ಮುಂಬೈ

ಕನ್ನಡ ಭವನ ಎಜ್ಯುಕೇಶನ್ ಸೊಸೈಟಿ ಹೈಸ್ಕೂಲುನ ಸುವರ್ಣಮಹೋತ್ಸವ ಸಮಾರೋಪ; ಮಾನವನ ಬಾಳಿಗೆ ವಿದ್ಯೆಯೇ ಪ್ರಧಾನವಾಗಿದೆ :ವಿವೇಕ್ ಶೆಟ್ಟಿ

Pinterest LinkedIn Tumblr

Kannada bhavana mumbai-Jan 4- 2015_001

ಮುಂಬಯಿ, ಜ. 4: ಕನ್ನಡ ಭವನ ಎಜ್ಯುಕೇಶನ್ ಸೊಸೈಟಿ ಹೈಸ್ಕೂಲು ಇದರ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭವು ಇಂದಿಲ್ಲಿ ಶನಿವಾರ ಸಂಜೆ ಮಾಟುಂಗಾ ಪಶ್ಚಿಮದಲ್ಲಿನ ಕರ್ನಾಟಕ ಸಂಘ ಮುಂಬಯಿ ಇದದ ಡಾ ಎಂ.ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಅದ್ದೂರಿಯಾಗಿ ನೇರವೇರಿಸಲ್ಪಟ್ಟಿತು.

ಎಜ್ಯುಕೇಶನ್ ಸೊಸೈಟಿಯ ಕಾರ್ಯಾಧ್ಯಕ್ಷ ಎ.ಬಿ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಸಮಾರಂಭದಲ್ಲಿ ಕನ್ನಡ ಭವನ ವಹಿಸಿದ್ದು, ಮುಖ್ಯ ಅತಿಥಿಯಾಗಿ ವಿಸ್ವಾತ್ ಕೆಮಿಕಲ್ಸ್ ಲಿಮಿಟೆಡ್‌ನ ಕಾರ್ಯಾಧ್ಯಕ್ಷ ಬಿ.ವಿವೇಕ್ ಶೆಟ್ಟಿ, ಗೌರವ ಅತಿಥಿಗಳಾಗಿ ಮನಿೊಲ್ಡ್ ಕೋ.ಆಫ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್‌ನ ಕಾರ್ಯಾಧ್ಯಕ್ಷ ಕಡಂದಲೆ ಸುರೇಶ ಎಸ್.ಭಂಡಾರಿ, ಮಹಾರಾಜ ಗ್ರೂಪ್ಸ್ ಪ್ರಾಜೆಕ್ಟ್‌ನ ಕಾರ್ಯಾಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ, ಯುವ ಉದ್ಯಮಿ ಶ್ರೀನಿವಾಸ ಶೆಟ್ಟಿ ಉಪಸ್ಥಿತರಿದ್ದು, ವಿವೇಕ್ ಶೆಟ್ಟಿ ಅವರು ಸುವರ್ಣಮಹೋತ್ಸವದ ಸ್ಮರಣ ಸಂಚಿಕೆ ‘ಮಧುರವಾಣಿ’ ಬಿಡುಗಡೆ ಗೊಳಿಸಿದರು.

