ಕರಾವಳಿ

ಮಂಗಳೂರಿನಲ್ಲಿ ಮೀನುಗಾರರ ಬಲೆಗೆ ಸಿಕ್ಕ ಸಾವಿರ ಕೆ.ಜಿ. ತೂಕದ ಬೃಹತ್ ಮೀನು ಮರಳಿ ಕಡಲಿಗೆ‌‌‌..!

Pinterest LinkedIn Tumblr

ಮಂಗಳೂರು: ಅರಬ್ಬಿ ಸಮುದ್ರದಲ್ಲಿ ಬೃಹತ್ ಗಾತ್ರದ ಮೀನೊಂದು ಮೀನುಗಾರರ ಬಲೆಗೆ ಬಿದ್ದಿದೆ. ಮಂಗಳೂರು ಮೀನುಗಾರಿಕಾ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸಾಗರ್ ಹೆಸರಿನ ಬೋಟ್ ನ ಮೀನುಗಾರರಿಗೆ ಈ ಮೀನು ದೊರಕಿದೆ.

ಶಾರ್ಕ್ ಜಾತಿಗೆ ಸೇರಿದ ಮೀನು ಇದಾಗಿದ್ದು ಈ ಮೀನು ಹಿಡಿಯುವುದು ನಿಷೇಧವಿದೆ. ಹೀಗಾಗಿ ಬಲೆಗೆ ಸಿಕ್ಕ‌ ಮೀನನ್ನು ಮೀನುಗಾರರು ಬಲೆಯಿಂದ ಬಿಡಿಸಿ ವಾಪಾಸು ಸಮುದ್ರಕ್ಕೆ ಬಿಟ್ಟಿದ್ದಾರೆ.

ಅಂದಾಜು 1,500 ಕ್ಕೂ ಅಧಿಕ ಕೆ.ಜಿ ತೂಕದ ಮೀನು ಇದಾಗಿದ್ದು ಮೀನು ಸೆರೆ ಸಿಕ್ಕ ದೃಶ್ಯವನ್ನು ಬೋಟ್ ನಲ್ಲಿದ್ದ ಮೀನುಗಾರರು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ.

Comments are closed.