ಮುಂಬೈ

ಬಂಟರ ಸಂಘ ಸಿಟಿ ಪ್ರಾದೇಶಿಕ ಸಮಿತಿಗೆ ಪ್ರಶಸ್ತಿ, ಸ್ನೇಹಕೂಟ, ಸಮ್ಮಾನ

Pinterest LinkedIn Tumblr

Bunts Mumbai_Oct 10_2014_001

ಮುಂಬಯಿ: ಬಂಟರ ಸಂಘ ಮುಂಬಯಿಯ ಪ್ರಾದೇಶಿಕ ಸಮಿತಿಗಳಲ್ಲೊಂದಾದ ಸಿಟಿ ಪ್ರಾದೇಶಿಕ ಸಮಿತಿಯ ಕಳೆದ ಮೂರು ವರ್ಷಗಳ ಸಾರ್ಥಕ ಸಾಧನೆಗಾಗಿ ಸಂಘದ ಮಾಜಿ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರು ಪ್ರತಿ ವರ್ಷ ಕೊಡಮಾಡುವ ’ಸಂಘದ ಅತ್ಯುತ್ತಮ ಪ್ರಾದೇಶಿಕ ಸಮಿತ” ಪ್ರಶಸ್ತಿಗೆ ಈ ಬಾರಿ ಆಯ್ಕೆಯಾಗಿದ್ದು, ಇದರ ಅಂಗವಾಗಿ ಸ್ನೇಹಕೂಟವು ಅ. 7ರಂದು ನಾನಾಚೌಕ್‌ನ ಕೃಷ್ಣ ಪ್ಯಾಲೇಸ್‌ ಸಭಾಗೃಹದಲ್ಲಿ ಸಂಘದ ಅಧ್ಯಕ್ಷ ಸಿಎ ಶಂಕರ ಬಿ. ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು.

ಸ್ನೇಹಕೂಟವನ್ನು ಅಣ್ಣಯ್ಯ ಶೆಟ್ಟಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಘದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರಾದೇಶಿಕ ಸಮನ್ವಯಕ ರತ್ನಾಕರ ಶೆಟ್ಟಿ ಮುಂಡ್ಕೂರು, ಜತೆ ಕಾರ್ಯದರ್ಶಿ ಉಳ್ತೂರು ಮೋಹನ್‌ದಾಸ್‌ ಶೆಟ್ಟಿ, ಜತೆ ಕೋಶಾಧಿಕಾರಿ ಪ್ರವೀಣ್‌ ಬಿ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಪಿ. ಶೆಟ್ಟಿ, ಪ್ರಭಾಕರ ಎಲ್‌. ಶೆಟ್ಟಿ ದಂಪತಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಶಿವಪ್ರಸಾದ್‌ ಶೆಟ್ಟಿ ಅವರನ್ನು ವಿಶೇಷವಾಗಿ ಸಮ್ಮಾನಿಸಲಾಯಿತು. ಸಂಘದ ಸಿಟಿ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಕೃಷ್ಣ ವಿ. ಶೆಟ್ಟಿ, ಕಲ್ಪನಾ ಕೆ. ಶೆಟ್ಟಿ ದಂಪತಿ, ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೆ. ಶೆಟ್ಟಿ, ಕೃಷ್ಣ ಶೆಟ್ಟಿ ದಂಪತಿಯನ್ನು ಸಂಘದ ಪರವಾಗಿ ಹಾಗೂ ಪ್ರಾದೇಶಿಕ ಮಿತಿಯ ಪರವಾಗಿ ಸತ್ಕರಿಸಲಾಯಿತು.

ಸಿಟಿ ಪ್ರಾದೇಶಿಕ ಸಮಿತಿ ಪದಾಧಿಕಾರಿಗಳು, ಉಪಸಮಿತಿಯ ಕಾರ್ಯಾಧ್ಯಕ್ಷರು, ಸಂಘದ ಮಹಿಳಾ ವಿಭಾಗದ ಪದಾಧಿಕಾರಿಗಳು, ವಿವಿಧ ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

Bunts Mumbai_Oct 10_2014_004

Bunts Mumbai_Oct 10_2014_009

Bunts Mumbai_Oct 10_2014_005

Bunts Mumbai_Oct 10_2014_008

Bunts Mumbai_Oct 10_2014_007

Bunts Mumbai_Oct 10_2014_006

Bunts Mumbai_Oct 10_2014_003

Bunts Mumbai_Oct 10_2014_002

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಎ ಶಂಕರ ಬಿ. ಶೆಟ್ಟಿ ಯವರು ಸಂಘದ ಸಿಟಿ ಪ್ರಾದೇಶಿಕ ಸಮಿತಿಯ ಶಿಸ್ತು, ಪರಿಶ್ರಮ ವನ್ನು ಮೆಚ್ಚಿ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರನ್ನು ಅಭಿನಂದಿಸಿದರು.