Kannada bhavana mumbai-Jan 4- 2015_002

Kannada bhavana mumbai-Jan 4- 2015_003

Kannada bhavana mumbai-Jan 4- 2015_004

Kannada bhavana mumbai-Jan 4- 2015_005

Kannada bhavana mumbai-Jan 4- 2015_006

Kannada bhavana mumbai-Jan 4- 2015_007

Kannada bhavana mumbai-Jan 4- 2015_008

Kannada bhavana mumbai-Jan 4- 2015_009

Kannada bhavana mumbai-Jan 4- 2015_010

Kannada bhavana mumbai-Jan 4- 2015_011

Kannada bhavana mumbai-Jan 4- 2015_012

ಮಾನವನ ಬಾಳಿಗೆ ವಿದ್ಯೆಯೇ ಪ್ರಧಾನವಾದದ್ದು. ಶಿಕ್ಷಣವು ಮನುಕುಲಕ್ಕೆ ಬಹು ಮುಖ್ಯವಾದ ವಿಷಯ. ನನಗೆ ವಿದ್ಯೆ ತುಂಬಾ ಹತ್ತಿರವಾದ ವಿಷಯ ಮತ್ತು ಮಹತ್ವವಾದುದು. ವಿದ್ಯಾರ್ಜನೆಯಿಂದಲೇ ರಾಷ್ಟ್ರ ಅಭಿವೃದ್ಧಿ ಹೊಂದಿದ್ದು, ಅಂತೆಯೇ ಈ ಸಂಸ್ಥೆಯೂ ಐದು ದಶಕಗಳಲ್ಲಿ ಸಾವಿರಾರು ಮಕ್ಕಳಿಗೆ ಬೋಧಿಸಿ ಮನುಕುಲಕ್ಕೆ ವರವಾಗಿದೆ. ಮುಂದಿನ 50 ವರ್ಷಗಳಲ್ಲಿ ಡಿಜಿಟಲ್ ಆಗುವಂತಿದೆ. ನನಗೆ ಇಬ್ಬರು ತಾಯಂದಿರು. ಒಂದು ಹೆತ್ತ ತಾಯಿ. ಮತ್ತೊಂದು ಹುಟ್ಟೂರು (ಹೊತ್ತ). ಆಧುನಿಕ ಶಿಕ್ಷಣದಿಂದ ಎಲ್ಲರಿಗೂ ಬೀಲ್‌ಗೇಟ್ ಆಗುಬಹುದು ಆದರೆ ಸಂದರ್ಭದ ಮತ್ತು ಸುಶಿಕ್ಷಣದ ಅಗತ್ಯವಿದೆ. ಒಳ್ಳೆಯ ಶಿಕ್ಷಕ ಒಳ್ಳೆಯ ಮನುಷ್ಯನಾಗಬೇಕಾಗಿಲ್ಲ ಆದರೆ ಒಳ್ಳೆಯ ಮನುಷ್ಯ ಒಳ್ಳೆಯ ಶಿಕ್ಷಕನಾಗುತ್ತಾನೆ ಎನ್ನುತ್ತಾ ವಿದ್ಯೆಗೆ ಪ್ರೋತ್ಸಾಹವಾಗಿ ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೇಯಲ್ಲಿ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾಡವರಿಗೆ 5,000 ರೂಪಾಯಿ ಬಹುಮಾನ ನೀಡುತ್ತೇನೆ ಎಂದು ವಿವೇಕ್ ಶೆಟ್ಟಿ ತಿಳಿಸಿದರು.
ಸುರೇಶ ಭಂಡಾರಿ ಮಾತನಾಡಿ ಹಿರಿಯರು ಹೊಟ್ಟೆಪಾಡಿಗಾಗಿ ಮುಂಬಯಿಗೆ ವಲಸೆ ಬಂದರು. ಜೀನವೋಪಾಯದೊಂದಿಗೆ ಅನೇಕ ಸಂಘ ಸಂಸ್ಥೆಗಳನ್ನು ಮತ್ತು ಶಾಲೆಗಳನ್ನು ಕಟ್ಟಿ ಸಮಾಜಕ್ಕೆ ಮುಡುಪಾಗಿಸಿದರು. ಶಾಲೆ ಕಟ್ಟುವುದು ಸುಲಭದ ಕೆಲಸ ಆದರೆ 50 ವರ್ಷಗಳ ಕಾಲ ಅದನ್ನು ನಡೆಸಿ ಮುನ್ನಡೆಸುವುದು ಕಠಿಣದ ಕೆಲಸ. ಶಿಕ್ಷಕರ ಬುದ್ಧಿವಾದ ಆದರ್ಶ ನಮ್ಮ ಜೀವನದಲ್ಲಿ ಅಳವಡಿಸಿದರೆ ಜೀವನ ಸ್ಥಿರವಾಗಿ ಉಳಿಯುವುದು. ದೇಶಕ್ಕೆ ಸಂವಿಧಾನ ಇಂದಂತೆ ಜೀವನಕ್ಕೆ ಆದರ್ಶವಾಗಿರುತ್ತದೆ ಎಂದರು.

