ರಾಷ್ಟ್ರೀಯ

ಮ.ಪ್ರದೇಶ: ಕಾಲುವೆಗೆ ಉರುಳಿ, ಹೊತ್ತಿ ಉರಿದ ಬಸ್, 35 ಮಂದಿ ಸಾವು

Pinterest LinkedIn Tumblr

bus

ಭೋಪಾಲ್: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಸೋಮವಾರ ಮಧ್ಯಾಹ್ನ ಬಸ್‌ವೊಂದು ಪನ್ನಾ ಬಳಿ ಕಾಲುವೆಗೆ ಉರುಳಿ, ಬೆಂಕಿ ಹೊತ್ತಿಕೊಂಡ ಪರಿಣಾಮ, 35 ಮಂದಿ ಸಜೀವ ದಹನವಾಗಿದ್ದಾರೆ ಮತ್ತು 12 ಪ್ರಾಯಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಛತ್ತರಪುರದಿಂದ ಸಾತ್ನಾಗೆ 42 ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಬಸ್, ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ನೀರಿರದ ಕಾಲುವೆಗೆ ಉರುಳಿ ಬಿದ್ದಿದೆ.

ಪಾಂಡವ ಫಾಲ್ಸ್ ಸಮೀಪದ ಪನ್ನಾ ರಾಷ್ಚ್ರೀಯ ಉದ್ಯಾನವನದ ಬಳಿ ಈ ದುರ್ಘಟನೆ ಸಂಭವಿಸಿದ್ದು, ಘಟನೆಯ ಕುರಿತು ಮಧ್ಯಪ್ರದೇಶ ಸರ್ಕಾರ ನ್ಯಾಯಾಂಗ ತನಿಖಗೆ ಆದೇಶಿಸಿದೆ. ಅಲ್ಲದೆ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಹಾಗೂ ಗಾಯಗೊಂಡವರಿಗೆ 50 ಸಾವಿರ ರುಪಾಯಿ ಪರಿಹಾರ ಘೋಷಿಸಿದೆ.

ಬಸ್ ಸುಮಾರು 15 ಅಡಿ ಆಳದ ಕಾಲುವೆಗೆ ಉರುಳಿ ಬೀಳುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಭೀಕರ ಅಪಘಾತದಲ್ಲಿ 28 ಮಂದಿ ಮೃತಪಟ್ಟಿದ್ದಾರೆ ಎಂದು ಮತ್ತು ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎನ್‌ಎನ್ ಚೌವ್ಹಾಣ್ ಅವರು ಹೇಳಿದ್ದಾರೆ. ಆದರೆ ಮೂಲಗಳ ಪ್ರಕಾರ ಕನಿಷ್ಠ 35 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
-ಕನ್ನಡ ಪ್ರಭ

Write A Comment