ಅಂತರಾಷ್ಟ್ರೀಯ

ಭಗವದ್ಗೀತೆ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಆಸ್ಟ್ರೇಲಿಯಾ ಸಂಸದ

Pinterest LinkedIn Tumblr

bag

ಮೆಲ್ಬೊರ್ನ್: ಆಸ್ಟ್ರೇಲಿಯಾದ ಸಂಸದರೊಬ್ಬರು ಭಗವದ್ಗೀತೆ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಗಮನ ಸೆಳೆದಿದ್ದಾರೆ. ಈ ಮೂಲಕ  ಹಿಂದೂಗಳ ಪವಿತ್ರ ಗೃಂಥ ಭಗವದ್ಗೀತೆ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಆಸ್ಟ್ರೇಲಿಯಾದ ಮೊದಲ ಸಂಸದ ಎಂದೆನಿಸಿದ್ದಾರೆ.

ಆಸ್ಟ್ರೇಲಿಯಾ ಸಂಸತ್‌ಗೆ ಮೊದಲ ಬಾರಿ ಆಯ್ಕೆಯಾಗಿರುವ ಡೇನಿಯಲ್ ಮುಖಿ (32)ಭಾರತೀಯ ಮೂಲದವರಾಗಿದ್ದು, ಅವರ ಪೋಷಕರು ಪಂಜಾಬ್‌ನವರಾಗಿದ್ದಾರೆ.

“ಇದೊಂದು ಹೆಮ್ಮೆಯ ಕ್ಷಣ. ಪರಮ ಪವಿತ್ರ ಗೃಂಥ ಭಗವದ್ಗೀತೆ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವುದು ನಿಜಕ್ಕೂ ಗೌರವದ ಸಂಗತಿ. ಬೈಬಲ್, ಕುರಾನ್‌ನಂತೆ ಗೀತೆ ಸಹ ವಿಶ್ವದ ಮಹಾನ್ ಧಾರ್ಮಿಕ ಗೃಂಥಗಳಲ್ಲೊಂದು. ಬಾಲ್ಯದಿಂದಲೂ ಇದು ನನ್ನ ಮೇಲೆ ಬಹಳಷ್ಟು ಪರಿಣಾಮ ಬೀರಿದೆ”, ಎಂದು ಅಭಿಮಾನದಿಂದ ಹೇಳುತ್ತಾರೆ ಡೇನಿಯಲ್.

32ರ ಹರೆಯದ ಡೇನಿಯಲ್ ಲೇಬರ್ ಪಕ್ಷವನ್ನು ಪ್ರತಿನಿಧಿಸುತ್ತಾರೆ.

Write A Comment