ರಾಷ್ಟ್ರೀಯ

ಮೋದಿಯನ್ನು ಟಾರ್ಗೆಟ್ ಮಾಡಿದ ಆಲ್‌ಖೈದಾ

Pinterest LinkedIn Tumblr

ಮೊ

ನವದೆಹಲಿ; ಆಲ್‌ಖೈದಾ ಹಿಟ್ ಲಿಸ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರೂ ಕೇಳಿ ಬರುತ್ತಿದ್ದು, ಆಲ್‌ಖೈದಾ ಸಂಘಟನೆಯು ಮೇ 2ರಂದು ವಿಡಿಯೋ ತುಣುಕೊಂದನ್ನು ಬಿಡುಗಡೆಗೊಳಿಸಿರುವುದರಲ್ಲಿ ಈ ವಿಷಯ ಬಯಲಾಗಿದೆ.

ಬಿಡುಗಡೆಯಾಗಿರುವ ವಿಡಿಯೋದಲ್ಲಿ ಆಲ್ ಖೈದಾ ನಾಯಕ ಅಸೀನ್ ಉಮರ್ ಅವರು ಮಾತನಾಡಿದ್ದಾರೆ. ಅದರಲ್ಲಿ ಪ್ರಧಾನಿ ಮೋದಿ ಅವರು ಮುಸ್ಲಿಂ ವಿರೋಧಿ ಭಾಷಣವನ್ನು ಮಾಡುತ್ತಿದ್ದು, ಅವರ ಭಾಷಣದ ವೈಖರಿ ಮುಸ್ಲಿಂ ಸಮುದಾಯದ ವಿರುದ್ಧ ಯುದ್ಧ ಸಾರಿದಂತಿರುತ್ತದೆ ಎಂದಿದ್ದು, ಇದೇ ಹೇಳಿಕೆಗಳ ಆಧಾರದ ಮೇಲೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಮೋದಿ ಅವರನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಅಂದಾಜಿಸಿದ್ದಾರೆ.

ಇನ್ನು ವಿಡಿಯೋವನ್ನು ಭಾರತದ ಭದ್ರತಾ ಇಲಾಖೆಯ ಉನ್ನತಾಧಿಕಾರಿಗಳ ತಂಡ ಪರಿಶೀಲಿಸುತ್ತಿದ್ದು, ಮುಂದಿನ ಕ್ರಮಕ್ಕೆ ಮುಂದಾಗಿದೆ.
-ವೆಬ್ ದುನಿಯಾ

Write A Comment