ಮುಂಬೈ

ಮಾಟುಂಗಾದಲ್ಲಿ ನಡೆಸಲ್ಪಟ್ಟ ‘ಸಾಹಿತ್ಯ ವೇದಿಕೆ’ ಸಮಕಾಲೀನ ಸಾಹಿತ್ಯ ಸಂದರ್ಭ ಕಾರ್ಯಕ್ರಮ; ಹೆಣ್ಣಿಗೆ ಕಣ್ಣೀರ ಹನಿಗಳೇ ಮಾತುಗಳು: ಡಾ ಆಶಾದೇವಿ

Pinterest LinkedIn Tumblr

Rons Mumbai-Jan 4- 2015_001

ಮುಂಬಯಿ, ಜ.03: ಕೇಂದ್ರ ಸಾಹಿತ್ಯ ಅಕಾಡೆಮಿ ನವದೆಹಲಿ, ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ, ಕರ್ನಾಟಕ ಸಂಘ ಮುಂಬಯಿ ಮತ್ತು ಮೈಸೂರು ಅಸೋಸಿಯೇಶನ್ ಮುಂಬಯಿ ಸಂಸ್ಥೆಗಳ ಸಹಯೋಗದ ಲ್ಲಿ ಇಂದಿಲ್ಲಿ ‘ಸಾಹಿತ್ಯ ವೇದಿಕೆ’ ಸಮಕಾಲೀನ ಸಾಹಿತ್ಯ ಸಂದರ್ಭ ಕಾರ್ಯಕ್ರಮವನ್ನು ಇಂದಿಲ್ಲಿ ಶನಿವಾರ ಸಂಜೆ ಮಾಟುಂಗ ಪೂರ್ವದ ಮೈಸೂರು ಅಸೋಸಿಯೇಶನ್‌ನ ಸಭಾಗೃಹದಲ್ಲಿ ನಡೆಸಲ್ಪಟ್ಟಿತು.

ಡಾ ಹೆಚ್.ಎಸ್ ರಾಘವೇಂದ್ರ ರಾವ್, ಸ್ತ್ರೀವಾದಿ ಚಿಂತಕಿ ಡಾ ಎಂ.ಎಸ್ ಆಶಾದೇವಿ ಉಪಸ್ಥಿತರಿದ್ದು ‘ಸಮಕಾಲೀನ ಸಾಹಿತ್ಯ ಸಂದರ್ಭ’ ವಿಷಯದಲ್ಲಿ ಉಪನ್ಯಾಸ ನೀಡಿದರು. ಸಾಹಿತ್ಯ ಅಕಾಡೆಮಿ ಬೆಂಗಳೂರು ಇದರ ಪ್ರಾದೇಶಿಕ ಕಾರ್ಯದರ್ಶಿ ಎಸ್.ಪಿ ಮಹಾಲಿಂಗೇಶ್ವರ್, ಮೈಸೂರು ಅಸೋಸಿಯೇಶನ್ ನ ಅಧ್ಯಕ್ಷೆ ಕೆ.ಕಮಲಾ, ಸದಾನಂದ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಕಾರ್ಯದರ್ಶಿ ಎಸ್.ಕೆ ಸುಂದರ್, ಡಾ ಜ್ಯೋತಿ ಸತೀಶ್ ಮತ್ತು ಕೆ.ಶಿವರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಡಾ ಹೆಚ್.ಎಸ್ ರಾಘವೇಂದ್ರ ಅವರು ಹಿರಿಯ ರಂಗತಜ್ಞ, ನಿರ್ದೇಶಕ, ಕಲಾವಿದ ಸದಾನಂದ ಸುವರ್ಣ ಅವರು ಕೊಡಮಾಡಿದ ಡಾ ಶಿವರಾಮ ಕಾರಂತರ ದತ್ತಿ ಕಾರ್ಯಕ್ರಮಕ್ಕೆ ದೀಪ ಪ್ರಜ್ವಲಿಸಿ ಚಾಲನೆಯನ್ನಿತ್ತರು.