ರತ್ನಾಕರ ಶೆಟ್ಟಿ ಮುಂಡ್ಕೂರು ಅವರು ಮಾತನಾಡಿ, ಅತ್ಯುತ್ತಮ ಪ್ರಾದೇಶಿಕ ಸಮಿತಿ ಪ್ರಶಸ್ತಿ ಪಡೆದಿರುವ ಮೂರು ಸಮಿತಿಗಳ ಕಾರ್ಯಾಧ್ಯಕ್ಷರು ಸಂತಸ ಕೂಟದಲ್ಲಿರುವುದನ್ನು ಕಂಡು ಸಂತೋಷ ವ್ಯಕ್ತಪಡಿಸುತ್ತಾ, ಸಿಟಿ ಪ್ರಾದೇಶಿಕ ಸಮಿತಿಯ ಮಹಿಳಾ ಕಾರ್ಯಾಧ್ಯಕ್ಷೆ ಉಮಾ ಕೆ. ಶೆಟ್ಟಿ ಮಾತೃಭೂಮಿಯ ಶೇರು ಬಂಡವಾಳಕ್ಕೆ ರೂ. 50 ಲಕ್ಷ ರೂ. ನೀಡಿ ಪ್ರೋತ್ಸಾಹಿಸಿರುವುದರ ಜತೆಗೆ ಒಟ್ಟು ರೂ. 8 ಕೋಟಿ ಶೇರು ಬಂಡವಾಳ ಸಂಗ್ರಹಿಸಿರುವುದನ್ನು ನೆನಪಿಸಿಕೊಂಡರು.

ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಕೃಷ್ಣ ವಿ. ಶೆಟ್ಟಿ ಸ್ವಾಗತಿಸಿ, ಸಮಿತಿಯ ಕಳೆದ 3 ವರ್ಷಗಳ ಸಾಧನೆಯನ್ನು ವಿವರಿಸಿದರು. ಸಮಿತಿಯ ಪ್ರತಿಯೊಬ್ಬ ಸದಸ್ಯರ ಪ್ರಾಮಾಣಿಕ ಸೇವೆಯಿಂದ ಸಿಟಿ ಪ್ರಾದೇಶಿಕ ಸಮಿತಿಯ ಘನೆ, ಗೌರವ ಹೆಚ್ಚಿರುವುದಾಗಿ ತಿಳಿಸಿದರು.

ವಿನೋದಾ ಆರ್‌. ಕೆ. ಚೌಟ ಪ್ರಾರ್ಥಿಸಿದರು. ಸಮಿತಿ ಸಂಚಾಲಕ ಅಶೋಕ್‌ ಪಕ್ಕಳ ಕಾರ್ಯಕ್ರಮ ನಿರೂಪಿಸಿ ದರು. ಸಿಎ ಶಂಕರ ಬಿ. ಶೆಟ್ಟಿ, ಕರ್ನಿರೆ ವಿಶ್ವನಾಥ ಶೆಟ್ಟಿ, ಉಳ್ತೂರು ಮೋಹನ್‌ದಾಸ್‌ ಶೆಟ್ಟಿ, ಪ್ರವೀಣ್‌ ಬಿ. ಶೆಟ್ಟಿ, ಕೃಷ್ಣ ವಿ. ಶೆಟ್ಟಿ, ರತ್ನಾಕರ ಶೆಟ್ಟಿ ಮುಂಡ್ಕೂರು, ಲತಾ ಪಿ. ಶೆಟ್ಟಿ, ಶಿವಪ್ರಸಾದ್‌ ಶೆಟ್ಟಿ, ಸಮಿತಿ ಕಾರ್ಯದರ್ಶಿ ನಲ್ಯಗುತ್ತು ಪ್ರಕಾಶ್‌ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೆ. ಶೆಟ್ಟಿ ವೇದಿಕೆಯಲ್ಲಿದ್ದರು.
ವರದಿ : ಈಶ್ವರ ಎಂ. ಐಲ್
ಚಿತ್ರ : ದಿನೇಶ್ ಕುಲಾಲ್

Write A Comment