ಮುಂಬೈ

ಆರ್‌.ಕೆ. ಲಕ್ಷ್ಮಣ್‌ಗೆ ಅಂತಿಮ ನಮನ: ಸ್ಮಾರಕ ರಚಿಸಲಿರುವ ಮಹಾರಾಷ್ಟ್ರ

Pinterest LinkedIn Tumblr

pvec28jan15rjlaxman

ಪುಣೆ: ಖ್ಯಾತ ವ್ಯಂಗ್ಯ ಚಿತ್ರಕಾರ ಆರ್‌.ಕೆ. ಲಕ್ಷ್ಮಣ್‌ ಅವರ ಅಂತ್ಯಕ್ರಿಯೆ­ಯನ್ನು ಮಂಗಳವಾರ ಇಲ್ಲಿ ಸರ್ಕಾರಿ ಗೌರವದೊಂದಿಗೆ ನೆರವೇರಿಸ­ಲಾ­ಯಿತು.

ಇಲ್ಲಿನ ವೈಕುಂಠ ಚಿತಾಗಾರದಲ್ಲಿ ಅವರ ಪುತ್ರ ಶ್ರೀನಿವಾಸ ಅಂತಿಮ ವಿಧಿ­ಗಳನ್ನು ನಡೆಸಿದರು. ಮೃತರ ಗೌರ­ವಾರ್ಥ ಗಾಳಿಯಲ್ಲಿ ಗುಂಡು ಹಾರಿಸ­ಲಾಯಿತು. ಸಿಂಬಯೊಸಿಸ್‌ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಲಕ್ಷ್ಮಣ್‌ ಪಾರ್ಥಿವ ಶರೀರವನ್ನು ಅಂತಿಮ ದರ್ಶನ­ಕ್ಕಾಗಿ ಇಡಲಾಗಿತ್ತು.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌, ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ, ಶಿಕ್ಷಣ ಸಚಿವ ವಿನೋದ್‌ ತಾವಡೆ, ಮಹಾ­ರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್‌ ಠಾಕ್ರೆ ಲಕ್ಷ್ಮಣ್‌ ಅವರಿಗೆ ಪುಷ್ಪನಮನ ಸಲ್ಲಿಸಿದರು.

ಲಕ್ಷ್ಮಣ್‌ ಅವರ ‘ಸಾಮಾನ್ಯ ಮನುಷ್ಯ’ ಈ ಜಗತ್ತು ಅಂತ್ಯವಾಗು­ವ­ವರೆಗೆ ಇರುತ್ತಾನೆ. ರಾಜ­ಕೀಯ ವ್ಯವ­ಸ್ಥೆಯನ್ನು ಪ್ರಶ್ನಿಸುತ್ತಲೇ ಇರು­ತ್ತಾನೆ ಎಂದು ಫಡಣವೀಸ್‌ ಹೇಳಿದರು.

ಮಹಾರಾಷ್ಟ್ರ ಸರ್ಕಾರ ಲಕ್ಷ್ಮಣ್‌ ಅವರಿಗೆ ಸ್ಮಾರಕ ನಿರ್ಮಿಸಲು ಯೋಜಿ­­­ಸು­ತ್ತಿದೆ ಎಂದು ಶಿಕ್ಷಣ ಸಚಿವ ತಾವಡೆ ತಿಳಿಸಿದರು.
ತಮ್ಮ ತಂದೆ ಬಾಳ ಠಾಕ್ರೆ ಹಾಗೂ ಲಕ್ಷ್ಮಣ್‌ ಜತೆಯಾಗಿ ಕೆಲಸ ಮಾಡಿ­ದ್ದರು ಎಂಬುದನ್ನು ನೆನಪಿಸಿ­ಕೊಂಡ ಉದ್ಧವ್‌ ಠಾಕ್ರೆ, ಅವರು ಗೆರೆಗಳ ‘ಕೊನೆಯ ಚಕ್ರವರ್ತಿ’ ಎಂದು ಶ್ಲಾಘಿಸಿದರು.

ಅಂತಿಮ ದರ್ಶನ ಪಡೆದ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಪ್ರಧಾನಿ ಮೋದಿ ಅವರ ಸಂದೇಶವನ್ನು ತಲುಪಿಸಿದರು.

ಕೊನೆ ಕಾರ್ಟೂನ್
ಬೆಂಗಳೂರು (ಪಿಟಿಐ): ಆರ್‌.ಕೆ. ಲಕ್ಷ್ಮಣ್‌ ತಮ್ಮ ಕೊನೆಯ ದಿನಗಳಲ್ಲಿ ರಚಿ­ಸಿದ್ದ ಕಾರ್ಟೂನನ್ನು ಇಸ್ರೊ (ಭಾರ­ತೀಯ ಬಾಹ್ಯಾಕಾಶ ಸಂಸ್ಥೆ ) ಫೇಸ್‌­ಬುಕ್‌ ಪುಟದಲ್ಲಿ ಪ್ರಕಟಿಸುವ ಮೂಲಕ ಈ ವ್ಯಂಗ್ಯಚಿತ್ರಕಾರನಿಗೆ ಗೌರವ ಸಲ್ಲಿಸಿದೆ.

ಇಸ್ರೊದ ‘ಮಂಗಳಯಾನ’ ಯೋಜನೆ ನಿರ್ದೇಶಕರಾಗಿದ್ದ ಎಸ್‌. ಅರುಣನ್‌ ಡಿಸೆಂಬರ್‌ನಲ್ಲಿ ಪುಣೆಗೆ ತೆರಳಿದ್ದಾಗ ಲಕ್ಷ್ಮಣ್‌ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಜ.1ಕ್ಕೆ ಮಂಗಳ­ಯಾನ ಯೋಜನೆಗೆ 100 ದಿನ ಪೂರೈಸುತ್ತಿರು­ವು­ದ­ರಿಂದ ಕಾರ್ಟೂನ್‌ ಬಿಡಿಸಲು ಸಾಧ್ಯವೇ ಎಂದು ಮನವಿ ಮಾಡಿಕೊಂಡಿದ್ದರು.

ಡಿ.26ರಂದು ಲಕ್ಷ್ಮಣ್‌ ಬಿಡಿಸಿದ ಕಾರ್ಟೂನ್‌ ಅರುಣನ್‌ ಅವರಿಗೆ ತಲು­ಪಿತ್ತು. ಲಕ್ಷ್ಮಣ್‌ ಅವರ ಅಚ್ಚುಮೆಚ್ಚಿನ ‘ಸಾಮಾನ್ಯ ಮನುಷ್ಯ’ ಭಾರತದ ಧ್ವಜವನ್ನು ಹಿಡಿದು ಮಂಗಳಗ್ರಹಕ್ಕೆ ತಲುಪಿದ  ಕಾರ್ಟೂನ್‌ ಇದಾಗಿದೆ.

Write A Comment