ದೇಶದ ಭವಿಷ್ಯ ಮಕ್ಕಳ ಕೈಯಲ್ಲಿದೆ. ಆದುದರಿಂದ ಜನ್ಮವಿತ್ತು ಸಾಕಿದ ಮಾತಾಪಿತರು, ವಿದ್ಯೆಯನ್ನೀಡಿದ ಗುರುಗಳನ್ನು ಮಕ್ಕಳು ಮರೆಯ ಬಾರದು. ಅವರನ್ನು ಪೂಜ್ಯನೀಯ ಸ್ಥಾನದಿಂದ ಕಂಡು ನಿಮ್ಮ ಬದುಕನ್ನು ನನಸಾಗಿಸಬೇಕು. ಇವರಿಂದ ಕಲಿತ ವಿದ್ಯೆ ಹಾಗೂ ಮಾರ್ಗದರ್ಶನ ಮುಂದಿನ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ನಾಂದಿಯಾಗಿರುತ್ತದೆ ಎಂದು ಚಂದ್ರಹಾಸ ಶೆಟ್ಟಿ ನುಡಿದರು.

ಮಕ್ಕಳಿಗೆ ಶಿಕ್ಷಣದ ಅಗತ್ಯವಿದೆ. ಮನುಷ್ಯನು ಪ್ರಾಯ ಆದಂತೆ ದೈಹಿಕವಾಗಿ ಕ್ಷೀಣಿಸುತ್ತಾನೆ. ಆದರೆ ಸಂಸ್ಥೆಯು ಪ್ರಾಯ ಆದಂತೆ ಪ್ರಬಲವಾಗಿ ಹೋಗುತ್ತದೆ. ಇಂತಹ ಸಂಸ್ಥೆಯಲ್ಲೊಂದು ಕನ್ನಡ ಭವನ ಎಜ್ಯುಕೇಶನ್ ಸೊಸೈಟಿ ಎನ್ನಲು ಅಭಿಮಾನ ಅಣಿಸುತ್ತಿದೆ ಎಂದು ಅಧ್ಯಕ್ಷೀಯ ನುಡಿಗಳನ್ನಾಡಿ ಕಾರ್ಯಾಧ್ಯಕ್ಷ ಎ.ಬಿ ಶೆಟ್ಟಿ ತಿಳಿಸಿದರು.

