ಕರ್ನಾಟಕ

ಬೆಳಗಾವಿ ಅಧಿವೇಶನದಲ್ಲಿ ಭಾಗವಹಿಸಿದ ಸಚಿವರುಗಳ ಭರ್ಜರಿ ಭೋಜನದ ಬಿಲ್ ಒಟ್ಟು 48 ಲಕ್ಷ ರೂ.

Pinterest LinkedIn Tumblr

meals

ಬೆಂಗಳೂರು: ಕಳೆದ ವರ್ಷದ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಗಡಿನಾಡಿನ ಜನರ ಸಮಸ್ಯೆಗಳ ನಿವಾರಣೆಗೆ ಹೋಗಿದ್ದ  ಮಾನ್ಯ ಸಚಿವರುಗಳು ಸುವರ್ಣಭವನದ ಪಕ್ಕದ ಕ್ಲಬ್ ರೋಡ್‌ನ ಈಫಾ ಹೊಟೆಲ್‌‌ನಲ್ಲಿ  10 ದಿನಗಳ ಕಾಲ  ಭರ್ಜರಿ ರಾತ್ರಿ ಭೋಜನಗಳನ್ನು  ಮಾಡಿದ್ದರಿಂದ ಸರ್ಕಾರ ಒಟ್ಟು 48 ಲಕ್ಷಕ್ಕೂ ಅಧಿಕ ಬಿಲ್ ತೆತ್ತಿದೆ.  ಇವರ ಹತ್ತು ದಿನ ಊಟದ ಬಿಲ್ ನೋಡಿದರೆ ಅಚ್ಚರಿಯಾಗುತ್ತದೆ.

ಕಾನೂನು ಸಚಿವ  ಜಯಚಂದ್ರ 41, 625 ರೂ.   ಖಮರುಲ್ ಇಸ್ಲಾಂ 31, 311, ಕೃಷ್ಣಬೈರೇಗೌಡ  25, 389 ರಮಾನಾಥ್ ರೈ 31,000 , ಚಿಂಚನಸೂರು 52, 683 ರೂ. ಇವುಭೋಜನ ಪ್ರಿಯ ಸಚಿವರು 10 ದಿನಕ್ಕೆ ಖರ್ಚು ಮಾಡಿದ ಹಣ. ಅಧಿವೇಶನದಲ್ಲೂ ಭರ್ಜರಿ ಊಟ ಮಾಡಿದ ನಂತರ ರಾತ್ರಿ ಊಟವಿಲ್ಲವೆಂದು ಪ್ರತಿಯೊಬ್ಬರಿಗೂ ಸರ್ಕಾರಿ ಭತ್ಯೆ ನೀಡಿದ್ದರೂ ಅದನ್ನು ಜೇಬಿಗಿಳಿಸಿಕೊಂಡು ಪಕ್ಕದ ಹೊಟೆಲ್‌ನಲ್ಲಿ  ಭರ್ಜರಿ ಊಟ ಮಾಡಿದ್ದಾರೆ.

ಅಷ್ಟೊಂದು ಬಿಲ್  ಆಗಿರಬೇಕಾದರೆ ಪ್ರತಿಯೊಬ್ಬರೂ ಗುಂಡು, ತುಂಡು ಯಥೇಚ್ಛವಾಗಿ ಹೊಟ್ಟೆಗಿಳಿಸಿರಬಹುದೆಂದು ಹೇಳಲಾಗುತ್ತಿದೆ. ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡದ್ ಎಂಬವರು ಮಾಹಿತಿ ಹಕ್ಕಿನ ಕಾಯ್ದೆಯಡಿ ಈ ಮಾಹಿತಿಗಳನ್ನು ಬಯಲಿಗೆಳೆದಿದ್ದಾರೆ.

Write A Comment