ಮುಂಬೈ

ಬೊಕ್ಕಪಟ್ಣ ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆಯಲ್ಲಿ ಆಯುಧ ಪೂಜೆ; ಆಧುನಿಕ ಯುಗದಲ್ಲೂ ಆಯುಧ ಪೂಜೆಗೆ ಮಹತ್ವವಿದೆ: ಬಿ. ಸುರೇಶ್ ಕುಲಾಲ್

Pinterest LinkedIn Tumblr

defhtkuk

ಮಂಗಳೂರು : ಬೊಕ್ಕಪಟ್ಣ ಬೋಳೂರು ಪರಿಸರದಲ್ಲಿ ಕಳೆದ 43 ವರ್ಷಗಳಿಂದ ಯುವಕರಿಗೆ ತಾಲೀಮು, ಕುಸ್ತಿ ಮತ್ತು ವ್ಯಾಯಾಮ ಶಿಕ್ಷಣ ನೀಡುತ್ತಿರುವ ಶ್ರೀ ರಾಮಾಂಜನೇಯ ತಾಲೀಮು ಮತ್ತು ವ್ಯಾಯಾಮ ಶಾಲೆ (ಮಲ್ಟಿ ಜಿಂ) ಯಲ್ಲಿ ದಸರಾ ಪೂಜೆಯ ನಿಮಿತ್ತ ಅ. 3 ರಂದು ಆಯುಧ ಪೂಜೆಯನ್ನು ಪುರೋಹಿತ ಆನಂತ ಕೃಷ್ಣ ಭಟ್ ನೆರವೇರಿಸಿದರು.

ಪೂಜೆಯ ಬಳಿಕ ನಡೆದ ಸಭಾಕಾರ್ಯಕ್ರವನ್ನು ಮಂಗಳೂರಿನ ಮೊನಾರ್ಕ್ ಗ್ರೂಪ್ ನ ಬಾಬಾ ಅಲಂಗಾರ್ ದೀಪ ಬೆಳಗಿಸಿ ಉದ್ಘಾಟಿಸಿದರು. ಕಾವೂರು ಟ್ರೇಡರ್ಸ್ ನ ಮಾಲಕ ಸುರೇಶ್ ಕುಲಾಲ್ ಅಧ್ಯಕ್ಷತೆಯನ್ನು ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕುಲಾಲ ಪ್ರತಿಷ್ಠಾನದ ಅಧ್ಯಕ್ಷ ಬಿ. ಸುರೇಶ್ ಕುಲಾಲ್ ಮಾತನಾಡುತ್ತಾ “ಇಂದಿನ ಯುವಕರಿಗೆ ಆಧುನಿಕ ಸೌಲಭ್ಯವುಳ್ಳ ಜಿಮ್ ಗಳ ಅಗತ್ಯವಿದೆ. ವ್ಯಾಯಾಮ ಶಾಲೆಯ ಮೇಲ್ಮಹಡಿಯಲ್ಲಿ ಸುಸಜ್ಜಿತ ಮಲ್ಟಿ ಜಿಮ್ ನ ಅಗತ್ಯವಿದೆ. ಇದನ್ನು ಶ್ರೀಘ್ರದಲ್ಲೇ ಕಾರ್ಯಗತ ಮಾಡಬೇಕು. ಆಧುನಿಕ ಯುಗದಲ್ಲೂ ಆಯುಧ ಪೂಜೆಗೆ ಮಹತ್ವನೀಡಿ ಧರ್ಮ ಜಾಗೃತಿಯ ಕಾರ್ಯ ನಡೆಸುತ್ತಿರುವುದು ಪ್ರಶಂಸನೀಯ’ ಎಂದರು.

ವೇದಿಕೆಯಲ್ಲಿ ಸಂಸ್ಥಾಪಕ ವ್ಯಾಯಾಮ ಮತ್ತು ತಾಲೀಮು ಶಿಕ್ಷಕ ಮಾಸ್ಟರ್ ಬಿ. ಸೀತಾರಾಮ ಕುಲಾಲ್, ತಾಲೀಮು ಶಿಕ್ಷಕ ಗೋಪಾಲ ಬರ್ಕೆ, ಅಧ್ಯಕ್ಷ ಬಿ. ಪ್ರೇಮಾನಂದ ಕುಲಾಲ್, ಉಪಾಧ್ಯಕ್ಷ ತಾರನಾಥ ಪುತ್ರನ್, ಗೌರವ ಅಧ್ಯಕ್ಷ ಮೋಹನ್ ಬರ್ಕೆ, ದೇಹದಾರ್ಡ್ಯ ಶಿಕ್ಷಕರಾದ ಮಾ. ರಾಂ ಕೃಷ್ಣ ಕುದ್ರೋಳಿ, ಮಾ. ಸಂತೋಷ್ ಬೋಳೂರು, ಜತೆ ಕೋಶಾಧಿಕಾರಿ ಕುದ್ರೋಳಿ ಭಾಸ್ಕರ ಅಮೀನ್, ಜತೆ ಕಾರ್ಯದರ್ಶಿ ರಾಮಚಂದ್ರ ಸಾಲ್ಯಾನ್ ಉಪಸ್ಥಿತರಿದ್ದರು.

ಗೌ. ಕಾರ್ಯದರ್ಶಿ ಬಿ. ನಾಗೇಶ್ ಕುಲಾಲ್ ಸ್ವಾಗತಿಸಿದರು. ಧನುಶ್ ರಾಜ್ ಕುಲಾಲ್ ವರದಿ ವಾಚಿಸಿದರು. ಅಧ್ಯಕ್ಷ ಪ್ರೇಮಾನಂದ ಕುಲಾಲ್ ಅತಿಥಿಗಳನ್ನು ಗೌರವಿಸಿದರು. ಕಾರ್ಯಕ್ರಮವನ್ನು ಉಪಾಧ್ಯಕ್ಷ ತಾರನಾಥ ಪುತ್ರನ್ ನಿರೂಪಿಸಿ ಅಭಾರ ಮನ್ನಿಸಿದರು.

ಬಿ. ರಾಜೀವ ಕುಲಾಲ್, ನವೀನ ಕುಲಾಲ್ ಕಾವೂರು, ರಾಜೇಶ್ ಎನ್. ಕುಲಾಲ್ ಕಾವೂರು ಮತ್ತಿತರ ಸದಸ್ಯರು ಸಹಕರಿಸಿದರು.

Write A Comment