
ಕಾಪು, ಸೆ. 29 : ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮಾಜಿ ಗೌರವಾಧ್ಯಕ್ಷ, ಭಾರತ್ ಕೋ. ಅಪರೇಟಿವ್ ಬ್ಯಾಂಕ್ (ಮುಂಬಯಿ) ನಿ. ಇದರ ಮಾಜಿ ನಿರ್ದೇಶಕ, ಕಟಪಾಡಿ ವಿಶ್ವನಾಥ ಕ್ಷೇತ್ರದ ಮುಂಬಯಿ ಉಪ ಸಮಿತಿಯ ಗೌರವಾಧ್ಯಕ್ಷ ಏಣಗುಡ್ಡೆ ನಾಗೇಶ್ (87) ಅವರು ಸೆ. 29ರಂದು ಮುಂಬಯಿ ಕುರ್ಲಾ ಪೂರ್ವದ ಸಿಂಕ್ಯಾಂಪ್‌ನ ನಿವಾಸದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಕಟಪಾಡಿ ವಿಶ್ವನಾಥ ಕ್ಷೇತ್ರದ ಪ್ರತಿಷ್ಠಾ (1964) ಸಂದರ್ಭದಲ್ಲಿ ಮುಂಬಯಿ ಸಮಿತಿಯ ಅಧ್ಯಕ್ಷರಾಗಿದ್ದ ಇವರು 2014ರಲ್ಲಿ ಕ್ಷೇತ್ರದ ಸಮಗ್ರ ಪುನರ್ ನಿರ್ಮಾಣದ ವೇಳೆಯೂ ಮುಂಬಯಿ ಸಮಿತಿಯ ಅಧ್ಯಕ್ಷರಾಗಿದ್ದು ಕೊಂಡು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದರು. ಪ್ರಸ್ತುತ ಮುಂಬಯಿ ಉಪ ಸಮಿತಿಯ ಗೌರವಾಧ್ಯಕ್ಷರಾಗಿ ಮಾರ್ಗದರ್ಶನ ನೀಡುತ್ತಿದ್ದರು.
ಶ್ರೀ ಗೋಕರ್ಣನಾಥ ದೇವಸ್ಥಾನ ಕುದ್ರೋಳಿ ಇದರ ಜೀರ್ಣೋದ್ಧಾರ ಸಮಿತಿ, ಲಲಿತಾ ರುಕ್ಕರಾಮ ಸಾಲ್ಯಾನ್ ಶೈಕ್ಷಣಿಕ ಸಂಸ್ಥೆಯಲ್ಲೂ ಅಹರ್ನಿಶಿಯಾಗಿ ಸೇವೆ ಸಲ್ಲಿಸಿರುವರು. ಸಮಾಜದ ಅಭಿವೃದ್ಧಿಯ ಬಗ್ಗೆ ಅತೀವ ಸಾಮಾಜಿಕ ಕಾಳಜಿ ಹೊಂದಿದ್ದ ಅವರು ಬಿಲ್ಲವರ ಅಸೋಸಿಯೇಶನ್‌ನಲ್ಲಿ ಸುಮಾರು ಆರು ದಶಕಗಳ ಅನೇಕ ಹುದ್ದೆಗಳೊಂದಿಗೆ ಸಕ್ರಿಯ ಸೇವೆ ಸಲ್ಲಿಸಿದ್ದರು.
ಸಂತಾಪ : ಬಿಲ್ಲವ ಸಮಾಜದ ಮುಂದಾಳು ವೈ. ನಾಗೇಶ್ ಅವರ ನಿಧನಕ್ಕೆ ಮಾಜಿ ಕೇಂದ್ರ ಸಚಿವ ಬಿ. ಜನಾರ್ಧನ ಪೂಜಾರಿ, ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಸಚಿವ ವಸಂತ ವಿ. ಸಾಲ್ಯಾನ್, ಮುಂಬಯಿ ಬಿಲ್ಲವರ ಅಸೋಸಿಯೇಶನ್/ಕಟಪಾಡಿ ವಿಶ್ವನಾಥ ಕ್ಷೇತ್ರದ ಗೌರವಾಧ್ಯಕ್ಷ ಜಯ ಸಿ. ಸುವರ್ಣ, ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್, ಮಾಜಿ ಅಧ್ಯಕ್ಷ ಎಲ್. ವಿ. ಅಮೀನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೆ. ಕೋಟ್ಯಾನ್, ಭಾರತ್ ಬ್ಯಾಂಕ್‌ನ ಉಪ ಕಾರ್ಯಧ್ಯಕ್ಷೆ ನ್ಯಾ ರೋಹಿಣಿ ಜೆ. ಸಾಲ್ಯಾನ್, ಮಾಜಿ ಕಾರ್ಯಾಧ್ಯಕ್ಷ ವಿ. ಆರ್. ಕೋಟ್ಯಾನ್, ಆಡಳಿತ ನಿರ್ದೇಶಕ ಸಿ. ಆರ್. ಮೂಲ್ಕಿ, ಕಟಪಾಡಿ ವಿಶ್ವನಾಥ ಕ್ಷೇತ್ರದ ಕ್ಷೇತಆರಡಳಿತ ಮಂಡಳಿಯ ಅಧ್ಯಕ್ಷ ಅಶೋಕ್ ಸುವರ್ಣ, ಗೌ ಪ್ರ ಕಾರ್ಯದರ್ಶಿ ಹರೀಶ್ಚಂದ್ರ ಅಮೀನ್, ಉಪಾಧ್ಯಕ್ಷರಾದ ರತ್ನಾಕರ ಅಂಚನ್, ರಾಘು ಕೋಟ್ಯಾನ್, ಕೋಶಾಕಾರಿ ಮಾಧವ ಅಂಚನ್, ಮಾಜಿ ಅಧ್ಯಕ್ಷ ದಯಾನಂದ ಬಂಗೇರ, ಮಾಜಿ ಗೌ ಪ್ರ ಕಾರ್ಯದರ್ಶಿಗಳಾದ ದೇವಪ್ಪ ಪೂಜಾರಿ, ಕಟಪಾಡಿ ಶಂಕರ ಪೂಜಾರಿ, ಜಗನ್ನಾಥ ಕೋಟೆ, ಸೇವಾದಳದ ದಳಪತಿ ರಮೇಶ್ ಕೋಟ್ಯಾನ್, ಮಹಿಳಾ ಬಳಗದ ಸಂಚಾಲಕಿ ಸುಲೋಚನಾ ಪಾಲನ್, ಮುಂಬಯಿ ಉಪ ಸಮಿತಿಯ ಅಧ್ಯಕ್ಷ ದಾಮೋದರ್ ಕುಂದರ್, ಕಾರ್ಯದರ್ಶಿ ಶ್ರೆಧರ್ ಬಂಗೇರ ಸೇರಿದಂತೆ ಕ್ಷೇತ್ರಾಡಳಿತ ಮಂಡಳಿ ಮತ್ತು ನವೀಕರಣ ಸಮಿತಿಯ ಪದಾಕಾರಿಗಳು, ಸದಸ್ಯರು ಸಂತಾಪ ಸೂಚಿಸಿದ್ದಾರೆ.