ಮುಂಬೈ

ಕಲಿಯುಗದ ಕರ್ಣ: 200ಕೋಟಿ ರೂಪಾಯಿಗಳ ಆಸ್ತಿಯನ್ನು ಉದ್ಯೋಗಿಗಳಿಗೆ ಹಂಚಿದ ಮಾಲೀಕ

Pinterest LinkedIn Tumblr

hou

ಮುಂಬೈ,: ತಾವೇ ಸ್ಥಾಪಿಸಿದ ಹೌಸಿಂಗ್.ಕಾಮ್‌ಗೆ ನೀಡಿದ್ದ ರಾಜೀನಾಮೆಯನ್ನು ಹಿಂತೆಗೆದುಕೊಂಡ ಒಂದು ವಾರದಲ್ಲಿ ಕಂಪನಿಯ ಮುಖ್ಯ ಕಾರ್ಯ ನಿರ್ವಾಹಕ ರಾಹುಲ್ ಯಾದವ್ ಆಶ್ಚರ್ಯಕಾರಕ ನಡೆಯನ್ನು ಇಟ್ಟಿದ್ದಾರೆ. ಕಂಪನಿಯಲ್ಲಿ ತಮ್ಮ ಹೆಸರಿನಲ್ಲಿದ್ದ 150 ರಿಂದ 200 ಕೋಟಿಯಷ್ಟು ಷೇರುಗಳನ್ನು ಅವರು ಉದ್ಯೋಗಿಗಳಿಗೆ ಹಂಚಿದ್ದಾರೆ.

ರಾಹುಲ್ ಯಾದವ್ 150ರಿಂದ 200 ಕೋಟಿ ಬೆಲೆಬಾಳುವ ತಮ್ಮ ಖಾಸಗಿ ಷೇರುಗಳಗಳನ್ನು ತಮ್ಮ ಕಂಪನಿಯಾದ ಹೌಸಿಂಗ್. ಕಾಮ್‌ನ 2,251 ಉದ್ಯೋಗಿಗಳಿಗೆ ಹಂಚಿದ್ದಾರೆ ಎಂದು ಹೌಸಿಂಗ್ ಪೋರ್ಟಲ್ ಬುಧವಾರ ಸಾಯಂಕಾಲ ಹೇಳಿಕೆ ನೀಡಿದೆ.

ಪ್ರತಿಯೊಬ್ಬ ಉದ್ಯೋಗಿಗಳು ಪಡೆದಿರುವ ಷೇರು ಅವರ ಒಂದು ವರ್ಷದ ಸಂಬಳದಷ್ಟು ಮೌಲ್ಯವನ್ನು ಹೊಂದಿದೆ ಎಂದು ಪೋರ್ಟಲ್ ತಿಳಿಸಿದೆ.

ತಮ್ಮ ನಡೆಯನ್ನು ಸಮರ್ಥಿಸಿಕೊಂಡಿರುವ ಯಾದವ್, “ತನಗೆ ಕೇವಲ 26 ವರ್ಷ ವಯಸ್ಸಾಗಿದ್ದು, ಇದು ಹಣವನ್ನು ಸಂಪಾದಿಸುವುದನ್ನು ಗಂಭೀರವಾಗಿ ಪರಿಗಣಿಸುವ ಸಮಯವಲ್ಲ”, ಎಂದು ಹೇಳಿದ್ದಾರೆ.

Write A Comment