ಮುಂಬೈ

ಮಹಿಳೆ ಮೇಲೆ ಅತ್ಯಾಚಾರ ಆರೋಪ : ಇಂದು ಮಹಾರಾಷ್ಟ್ರ ಡಿಐಜಿ ಬಂಧನ

Pinterest LinkedIn Tumblr

mUMBAI-pOLICE

ಮುಂಬೈ, ಮೇ 6- ಅತ್ಯಾಚಾರ ಆರೋಪದಡಿ ಸೇವೆಯಿಂದ ಅಮಾನತುಗೊಂಡಿರುವ ಮಹಾರಾಷ್ಟ್ರದ ಡಿಐಜಿ ಸುನಿಲ್ ಪರಸ್ಕರ್ ಅವರನ್ನು ನಾಳೆ ಅಪರಾಧ ವಿಭಾಗದ ಪೊಲೀಸರು ಬಂಧಿಸುವುದು ಬಹುತೇಕ ಖಚಿತವಾಗಿದೆ. ಕಳೆದ ಶುಕ್ರವಾರ ಇಲ್ಲಿನ ಅಪರಾಧ ವಿಭಾಗದ ಪೊಲೀಸರು ಸುನಿಲ್ ಪರಸ್ಕರ್ ವಿರುದ್ಧ ವಿಶೇಷ ಮಹಿಳಾ ನ್ಯಾಯಾಲಯದಲ್ಲಿ ಅತ್ಯಾಚಾರ ಆರೋಪ ದೂರು ದಾಖಲಿಸಿದ್ದರು.  ಈಗಾಗಲೇ ಸೋಮವಾರ ಪರಸ್ಕರ್‌ಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದ್ದು, ಹೆಚ್ಚಿನ ವಿಚಾರಣೆಗಾಗಿ ನಾಳೆ ಸಿಸಿಬಿ ಪೊಲೀಸರು  ಅವರನ್ನು ಬಂಧಿಸಲಿದ್ದಾರೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.

ತಮ್ಮನ್ನು ಪೊಲೀಸರು ಬಂಧಿಸಬಹುದೆಂಬ ಕಾರಣಕ್ಕಾಗಿ ಪರಸ್ಕರ್ ಈಗಾಗಲೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಇಂದು ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ.  ಒಂದು ವೇಳೆ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದರೆ ನಾಳೆ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆಯುವುದು ಖಚಿತ.

ಒಂದು ವೇಳೆ ವಿಚಾರಣೆಗೆ ಅವರು ಗೈರು ಹಾಜರಾದರೆ ನಾಳೆ ಸಂಜೆಯೊಳಗೆ ಅವರನ್ನು ಬಂಧಿಸಲಿದ್ದೇವೆ ಎಂದು ಮುಂಬೈ ಅಪರಾಧ ವಿಭಾಗದ ಜಂಟಿ ಉಪ ಪೊಲೀಸ್ ಆಯುಕ್ತ ಅತುಲ್‌ಚಂದ್ರ ಕುಲಕರ್ಣಿ ತಿಳಿಸಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲು ಸಾಧ್ಯವಾಗಿಲ್ಲ. ನಾಳೆಯೊಳಗೆ ಅವರು ಗುಣಮುಖರಾಗುವ ಸಾಧ್ಯತೆಯಿರುವುದರಿಂದ ವಶಕ್ಕೆ ಪಡೆಯಲಿದ್ದೇವೆ ಎಂದು ಹೇಳಿದ್ದಾರೆ. ಅನಾಮಧೇಯ ಮಹಿಳೆಯೊಬ್ಬಳು, ಸುನಿಲ್ ಪರಸ್ಕರ್ ತಮ್ಮ ಮೇಲೆ ಬಂಗಲೆಯಲ್ಲಿ ಅತ್ಯಾಚಾರ ನಡೆಸಿದ್ದಾರೆಂದು ದೂರು ನೀಡಿದ್ದರು. 2013ರ ನವೆಂಬರ್‌ನಲ್ಲಿ ಇದೇ ಬಂಗಲೆಯಲ್ಲಿ ಮಹಿಳೆ ಜತೆ ಪರಸ್ಕರ್ ಇದ್ದರೆಂದು ಸಾರ್ವಜನಿಕರೊಬ್ಬರು ತಿಳಿಸಿದ್ದಾರೆ.   ನೇವಿ ಮುಂಬೈನಲ್ಲಿರುವ ಫ್ಲಾಟ್‌ನಲ್ಲಿ ಪರಸ್ಕರ್ ತನ್ನನ್ನು ಅತ್ಯಾಚಾರ ಮಾಡಿದ್ದಾರೆ. ಸಿಸಿಟಿವಿಯಲ್ಲಿ ಇದು ದಾಖಲಾಗಿದೆ ಎಂದು ನೊಂದ ಮಹಿಳೆ ದೂರು ನೀಡಿದ್ದಳು.

Write A Comment