇ ತರಗತಿ ವ್ಯಾಸಂಗವನ್ನು ಮುಂದುವರೆಸಬೇಕೆಂಬ ಬಯಕೆ ಬಂದಿತ್ತು.

ಆದರೆ ಇದು ಅಷ್ಟು ಸುಲಭವಿರಲಿಲ್ಲ. ಮನೆಯಲ್ಲಿ ಇವರೊಬ್ಬರೇ ದುಡಿಯುವ ವ್ಯಕ್ತಿಯಾಗಿದ್ದರಿಂದ ದಿನವಿಡೀ ತಮ್ಮ ಕಾಯಕವನ್ನು ಮಾಡಲೇಬೇಕಾದ ಅನಿವಾರ್ಯತೆಯಿತ್ತು. ಆದರೂ ಛಲ ಬಿಡದ ಮಹಮ್ಮದ್ ಶೇಕ್ ತಾವು ಈ ಹಿಂದೆ 1979-80 ರಲ್ಲಿ 10 ನೇ ತರಗತಿ ವ್ಯಾಸಂಗ ಮಾಡಿದ್ದ ಮುನ್ಸಿಪಲ್ ಶಾಲೆಗೆ ತೆರಳಿ ದಾಖಲೆ ಸಂಗ್ರಹಿಸಿ ಪರೀಕ್ಷೆಯನ್ನೂ ಕಟ್ಟಿಯೇ ಬಿಟ್ಟರು.

ದಿನವಿಡೀ ತಮ್ಮ ಕಾಯಕ ಮಾಡುತ್ತಿದ್ದ ಮಹಮ್ಮದ್ ಷಾ ರಾತ್ರಿ ವೇಳೆ ಮಗಳೊಂದಿಗೆ ವ್ಯಾಸಂಗ ಮಾಡುತ್ತಿದ್ದರು. ಕಳೆದ ಬಾರಿಯ 10 ನೇ ತರಗತಿ ಪರೀಕ್ಷೆಯಲ್ಲಿ ಶೇ.90 ಅಂಕ ಗಳಿಸಿದ್ದ ನೆರೆ ಮನೆಯ ಇಬ್ಬರು ವಿದ್ಯಾರ್ಥಿಗಳು ಮಹಮ್ಮದ್ ಶೇಕ್ ಅವರಿಗೆ ಗಣಿತ ವಿಷಯದ ಬೋಧಕರಾದರು. ಹೀಗೆ ಕಾಯಕದ ಜೊತೆ ಜೊತೆಗೆ ವ್ಯಾಸಂಗ ಮಾಡುತ್ತಿದ್ದ ಮಹಮ್ಮದ್ ಶೇಕ್ ಶೇ.66 ಫಲಿತಾಂಶ ಪಡೆದು ಮೊದಲ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರೆ ಇವರ ಪುತ್ರಿ ಮೆಹಕ್ ಶೇ.89 ಅಂಕ ಪಡೆದಿದ್ದಾಳೆ.

Write A Comment