ಮುಂಬೈ

ಅತ್ಯಾಚಾರಿಗೆ ಸಹಕಾರಿಯಾಗಿ ನಿಂತ ಮಹಿಳೆ..!

Pinterest LinkedIn Tumblr

7253constable-sent-to-10year-ri-in-a-7yearold-rape-case_051114091638

ಥಾಣೆ: ಯುವಕನೊಬ್ಬ ವಿವಾಹಿತ ಯುವತಿಯ ಮೇಲೆ ಮನೆಯಲ್ಲೇ ಅತ್ಯಾಚಾರವೆಸಗುತ್ತಿದ್ದ ವೇಳೆ ಮಹಿಳೆಯೊಬ್ಬಳು ಯಾರಾದರೂ ಬಂದರೆ ಎಚ್ಚರಿಕೆ ನೀಡಲೆಂದು ಹೊರಗೆ ನಿಂತು ಅತ್ಯಾಚಾರಿಗೆ ಸಹಕಾರ ನೀಡಿದ ಘಟನೆ ಬೆಳಕಿಗೆ ಬಂದಿದೆ.

ಮಹಾರಾಷ್ಟ್ರದ ಥಾಣೆಯ ವಾಗ್ಲೆ ಎಸ್ಟೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, 22 ವರ್ಷದ ವಿವಾಹಿತ ಯುವತಿಯೊಬ್ಬಳು ಸಾಯಿನಾಥ್ ನಗರದಲ್ಲಿರುವ ತನ್ನ ಸಂಬಂಧಿಯ ಮನೆಗೆ ಹೋದಾಗ 30 ವರ್ಷದ ಅಶೋಕ್ ಮಹತೋ ಎಂಬಾತ ಅತ್ಯಾಚಾರವೆಸಗಿದ್ದಾನೆ.

ಆತ ಮನೆಯೊಳಗೆ ಅತ್ಯಾಚಾರ ನಡೆಸುತ್ತಿದ್ದ ವೇಳೆ 27 ವರ್ಷದ ಅನಿತಾ ದೇವಿ ಎಂಬಾಕೆ ಯಾರಾದರೂ ಬಂದರೆ ಆತನಿಗೆ ಸೂಚನೆ ನೀಡುವ ಸಲುವಾಗಿ ಮನೆಯ ಹೊರಗೆ ಕಾವಲು ನಿಂತಿದ್ದಾಳೆ. ಇದೀಗ ಅತ್ಯಾಚಾರಕ್ಕೊಳಗಾದ ಯುವತಿ ಇಬ್ಬರ ವಿರುದ್ದವೂ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ವಾಗ್ಲೆ ಎಸ್ಟೇಟ್ ಠಾಣೆ ಪೊಲೀಸರು ಪರಾರಿಯಾಗಿರುವ ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

Write A Comment