ಕರಾವಳಿ

ಕರ್ನಾಟಕ ಸೇರಿದಂತೆ ದೇಶದ ಕರಾವಳಿಯುದ್ದಕ್ಕೂ ಅಪ್ಪಳಿಸಲಿದೆ ‘ಅಶೋಬಾ’; ಚಂಡ ಮಾರುತ ಎದುರಿಸಲು ಸಿದ್ದರಾಗಿ

Pinterest LinkedIn Tumblr

7875cyclone-odisha-evacuation-650

ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಚಂಡಮಾರುತವಾಗಿ ಪರಿವರ್ತಿತಗೊಂಡಿದ್ದು ಮುಂದಿನ 24 ಗಂಟೆ ಒಳಗಡೆ ಅರಬ್ಬಿ ಸಮುದ್ರದ ಕರಾವಳಿ ಪ್ರದೇಶದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಈ ಚಂಡಮಾರುತಕ್ಕೆ ‘ಅಶೋಬಾ’ ಎಂದು ಹೆಸರಿಟ್ಟಿದ್ದು, ಮಂಗಳವಾರ ಕರ್ನಾಟಕ ಸೇರಿದಂತೆ ದೇಶದ ಕರಾವಳಿಯುದ್ದಕ್ಕೂ ಅಪ್ಪಳಿಸಲಿದೆ. ಅಲ್ಲದೇ ಗಂಟೆಗೆ 100ರಿಂದ 120 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದು, ಕೇರಳ, ಕರ್ನಾಟಕ, ಗೋವಾ, ಮುಂಬೈ, ಅಹ್ಮದಾಬಾದ್, ಬುಜ್‍ನ ಕರಾವಳಿ ಭಾಗಕ್ಕೆ ಇದರ ಪರಿಣಾಮ ಕಂಡು ಬರಲಿದೆ.

ಅಲ್ಲದೇ ಅರಬ್ಬೀ ಸಮುದ್ರದ ಮಧ್ಯಪೂರ್ವಭಾಗದಲ್ಲಿ ಚಂಡಮಾರುತವಾಗಿ ಪರಿವವರ್ತನೆಯಾದ ಕಾರಣ ಇದು ಪಾಕಿಸ್ತಾನದ ಕರಾಚಿ ಹಾಗೂ ಗಲ್ಫ್‍ರಾಷ್ಟ್ರಗಳ ಮಸ್ಕಟ್‍ಗೂ ಅಪ್ಪಳಿಸಲಿದ್ದು, ಭಾರೀ ಪ್ರಮಾಣದ ಮಳೆಯಾಗಲಿದೆ ಎನ್ನಲಾಗುತ್ತಿದೆ.

Write A Comment