ಕರ್ನಾಟಕ

ಭಜರಂಗಿ-2 ಸಿನಿಮಾ ಪ್ರಿ ರಿಲೀಸ್’ನಲ್ಲಿ ಸ್ಟಾರ್ ನಟರ ಸಮಾಗಮ: ಶುಭಕೋರಿದ ಯಶ್, ಪುನೀತ್..!

Pinterest LinkedIn Tumblr

ಬೆಂಗಳೂರು: ಹರ್ಷ ನಿರ್ದೇಶನದ ಶಿವರಾಜ್ ಕುಮಾರ್ ನಟನೆಯ ಭಜರಂಗಿ-2 ಸಿನಿಮಾ ಅಕ್ಟೋಬರ್ 29 ರಂದು ತೆರೆ ಕಾಣಲಿದೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದ್ದು ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ಪ್ರಿ ರಿಲೀಸ್ ಇವೆಂಟ್ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಯಶ್ ಮತ್ತು ಪುನೀತ್ ರಾಜ್ ಕುಮಾರ್ ಭಾಗವಹಿಸಿ ಶುಭ ಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ಜಯಣ್ಣ ಬೋಗಣ್ಣ ದಿಲ್‌ದಾರ್ ವ್ಯಕ್ತಿ. ಪಾತ್ರ ಪೋಷಣೆಯನ್ನು ನಿರ್ದೆಶಕ ಹರ್ಷ ಅವರಿಂದ ಕಲಿಯಬೇಕು. ಸಿನಿಮಾದ‌ ಎಲ್ಲ ವರ್ಗದಲ್ಲೂ ಅದ್ಭುತ ಕೆಲಸ ಆಗಿದೆ. ಶ್ರುತಿ ಭಾರತದ ಫೈನೆಸ್ಟ್ ನಟಿ ಅಂದ್ರೆ ತಪ್ಪಾಗಲ್ಲ. ನಾವೆಲ್ಲಾ ಎಂಜಾಯ್ ಮಾಡಿಕೊಂಡು ಭಜರಂಗಿ ಸಿನಿಮಾ ಮಾಡಿದ್ದೇನೆ. ಅವರಿಗೆಲ್ಲಾ ಬೋರ್ ಆಗದ ಹಾಗೆ ಸಿನಿಮಾ‌ ಸೆಟ್ ನಲ್ಲಿ ನಾನಿದ್ದೆ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೇಳಿದರು.

ಜಯಣ್ಣ ಬೋಗೇಂದ್ರ ಸಿನಿಮಾ ನಿರ್ಮಾಣ ಮಾಡಿದ್ದು, ಅವರೇ ವಿತರಕರಾಗಿದ್ದಾರೆ. ಕರ್ನಾಟಕದಾದ್ಯಂತ 350 ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.

ಭಜರಂಗಿ 2 ರ ತೆಲುಗು ಆವೃತ್ತಿಯೂ ಸುಮಾರು 350-400 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದರ ಹೊರತಾಗಿ ಕನ್ನಡ ಮತ್ತು ತೆಲುಗು ಆವೃತ್ತಿಗಳು ಭಾರತದಾದ್ಯಂತ ಸುಮಾರು 200 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿವೆ. ಸರಿಸುಮಾರು 1000 ಸ್ಕ್ರೀನ್‌ಗಳಲ್ಲಿ ನಮ್ಮ ಚಿತ್ರವನ್ನು ಬಿಡುಗಡೆ ಮಾಡಲು ನೋಡುತ್ತಿದ್ದೇವೆ ಎಂದು ಜಯಣ್ಣ ಹೇಳಿದರು.

ಭಜರಂಗಿ-2 2021 ರಲ್ಲಿನ ಬಹು ನಿರೀಕ್ಷಿತ ಚಲನಚಿತ್ರಗಳಲ್ಲಿ ಒಂದಾಗಿದೆ. ಮಾತ್ರವಲ್ಲದೆ ಇದು ನಟ-ನಿರ್ದೇಶಕರ ಮೂರನೇ ಸಹಯೋಗವಾಗಿದೆ. ಇದು ಜಯಣ್ಣ ಫಿಲ್ಮ್ಸ್ ಜೊತೆಗಿನ ಶಿವರಾಜಕುಮಾರ್ ಅವರ ನಾಲ್ಕನೇ ಪ್ರಾಜೆಕ್ಟ್ ಆಗಿದೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಜೆ. ಸ್ವಾಮಿ ಅವರ ಛಾಯಾಗ್ರಹಣವಿದೆ. ಭಜರಂಗಿ 2 ಸಿನಿಮಾದಲ್ಲಿ ಭಾವನಾ, ಶ್ರುತಿ ಮತ್ತು ಲೋಕಿ ನಟಿಸಿದ್ದಾರೆ.

 

Comments are closed.