ಮನೋರಂಜನೆ

7 ಪ್ರಾದೇಶಿಕ ಭಾಷೆಗಳಲ್ಲಿ ಸಚಿನ್ ತೆಂಡುಲ್ಕರ್ ಆತ್ಮಕಥೆ ಪ್ಲೇಯಿಂಗ್ ಇಟ್ ಮೈ ವೆ ಪ್ರಕಟ

Pinterest LinkedIn Tumblr

sachin-book

ಮುಂಬೈ: ಅತ್ಯಧಿಕ ಬೇಡಿಕೆಯಿರುವ ಸಚಿನ್ ತೆಂಡುಲ್ಕರ್ ಅವರ ದಾಖಲೆ ಮುರಿದ ಆತ್ಮಕತೆ “ಪ್ಲೇಯಿಂಗ್ ಇಟ್ ಮೈ ವೆ” ಇನ್ನೂ ಏಳು ಪ್ರಾದೇಶಿಕ ಭಾಷೆಗಳಲ್ಲಿ ಪ್ರಕಟವಾಗಲಿದೆ. ದೇಶದ ವಿವಿಧ ಪ್ರಕಾಶಕರು ಆಸಕ್ತಿ ತೋರಿರುವ ಹಿನ್ನಲೆಯಲ್ಲಿ ಈ ಇಂಗ್ಲಿಶ್ ಪುಸ್ತಕದ ಪ್ರಕಾಶನ ಸಂಸ್ಥೆ ಹ್ಯಾಶೆಟ್ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಈ ಪುಸ್ತಕವನ್ನು ಜೊತೆಯಾಗಿ ಪ್ರಕಟಿಸಲಿದೆ.

“ಇಂಗ್ಲಿಶ್ ಪುಸ್ತಕದ ಬಿಡುಗಡೆಗೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ. ಆದುದರಿಂದ ಪ್ರಾದೇಶಿಕ ಭಾಷೆಗಳಲ್ಲಿ ಈ ಪುಸ್ತಕವನ್ನು ಪ್ರಕಟಿಸಲು ವಿವಿಧ ಪ್ರಕಾಶಕರ ಜೊತೆ ಮಾತುಕತೆ ನಡೆಸುತ್ತಿದ್ದೇವೆ. ಮರಾಠಿ, ಹಿಂದಿ, ಗುಜರಾತಿ, ಮಲಯಾಳಂ, ಅಸ್ಸಾಮಿ, ತೆಲುಗು ಮತ್ತು ಬೆಂಗಾಳಿ ಪ್ರಕಾಶಕರ ಜೊತೆ ಪ್ರಕಟಿಸಲು ಮಾತುಕತೆ ನಡೆಸುತ್ತಿದ್ದೇವೆ. ಮುಂದಿನ ವರ್ಷದ ಒಳಗೆ ಈ ಮಾತುಕತೆಗಳು ಸಂಪೂರ್ಣಗೊಳ್ಳಲಿದ್ದು, ೨೦೧೫ ಬೇಸಿಗೆಯ ಒಳಗೆ ಪ್ರಾದೇಶಿಕ ಭಾಷೆಗಳಲ್ಲಿ ಪುಸ್ತಕ ಹೊರಬರಲಿದೆ” ಎಂದು ಹ್ಯಾಶೆಟ್ ಭಾರತದ ಪ್ರಕಾಶಕಿ ಪೌಲಮಿ ಚಟರ್ಜಿ ತಿಳಿಸಿದ್ದಾರೆ.

ನವೆಂಬರ್ ೬ ರಂದು ಬಿಡುಗಡೆಯಾದ ಈ ಪುಸ್ತಕ ಈ ಹಿಂದಿನ ಎಲ್ಲ ದಾಖಲೆಗಳನ್ನೂ ಮುರಿದಿದೆ. ಡ್ಯಾನ್ ಬ್ರೌನ್ ಅವರ ಇನ್ಫರ್ನೋ, ವಾಲ್ಟರ್ ಐಸಾಕ್ಸನ್ ಅವರ ಸ್ಟೀವ್ ಜಾಬ್ಸ್ ಮತ್ತು ಜೆ ಕೆ ರೌಲಿಂಗ್ಸ್ ಅವರ ಕ್ಯಾಶುಯಲ್ ವೇಕೆನ್ಸಿ ಪುಸ್ತಕಳಿಗೂ ಮುಂಚೂಣಿಯಲ್ಲಿ ಈ ಪುಸ್ತಕ ಮಾರಾಟವಾಗುತ್ತಿದ್ದು, ಇಲ್ಲಿಯವರೆಗೂ ೨ ಲಕ್ಷ ಪ್ರತಿಗಳು ಮಾರಾಟವಾಗಿವೆ” ಎಂದು ಹ್ಯಾಶೆಟ್ ಇಂಡಿಯಾ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Write A Comment