ಕರ್ನಾಟಕ

ಬಿಜೆಪಿ ಸರಕಾರ ಕಟುಕರ ಸರಕಾರ, ನಿಮ್ಮ ನಾಟಕ ನಿಲ್ಲಿಸಿ: ಸಿದ್ದರಾಮಯ್ಯ ಆಕ್ರೋಷ

Pinterest LinkedIn Tumblr

ಬೆಂಗಳೂರು: ಸರಕಾರವು ಅನುಗ್ರಹ ಯೋಜನೆಯನ್ನು ವಾಪಾಸ್ ಜಾರಿ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಶಿವಮೊಗ್ಗದಲ್ಲಿ ಚಿಕ್ಕೋಡಿ ತಾಲೂಕಿನ ಕುರಿಗಾಯಿ ನಾಯಿಂಗ್ಲಾಜ್ ವಾಸಪ್ಪ ಮಾನಿಯವರಿಗೆ ಸೇರಿದ ಸುಮಾರು 40 ಕುರಿಗಳು ಸಾವನ್ನಪ್ಪಿವೆ. ಇಂತಹವರಿಗೆ ನೆರವಾಗಲೆಂದೇ ನಾನು ಜಾರಿಗೆ ತಂದಿದ್ದ ‘ಅನುಗ್ರಹ’ ಯೋಜನೆಯನ್ನು ಸ್ಥಗಿತಗೊಳಿಸಿರುವ ಬಿಜೆಪಿ ಸರ್ಕಾರವನ್ನು ಕಟುಕರ ಸರ್ಕಾರ ಎನ್ನದೆ ಬೇರೆ ಹೇಗೆ ಕರೆಯೋಣ? ಎಂದಿದ್ದಾರೆ.

ಕುರಿಗಾಯಿಗಳ ಓಟಿನ ಬೇಟೆಗಾಗಿ‌ ಕಂಬಳಿ ಹೊದ್ದು ಚುನಾವಣಾ ಪ್ರಚಾರ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಈ ನಾಟಕ ನಿಲ್ಲಿಸಿ.ನಿಮಗೆ ಕುರಿಗಾಯಿಗಳ ಬಗ್ಗೆ ಕಾಳಜಿ ಇದ್ದರೆ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ‘ಅನುಗ್ರಹ’ ಯೋಜನೆಗೆ ಹಣ ಒದಗಿಸಿ, ಪಶುಗಳನ್ನು‌‌ ಕಳೆದುಕೊಂಡ ರೈತರಿಗೆ ಪರಿಹಾರ ನೀಡಿ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಆಗ್ರಹಿಸಿದರು.

Comments are closed.