ರಾಷ್ಟ್ರೀಯ

ಸಿಸಿಟಿವಿ ಫೋಟೋ ಪತ್ತೆಗೆ ಹೊಸ ಸಾಫ್ಟ್‌ವೇರ್ ಕಂಡುಹಿಡಿದ ಆಂಧ್ರ ಪೊಲೀಸರು

Pinterest LinkedIn Tumblr

CCTV-Police

ಹೈದ್ರಾಬಾದ್, ಮೇ 6- ಒಂದು ಬಾರಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಭಯೋತ್ಪಾದಕರು, ದರೋಡೆಕೋರರು ಮತ್ತಿತರ ಅಪರಾಧಿಗಳ ಮುಖಚಹರೆಯನ್ನು ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗುವಂತಹ ಮಹತ್ವದ ಸಾಫ್ಟ್‌ವೇರ್ ಒಂದನ್ನು ಆಂಧ್ರ ಪೊಲೀಸರು ಅಭಿವೃದ್ಧಿಪಡಿಸಿದ್ದು, ಶೀಘ್ರದಲ್ಲೇ ಬಳಕೆಯಲ್ಲಿ ಅಳವಡಿಸಿಕೊಳ್ಳಲಿದ್ದಾರೆ. ಶಂಕಿತ ಉಗ್ರರಿರಲಿ, ಕಳ್ಳರಿರಲಿ, ಅತ್ಯಾಚಾರಿಗಳಿರಲಿ ಸಿಸಿಟಿವಿಯಲ್ಲಿನ ಅವರ ಫೋಟೋವನ್ನು ಪೊಲೀಸ್ ದಾಖಲೆಯಲ್ಲಿರುವ ಅಪರಾಧಿಗಳಿಗೆ ಹೋಲಿಸಿ ನೋಡಿ ಆರೋಪಿಗಳನ್ನು ಶೀಘ್ರ ಪತ್ತೆಹಚ್ಚಿ ಬಂಧಿಸಲು ಈ ಸಾಫ್ಟ್‌ವೇರ್ ನೆರವಾಗಲಿದೆ.

ಸಿಸಿಟಿವಿಗಳಲ್ಲಿ ದಾಖಲಾದ ಚಿತ್ರಗಳನ್ನು ಕೆಲವೊಮ್ಮೆ ಗುರುತಿಸಲು ಬಹಳ ಕಷ್ಟವಾಗುತ್ತದೆ. ಅದರಿಂದ ಆ ಚಿತ್ರಗಳನ್ನು ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗುವಂಥ  ಸಾಫ್ಟ್‌ವೇರ್ ಅಭಿವೃದ್ಧಿಪಡಿಸುತ್ತಿದ್ದು, ಅದು ಮುಕ್ತಾಯದ ಹಂತದಲ್ಲಿದೆ. ಈ ಸಾಫ್ಟ್‌ವೇರ್ ಅಳವಡಿಸಿಕೊಂಡರೆ ಯಾವ ಅಪರಾಧಿಯೂ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಅಪರಾಧ ವಿಭಾಗದ ಹೆಚ್ಚುವರಿ ನಗರ ಆಯುಕ್ತರಾದ ಸ್ವಾಮಿ ಲಾಕ್ರಾ ತಿಳಿಸಿದ್ದಾರೆ.

Write A Comment