Rons Mumbai-Jan 4- 2015_002

Rons Mumbai-Jan 4- 2015_003

Rons Mumbai-Jan 4- 2015_004

Rons Mumbai-Jan 4- 2015_005

Rons Mumbai-Jan 4- 2015_006

Rons Mumbai-Jan 4- 2015_007

Rons Mumbai-Jan 4- 2015_008

Rons Mumbai-Jan 4- 2015_009

Rons Mumbai-Jan 4- 2015_010

Rons Mumbai-Jan 4- 2015_011

Rons Mumbai-Jan 4- 2015_012

Rons Mumbai-Jan 4- 2015_013

Rons Mumbai-Jan 4- 2015_014

Rons Mumbai-Jan 4- 2015_015

Rons Mumbai-Jan 4- 2015_016

ಹೆಣ್ಣಿಗೆ ಕಣ್ಣ ಹನಿಗಳೇ ಮಾತುಗಳು. ಸ್ತ್ರೀವಾದ ನೆನಪಿಸಿಕೊಳ್ಳುವ ವೇದಿಕೆಯಾಗಿರುವ ಈ ಕಾರ್ಯಕ್ರಮ ಮಹಿಳಾನುಭವಿಗಳನ್ನಾಗಿಸುವುದು. ಪ್ರತೀಯೋರ್ವರು ಹೆಣ್ಣಿನ ವ್ಯಕ್ತಿತ್ವದ ಪರಿಕಲ್ಪನೆಗಳು ತಿಳಿಯಬೇಕು. ಶೀಲ ಎನ್ನುವುದಿದ್ದರೆ ಅದು ಹೆಣ್ಣು ಮತ್ತು ಗಂಡಿಗೆ ಸಮಗ್ರಹಕವಾಗಿದೆ. ಆತ್ಮ ಘನತೆಯಲ್ಲಿ ಹೆಣ್ಣನ್ನು ಕಂಡಾಗಲೇ ಸ್ತ್ರೀಯಾಭಿಮಾನ ಬೆಳೆಯುವುದು ಎಂದು ಡಾ ಎಂ.ಎಸ್ ಆಶಾದೇವಿ ತಿಳಿಸಿದರು.

ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ ಡಾ ಜಿ.ಎನ್ ಉಪಾಧ್ಯ ಸ್ವಾಗತಿಸಿ ಪ್ರಾಸ್ತವಿಕ ನುಡಿಗಳನ್ನಾಡಿ ಮುಂಬಯಿಯಲ್ಲಿ ಕನ್ನಡದ ತೇರನ್ನೆಳೆಯಲು ನೂರತ್ತು ಸಂಸ್ಥೆಗಳು ಕ್ರಿಯಾಶೀಲವಾಗಿದೆ. ಜಗತ್ತಿನ್ನೆಲ್ಲೆಲ್ಲೂ ಇಲ್ಲದ ಕನ್ನಡ ಸಂಸ್ಥೆಗಳು ಮಾಯಾನಗರಿಯಲ್ಲಿವೆ. ಈ ಎಲ್ಲಾ ಸಂಸ್ಥೆಗಳು ಮಹತ್ವದ ಸಾಧನೆಗೈದು ಕನ್ನಡದ ಅಸ್ತಿತ್ವ ಉಳಿಸಿಕೊಂಡು ಬಂದಿವೆ. ಇಲ್ಲಿನ ಕನ್ನಡ ವಿಭಾಗವು ಅಷ್ಟೇ ಬರೇ ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರ ಕನ್ನಡದ ಕೈಂಕರ್ಯ, ವಿಚಾರ ತಿಳಿಸದೆ ಸಮಗ್ರ ಕನ್ನಡಿಗರ ಮನ ಮನೆಗಳಿಗೆ ಕನ್ನಡಾಂಭೆಯ ಸೇವೆ ಮುಟ್ಟಿಸುವ ಪ್ರಯತ್ನ ನಡೆಸುತ್ತಿದೆ ಎಂದರು. ಹಾಗೂ ಆಶಯ ನುಡಿಗಳ್ನಾಡಿ ಕಾರಂತರು ಮರಾಠಿಗಳಲ್ಲಿ ಜನಪ್ರಿಯರಾಗಿದ್ದರು ಎಂದರು.

ಸಾಹಿತ್ಯ ಅಕಾಡೆಮಿಯು ಪುಸ್ತಕ ಪ್ರದರ್ಶನ ಮತ್ತು ಪತ್ರಕರ್ತ ಶೇಖರ ಅಜೆಕಾರು ಮೂಡಬಿದಿರೆ ಅವರು ಚಿತ್ತಲರ ಜೀವನಚಿತ್ರಗಳನ್ನು ಪ್ರದರ್ಶಿಸಿದರು. ಶ್ಯಾಮಲಾ ರಾಧೇಶ್ ಅವರು ಗೀತ ಗುಂಜನಗೈದರು. ಡಾ ಪೂರ್ಣಿಮಾ ಎಸ್.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪಿ.ಚಂದ್ರಿಕಾ ಬೆಂಗಳೂರು ಅವರು ಉಪನ್ಯಾಸಕರನ್ನು ಪರಿಚಯಿಸಿದರು. ನಾರಾಯಣ ನವಿಲೇಕರ್ ವಂದಿಸಿದರು.
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

Write A Comment