Kannada bhavana mumbai-Jan 4- 2015_013

Kannada bhavana mumbai-Jan 4- 2015_014

Kannada bhavana mumbai-Jan 4- 2015_015

Kannada bhavana mumbai-Jan 4- 2015_016

Kannada bhavana mumbai-Jan 4- 2015_017

Kannada bhavana mumbai-Jan 4- 2015_018

Kannada bhavana mumbai-Jan 4- 2015_019

Kannada bhavana mumbai-Jan 4- 2015_020

Kannada bhavana mumbai-Jan 4- 2015_021

Kannada bhavana mumbai-Jan 4- 2015_022

Kannada bhavana mumbai-Jan 4- 2015_023

Kannada bhavana mumbai-Jan 4- 2015_024

ಇದೇ ಸಂದರ್ಭದಲ್ಲಿ ಅತಿಥಿವರ್ಯರು ಸಂಸ್ಥೆಯ ಕಿರಿಯ ಮಹಾವಿದ್ಯಾಲಯದ ಪ್ರಾಧ್ಯಾಪಕರುಗಳು, ಶಾಲಾ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು, ಸ್ಥಾಪಕ ಪ್ರಾಂಶುಪಾಲ ರಾಮ್‌ನಾರಾಯಣ ಐಲ್, ಮಾಜಿ ಪ್ರಾಂಶುಪಾಲೆ ಸುಲೋಚನಾ ಮೂರ್ತಿ ಮತ್ತು ಹಾಲಿ ಪ್ರಾಂಶುಪಾಲ ಸುರೇಶ ಎಸ್.ಸುವರ್ಣ ಅವರಿಗೆ ಸನ್ಮಾನಿಸಿ ಅಭಿನಂದಿಸಿದರು ಹಾಗೂ ಅಂತರ್ ಶಾಲಾ ಪ್ರತಿಭಾ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ, ಕ್ರಿಡೋತ್ಸವದ ಚಾಂಪಿಯಾನ್ ಬಹುಮಾನಗಳನ್ನು ಮತ್ತು ವಿದ್ಯಾರ್ಥಿ ವೇತನ ವಿತರಿಸಿ ಶುಭಾರೈಸಿದರು. ಅಂತೆಯೇ ಸೊಸೈಟಿಯ ಹಿರಿಯ ಸದಸ್ಯರುಗಳಾದ ಹೆಚ್.ಪಿ ಅಮೀನ್, ಶ್ರೀನಿವಾಸ ಶೆಟ್ಟಿ, ಎಲ್.ಎಸ್ ಶೆಟ್ಟಿ, ಶಿವಾನಂದ ಶೆಟ್ಟಿಗಾರ್, ವಾಸ್ತುತಜ್ಞ ಪಂಡಿತ್ ನವೀನ್‌ಚಂದ್ರ ಸನೀಲ್ ಮತ್ತಿತರರನ್ನು ಗೌರವಿಸಿದರು.

ವೇದಿಕೆಯಲ್ಲಿ ಎಜುಕೇಶನ್ ಸೊಸೈಟಿಯ ಉಪ ಕಾರ್ಯಾಧ್ಯಕ್ಷರುಗಳಾದ ರಾಮ್‌ನಾರಾಯಣ ಐಲ್, ಡಿ.ಬಿ ಅಮೀನ್, ಗೌ ಕೋಶಾಧಿಕಾರಿ ಪುರುಷೋತ್ತಮ ಎಂ. ಪೂಜಾರಿ, ಆಸೀನರಾಗಿದ್ದು, ಪ್ರಾಂಶುಪಾಲ ಸುರೇಶ ಎಸ್.ಸುವರ್ಣ ಸ್ವಾಗತಿಸಿದರು. ಗೌ ಪ್ರ ಕಾರ್ಯದರ್ಶಿ ಶೇಖರ ಎ.ಅಮೀನ್ ಸಂಸ್ಥೆಯ ಹುಟ್ಟು ಮತ್ತು ಸಾಧನೆಯ ಹಾದಿಯ ಸ್ಥೂಲವಾದ ಮಾಹಿತಿ ನೀಡಿದರು. ಶಿಕ್ಷಕರುಗಳಾದ ಪ್ರಭಾ ನಾಯಕ್, ವಸಂತಿ ಶೆಟ್ಟಿ, ಎಸ್.ರಾಧಾಕೃಷ್ಣನ್ ಪ್ರತಿಭಾನ್ವಿತರ ಪಟ್ಟಿ ವಾಚಿಸಿದರು. ಶಿಕ್ಷಕಿ ಅಮೃತಾ ಶೆಟ್ಟಿ ಅವರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಾಗೂ ಕೇಶವ ಕೆ.ಕೋಟ್ಯಾನ್ ಸಭಾ ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ದೇವದಾಸ್ ಕುಲಾಲ್ ವಂದನಾರ್ಪಣೆಗೈದರು.

ಮನೋರಂಜನಾ ಕಾರ್ಯಕ್ರಮದ ಅಂಗವಾಗಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು. ಹಾಗೂ ಪದ್ಮನಾಭ ಸಸಿಹಿತ್ಲು ಅವರ ಕಲಾಸೌರಭ ತಂಡವು ಗಾಯನ, ನರ್ತನ ಹಾಸ್ಯದ ಸಮ್ಮೀಲವನ್ನಾಗಿಸಿ ‘ಸಂಗೀತ ಶೃಂಗಾರ’ ಕಾರ್ಯಕ್ರಮ ಸಾದರ ಪಡಿಸಿದರು. ಪುಷ್ಕಳ್ ಕುಮಾರ್ ತೋನ್ಸೆ ಅವರು ಅತಿಥಿ ಕಲಾವಿದರಾಗಿ ಕಲಾರಸಿಕರನ್ನು ಸೆಳೆದರು.
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

Write A Comment