ಮುಂಬೈ

ಮಹಾರಾಷ್ಟ್ರದಲ್ಲಿ ಪಟಾಕಿ ಕಾರ್ಖಾನೆ ಸ್ಪೋಟ : ಆರು ಸಾವು

Pinterest LinkedIn Tumblr

Firecracker-blast

ಸಾಂಗ್ಲಿ: ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಸೋಮವಾರ ಸಂಜೆ ಪಟಾಕಿ ಕಾರ್ಖಾನೆ ಸ್ಪೋಟಿಸಿದ ದುರ್ಘಟನೆಯಿಂದ ಕನಿಷ್ಠ ಆರು ಜನ ಸತ್ತಿದ್ದು ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಸ್ಗಾಂವ್ ನಿಂದ ೧೫ಕಿಮೀ ದೂರದಲ್ಲಿರುವ ಕಾವ್ತೆಖಂಡ್ ಗ್ರಾಮದ ಈಗಲ್ ಪಟಾಕಿ ಕಾರ್ಖಾನೆಯ ಆವರಣದಲ್ಲಿ ಸಂಜೆ ಸುಮಾರು ೫:೪೫ರ ಹೊತ್ತಿಗೆ ಭಾರಿ ಸ್ಪೋಠ ಸಂಭವಿಸಿದೆ ಎಂದು ಸಾಂಗ್ಲಿಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆವರಣಕ್ಕೆ ಕೂಡಲೆ ಬಂದ ಪೊಲೀಸರು ಸ್ಪೋಟ ಕಾರಣವನ್ನು ವಿಚಾರಣೆ ನಡೆಸುತ್ತಿದ್ದಾರೆ.

ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ.
-ಕನ್ನಡ ಪ್ರಭ

Write A Comment